Fact check: ಪಂಜಾಬ್‌ನ ಸಂಭಾವ್ಯ CM ಭಗವಂತ್ ಮಾನ್ ಪಾನಮತ್ತರಾಗಿ ತೂರಾಡುತ್ತಿರುವ ವಿಡಿಯೊ! ವಾಸ್ತವವೇನು?

ಪಂಜಾಬ್ ವಿಧಾನಸಭೆ ಚುನಾವಣೆಯ ಫಲಿತಾಂಶ ಕಳೆದವಾರ ಪ್ರಕಟವಾಗಿದ್ದು, ಆಮ್ ಆದ್ಮಿ ಪಕ್ಷ ಭರ್ಜರಿ ಬಹುಮತ ಗಳಿಸಿದೆ. 117 ಸ್ಥಾನಗಳ ಪಂಜಾಬ್‌ನಲ್ಲಿ ಎಎಪಿ 92, ಕಾಂಗ್ರೆಸ್ 18, ಅಕಾಲಿದಳ 3 ಮತ್ತು ಬಿಜೆಪಿ 2 ಸ್ಥಾನಗಳನ್ನು ಪಡೆದಿವೆ. ಪಂಜಾಬ್ ನ ನೂತನ ಸಿಎಂ ಆಗಿ ಭಗವಂತ್ ಮಾನ್ ಪ್ರಮಾಣ ವಚನ ಸ್ವೀಕಾರ ಸಮಾರಂಭದ ದಿನಾಂಕವೂ ನಿಗದಿಯಾಗಿದೆ.

ಇದರ ನಡುವೆ ಪಂಜಾಬ್‌ನ ಸಂಭಾವ್ಯ ಮುಖ್ಯಮಂತ್ರಿ ಭಗವಂತ್ ಮಾನ್ ಕುಡಿದ ಅಮಲಿನಲ್ಲಿ ಇರುವಂತಹ ವಿಡಿಯೋವೊಂದನ್ನು “ನೋಡಿ ಪಂಜಾಬ್‌ನ ಬಾವಿ ಮುಖ್ಯಮಂತ್ರಿ ಹೇಗೆ ಕುಡಿದು ಅಮಲಿನಲ್ಲಿ ತೇಲಾಡಿತ್ತಿದ್ದಾರೆ” ಎಂದು ಪ್ರತಿಪಾದಿಸಿ ಹಂಚಿಕೊಳ್ಳಲಾಗುತ್ತಿದೆ.  ಈ ವಿಡಿಯೋದ ಹೇಳಿಕೆಯಲ್ಲಿ ಭಗವಂತ್ ಮಾನ್  ಅವರು ಚುನಾವಣಾ ಫಲಿತಾಂಶದ ನಂತರ ಸಂಪೂರ್ಣವಾಗಿ ಕುಡಿದಿದ್ದಾರೆ ಎಂದು ಹೇಳಲಾಗುತ್ತಿದೆ.

ಬಿಜೆಪಿ ಗುಜರಾತ್ ರಾಜ್ಯ ಪ್ರಧಾನ ಕಾರ್ಯದರ್ಶಿ ರತ್ನಾಕರ್ ಈ ವೀಡಿಯೊವನ್ನು ಹಿಂದಿ ಶೀರ್ಷಿಕೆಯೊಂದಿಗೆ ಟ್ವೀಟ್ ಮಾಡಿದ್ದಾರೆ. ” ಪಂಜಾಬ್‌ ಚುನಾವಣೆಯಲ್ಲಿ ಗೆದ್ದ ನಂತರ ನೋಡಿ ಪಂಜಾಬ್‌ನ ಭಾವೀ ಮುಖ್ಯಮಂತ್ರಿಗಳು” ಎಂದು ಬರೆದಿದ್ದಾರೆ.

ಲಖಾನ್ ಎಂಬುವವರು ಕೂಡ ಟ್ವೀಟ್ ಮಾಡಿದ್ದು ಪಂಜಾಬ್‌ನ ಮುಂದಿನ ಮುಖ್ಯಮಂತ್ರಿಯನ್ನು ನೋಡಿ ಎಂದು ತಮ್ಮ ಟ್ವಿಟ್‌ನಲ್ಲಿ ವಿಡಿಯೊವನ್ನು ಹಂಚಿಕೊಂಡಿದ್ದಾರೆ.

ಕುಡುಕ ಭಗವಂತ್ ಮಾನ್ ಪಂಜಾಬ್ ನ ಭಾವಿ ಸಿಎಂ ನೋಡಿ. ಈ ವಿಡಿಯೋ ನಿನ್ನೆಯದ್ದು. ಪಂಜಾಬಿಗೆ ಹೀಗಾಗುತ್ತದೆಯೇ??? ಪ್ರಮಾಣ ವಚನ ಸ್ವೀಕರಿಸುವ ದಿನ ಎಲ್ಲರನ್ನೂ ಆಯುಕ್ತರನ್ನಾಗಿ ಮಾಡುತ್ತಾರಂತೆ ಎಂದು ಫೇಸ್‌ಬುಕ್ ಪೇಜ್‌ನಲ್ಲಿ  ಪೋಸ್ಟ್‌ ಹಾಕಿದ್ದಾರೆ.

ಇದೇ ರೀತಿಯ ಹೇಳಿಕೆಯೊಂದಿಗೆ ಇದನ್ನು ಫೇಸ್‌ಬುಕ್ ಮತ್ತು ಟ್ವಿಟರ್‌ನಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಓದಲು  ಇಲ್ಲಿ ಮತ್ತು ಇಲ್ಲಿ ಕ್ಲಿಕ್ ಮಾಡಿ. ಹಾಗಿದ್ದರೆ ಪಂಜಾಬ್ ಚುಣಾವಣಾ ಫಲಿತಾಂಶದ ನಂತರ ಪಂಜಾಬ್‌ನ ಮುಖ್ಯಮಂತ್ರಿ ಅಭ್ಯರ್ಥಿ ಭಗಂವಂತ್ ಮಾನ್ ಕುಡಿದ ನಶೆಯಲ್ಲಿ ತೂರಾಡಿದ್ದರೆ? ಎಂದು ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆಯನ್ನು ಪರಿಶೀಲಸೋಣ.

ಫ್ಯಾಕ್ಟ್‌ಚೆಕ್:

ಫ್ಯಾಕ್ಟ್ ಚೆಕ್ ಮೂಲಕ ವಿಡಿಯೊ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸಿದಾಗ ಇದು ಸುಳ್ಳು ಎಂದು ತಿಳಿದುಬಂದಿದೆ.  ವೈರಲ್ ವೀಡಿಯೊ 2017 ರಲ್ಲಿ ಮಾಡಿರುವುದಾಗಿ ತಿಳಿದು ಬಂದಿದೆ . ವೈರಲ್ ವೀಡಿಯೊದಿಂದ ವಿಭಿನ್ನ ಕೀಫ್ರೇಮ್‌ಗಳನ್ನು ಬಳಸಿಕೊಂಡು  Google ರಿವರ್ಸ್ ಇಮೇಜ್ ಸರ್ಚ್ ಮಾಡಲಾಗಿದ್ದು. ಇದು 3 ವರ್ಷಗಳ ಹಿಂದಿನ ವೀಡಿಯೊ ವರದಿ ಲಭ್ಯವಾಗಿದೆ. ‘ಭಗವಂತ್‌ ಮಾನ್‌ ಕುಡಿದ ವಿಡಿಯೋ ವೈರಲ್‌’ ಎಂದು ವೀಡಿಯೋ ಶೀರ್ಷಿಕೆಯಲ್ಲಿ ಬರೆಯಲಾಗಿದೆ. ವೀಡಿಯೊದೊಂದಿಗೆ ಹೆಚ್ಚಿನ ಮಾಹಿತಿಯನ್ನು ಉಲ್ಲೇಖಿಸಲಾಗಿಲ್ಲ ಆದರೆ ವೈರಲ್ ವೀಡಿಯೊ ಇತ್ತೀಚಿನದಲ್ಲ ಎಂಬುದು ಸ್ಪಷ್ಟವಾಗಿದೆ.

ವಿಡಿಯೊ ಬಗ್ಗೆ ಮತ್ತಷ್ಟು ಮಾಹಿತಿ ಪಡೆಯಲು ಇನ್ನಷ್ಟು ಸರ್ಚ್ ಮಾಡಿದಾಗ, 09 ಮಾರ್ಚ್ 2017 ರ ಇಂಡಿಯಾ ಟುಡೇ ವರದಿಯಲ್ಲಿ ವೈರಲ್ ವೀಡಿಯೊದ ಫೋಟೊ ಲಭ್ಯವಾಗಿದೆ. ವರದಿಯ ಪ್ರಕಾರ, ಪಂಜಾಬ್‌ನ AAP ನಾಯಕ ಅವರು ಫುಟ್‌ಪಾತ್‌ನಿಂದ ಕೆಳಗಿಳಿದು ತಮ್ಮ ಕಾರಿನೊಳಗೆ ಪ್ರವೇಶಿಸಲು ಪ್ರಯತ್ನಿಸುತ್ತಿರುವಾಗ ಎಡುವುದನ್ನು ವಿಡಿಯೊ ಉಲ್ಲೇಖಿಸಿದೆ.

8 ಮಾರ್ಚ್ 2017 ರಂದು ಟಿವಿ24 ಇಂಡಿಯಾ ಹಂಚಿಕೊಂಡ ವೈರಲ್ ವೀಡಿಯೊವನ್ನು ಸಹ ನಾವು ಕಂಡುಕೊಂಡಿದ್ದೇವೆ. ವೀಡಿಯೊದ ಹೇಳಿಕೆಯಲ್ಲಿ, “ಭಗವಂತ್ ಮಾನ್ ಅವರು ಕುಡಿದಿದ್ದಾರೆ ಎಂದು ಆರೋಪಿಸಲ್ಪಟ್ಟ  ದೃಶ್ಯವನ್ನು ಕ್ಯಾಮರಾದಲ್ಲಿ ಸೆರೆಹಿಡಿಯಲಾಗಿದೆ” ಎಂದು ಹೇಳಿದೆ.

ಭಗವಂತ್‌ ಮಾನ್‌ ಅವರು ಸಾರ್ವಜನಿಕವಾಗಿ ಕಾಣಿಸಿಕೊಳ್ಳುವ ವೇಳೆ ಪಾನಮತ್ತರಾಗಿ ಕಂಡುಬಂದದ್ದು ಇದೇ ಮೊದಲಲ್ಲ. 2015 ರಲ್ಲಿ, ಸಂಸದರಾಗಿದ್ದಾಗ ಭಗವಂತ್ ಮಾನ್ ಅವರನ್ನು ಫರೀದ್‌ಕೋಟ್‌ನ ಹಳ್ಳಿಯಲ್ಲಿ ಕುಡಿದು ಗುರುದ್ವಾರಕ್ಕೆ ಪ್ರವೇಶಿಸಿದ್ದರು ಆ ವೇಳೆ ಅವರನ್ನು ಗುರುದ್ವಾರದಿಂದ ಹೊರಗೆ ಕಳುಹಿಸಲಾಗಿತ್ತು.  2019 ರಲ್ಲಿ, ಭಗವಂತ್ ಮಾನ್ ಅವರು ಸಂಸತ್ತಿನಲ್ಲಿ ಮದ್ಯದ ಅಮಲಿನಲ್ಲಿ ಮಾತನಾಡಿದ್ದರು. ಬಿಜೆಪಿಯು ಭಗವಂತ್ ಮಾನ್ ಅವರ ವರ್ತನೆಯನ್ನು ಖಂಡಿಸಿತ್ತು ಎಂದು ವೀಡಿಯೊ ಕ್ಲಿಪ್ ನಲ್ಲಿ ಹೇಳಲಾಗಿದೆ.. ಆದಾಗ್ಯೂ, ಡಿಸೆಂಬರ್ 2019 ರಲ್ಲಿ ಭಗವಂತ್ ಮಾನ್ ತನ್ನ ತಾಯಿ ಮತ್ತು ಪಂಜಾಬ್ ಜನರ ಮುಂದೆ ತಾನು ಮದ್ಯಪಾನವನ್ನು ಬಿಡುತ್ತೇನೆ ಎಂದು ಪ್ರಮಾಣ ಮಾಡಿದ್ದರು.

ಒಟ್ಟಾರೆಯಾಗಿ ಹೇಳುವುದಾದರೆ ಹಿಂದೆ ಹಲವು ಸಾರ್ವಜನಿಕ ಸಭೆಗಳಲ್ಲಿ ಭಗವಂತ್ ಮಾನ್ ಕುಡಿದ ಸ್ಥಿತಿಯಲ್ಲಿ ಕಂಡುಬಂದಿದ್ದಾರೆ. ಆದರೆ ವೈರಲ್ ಪೋಸ್ಟ್ ಹೇಳುವಂತೆ ವೈರಲ್ ವೀಡಿಯೊ ಇತ್ತೀಚಿನದಲ್ಲ ಎಂಬುದು ಫ್ಯಾಕ್ಟ್‌ಚೆಕ್ ಮೂಲಕ  ಸ್ಪಷ್ಟವಾಗಿದೆ. ಈ ವೀಡಿಯೊ 2017 ರಿಂದ ಸೋಶಿಯಲ್ ಮೀಡಿಯಾಗಳಲ್ಲಿ ಹರಿದಾಡುತ್ತಿದೆ. ಇತ್ತೀಚಿನ ಪಂಜಾಬ್ ಚುನಾವಣೆಗೂ ಇದಕ್ಕೂ ಯಾವುದೇ ಸಂಬಂಧವಿಲ್ಲ. ಆದ್ದರಿಂದ, ವೈರಲ್ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆಯು ತಪ್ಪಾಗಿದೆ.

ಕೃಪೆ: ದಿ ಲಾಜಿಕಲ್ ಇಂಡಿಯನ್


ಇದನ್ನು ಓದಿರಿ: Fact check: ಅರವಿಂದ್ ಕೇಜ್ರಿವಾಲ್ RSS, BJP ಜೊತೆ ನಂಟು ಹೊಂದಿದ್ದಾರೆ ಎಂಬ ಆರೋಪದ ವಾಸ್ತವವೇನು?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights