ಇಲ್ಲಿ ಗುರುವಾರಕ್ಕೊಮ್ಮೆ ಶಾಲಾ ಮಕ್ಕಳು ಪೊಲೀಸ್ ಠಾಣೆಗೆ!! : ಯಾಕೆ ಬರ್ತಾರೆ ಗೊತ್ತಾ!?

ಬಾಗಲಕೋಟೆ ಜಿಲ್ಲೆಯಲ್ಲಿ ಇದೀಗ ಪ್ರತಿ ಗುರುವಾರಕ್ಕೊಮ್ಮೆ ಶಾಲಾ ಮಕ್ಕಳು ಪೊಲೀಸ್ ಠಾಣೆಗೆ ಬರುತ್ತಿದ್ದಾರೆ. ಶಾಲಾ ಮಕ್ಕಳು ಪೊಲೀಸ್ ಠಾಣೆಗೆ ಯಾಕೆ ಬರ್ತಿದ್ದಾರೆ ಅನ್ನುವ ಕುತೂಹಲ ನಿಮಗೂ ಇರಬಹುದಲ್ಲಾ.

ಹೌದು… ಪೊಲೀಸ್ ಇಲಾಖೆ ಜನಸ್ನೇಹಿ, ಸಮಾಜಮುಖಿಯಾಗಲಿ ಎಂದು ತೆರೆದ ಮನೆ ಅನ್ನೋ ಕಾರ್ಯಕ್ರಮ ಜಾರಿಗೆ ತಂದಿದೆ.

ಏನಿದು ತೆರೆದ ಮನೆ!?:
ಶಾಲಾ ಮಕ್ಕಳು ಮುಕ್ತವಾಗಿ ಈ ತೆರೆದ ಮನೆಗೆ ಬರುತ್ತಾರೆ.ತೆರೆದ ಮನೆ ಅಂದರೆ ಪೊಲೀಸ್ ಠಾಣೆ.. ಪೊಲೀಸರು ಎಂದರೆ ಭಯ, ಕಾನೂನು, ಇವೆಲ್ಲ ಸಾಮಾನ್ಯವಾಗಿರುತ್ತೆ.ಆದ್ರೆ ಶಾಲಾ ಮಕ್ಕಳಿಗೂ ಪೊಲೀಸ್ ಠಾಣೆಯಲ್ಲಿ ದೈನಂದಿನ ಕಾರ್ಯ ಏನೇನು ನಡೆಯುತ್ತೆ. ಪೊಲೀಸರು ಹಾಗೂ ಶಾಲಾ ಮಕ್ಕಳ ಮಧ್ಯೆ. ಬಾಂಧವ್ಯ ವೃದ್ಧಿಗೆ.

ಕಾನೂನು ತಿಳುವಳಿಕೆ,ಮಕ್ಕಳ ಸುರಕ್ಷಿತೆ, ರಸ್ತೆ ಸಂಚಾರ ನಿಯಮಾವಳಿ, ಮಕ್ಕಳ ಮೇಲೆ ದೌರ್ಜನ್ಯ ಪ್ರಕರಣ ಸೇರಿದಂತೆ ಮಕ್ಕಳಿಗೆ ಉಪಯುಕ್ತವಾದ ಕಾನೂನಿನ ಬಗ್ಗೆ ತೆರೆದ ಮನೆಯಲ್ಲಿ ಶಾಲಾ ಮಕ್ಕಳಿಗೆ ಅರಿವು ಮೂಡಿಸಲಾಗುತ್ತಿದೆ.ಶಾಲಾ ಹಂತದಲ್ಲೇ ಮಕ್ಕಳಿಗೆ ಕಾನೂನಿನ ಬಗ್ಗೆ ತಿಳುವಳಿಕೆ ನೀಡಿದ್ರೆ ಉತ್ತಮ ನಾಗರಿಕರನ್ನಾಗಿ ಮಾಡಬಹುದು ಅನ್ನೋದು ಪೊಲೀಸ್ ಇಲಾಖೆ ಚಿಂತನೆ.ತೆರೆದ ಮನೆ ಕಾರ್ಯಕ್ರಮ ರಾಜ್ಯದಾದ್ಯಂತ ಜಾರಿಯಲ್ಲಿದ್ದು,ತೆರೆದ ಮನೆಯಲ್ಲಿ ಶಾಲಾಮಕ್ಕಳು ಸಹಿತ ಕಾನೂನು ಬಗ್ಗೆ ತಿಳಿದುಕೊಳ್ಳಲು ಉತ್ಸುಕರಾಗಿರುತ್ತಾರೆ.

ಕಾನೂನು ಪಾಲನೆಯಲ್ಲಿ ನಮ್ಮ ಪಾತ್ರಯೇನು,ಶಾಲಾ ಮಗುವಿನ ಆ ಮೂಲಕ ಕುಟುಂಬಸ್ಥರಿಗೂ ಕಾನೂನಿನ ತಿಳುವಳಿಕೆ ವರ್ಗಾಯಿಸೋದು ಇದರ ಉದ್ದೇಶವಿದೆ.ಇನ್ನು ಪೊಲೀಸರು ಸಮಾಜದ ಒಂದು ಭಾಗ, ಸಮಾಜದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಸಮಾಜದ ಪ್ರತಿಯೊಬ್ಬರದೂ ಕರ್ತವ್ಯ.. ಪೊಲೀಸರು ಸಮಾಜದೊಂದಿಗೆ ಹೇಗಿರಬೇಕು, ನಾಗರಿಕರು ಪೊಲೀಸರೊಂದಿಗೆ ಹೇಗಿರಬೇಕು,ಪರಸ್ಪರ ಬಾಂಧವ್ಯ ಬೆಳೆಸುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ಸಮಾಜಮುಖಿ,ಜನ ಸ್ನೇಹಿಯಾಗುವ ನಿಟ್ಟಿನಲ್ಲಿ ತೆರೆದ ಮನೆ ಸಹಕಾರಿಯಾಗುತ್ತಿದೆ..

ಬಾಗಲಕೋಟೆಯಲ್ಲಿ ತೆರೆದ ಮನೆ ಪರಿಣಾಮಕಾರಿ ಜಾರಿ; ಬಾಗಲಕೋಟೆ ಜಿಲ್ಲೆಯಲ್ಲಿ ತೆರೆದ ಮನೆ ಕಾರ್ಯಕ್ರಮ ಪರಿಣಾಮಕಾರಿಯಾಗಿ ಜಾರಿಗೊಳಿಸಲಾಗುತ್ತಿದೆ.ಕಡ್ಡಾಯವಾಗಿ ಪ್ರತಿ ಪೊಲೀಸ್ ಠಾಣೆಯಲ್ಲಿ ಪ್ರತಿ ಗುರುವಾರ ತೆರೆದ ಮನೆ ಕಾರ್ಯಕ್ರಮ ನಡೆಸುವಂತೆ ಬಾಗಲಕೋಟೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲೋಕೇಶ್ ಜಗಲಾಸರ್ ಕಟ್ಟಪ್ಪಣೆ ಹೊರಡಿಸಿದ್ದಾರೆ.ಅದರ ಪರಿಣಾಮವಾಗಿ ಬಾಗಲಕೋಟೆ ಜಿಲ್ಲೆಯಲ್ಲಿನ ೨೩ಪೊಲೀಸ್ ಠಾಣೆಯಲ್ಲಿ ತೆರೆದ ಮನೆ ಕಾರ್ಯಕ್ರಮ ಪರಿಣಾಮಕಾರಿ ನಡೆಯುತ್ತಿದೆ.

ಇನ್ನು ಈ ಹಿಂದೆ ತೆರೆದ ಬಾಗಿಲು ಎಂದು ಪೊಲೀಸ್ ಠಾಣೆಯಲ್ಲಿ ಕಾರ್ಯಕ್ರಮ ನಡೆಯುತ್ತಿತ್ತು.ದೇವದಾಸಿಯರಿಗಾಗಿ ಕಾನೂನು ಅರಿವು ಕಾರ್ಯಕ್ರಮ ತೆರೆದ ಬಾಗಿಲು ಮೂಲಕ ನಡೆಯುತ್ತಿತ್ತು.ಇದೀಗ ಶಾಲಾ ಮಕ್ಕಳಿಗಾಗಿ ತೆರೆದ ಮನೆ ಕಾರ್ಯಕ್ರಮ ನಡೆಯುತ್ತಿದೆ.. ಜಿಲ್ಲೆಯಲ್ಲಿನ ೨೩ಪೊಲೀಸ್ ಠಾಣಾ ವ್ಯಾಪ್ತಿಯ ಒಂದೊಂದು ಶಾಲಾ ಮಕ್ಕಳು ಪೊಲೀಸ್ ಠಾಣೆಗೆ ಬಂದು ಕಾನೂನು ತಿಳುವಳಿಕೆ ಪಡೆಯುತ್ತಿದ್ದಾರೆ.. ಬಾಗಲಕೋಟೆಯಲ್ಲಿ ಜಿಲ್ಲೆಯಲ್ಲಿ ಪೊಲೀಸ್ ಇಲಾಖೆಯಿಂದ ಶಾಲಾ ಮಕ್ಕಳಿಗಾಗಿ ತೆರೆದ ಮನೆ ಕಾರ್ಯಕ್ರಮ ಪರಿಣಾಮಕಾರಿಯಾಗಿ ನಡೆಯುತ್ತಿರೋದ್ರಿಂದ ಪ್ರಶಂಸೆಗೆ ಕಾರಣವಾಗಿದೆ.

ಪೊಲೀಸ್ ಇಲಾಖೆ ಜನಸ್ನೇಹಿ,ಮಕ್ಕಳ ಸ್ನೇಹಿಯಾಗಲು ತೆರೆದ ಮನೆ ಕಾರ್ಯಕ್ರಮ ಜಿಲ್ಲೆಯಲ್ಲಿ ಪರಿಣಾಮಕಾರಿಯಾಗಿ ಜಾರಿ ಮಾಡಲಾಗಿದೆ.ಶಾಲಾ ಮಕ್ಕಳು,ಹಾಗೂ ಪೊಲೀಸರ ಮಧ್ಯೆ ಬಾಂಧವ್ಯ ವೃದ್ಧಿಯಾಗುವದರೊಂದಿಗೆ ಮಕ್ಕಳು ಕಾನೂನು ತಿಳಿವಳಿಕೆ, ಪೊಲೀಸರ ಕಾರ್ಯನಿರ್ವಹಣೆ ತಿಳಿದುಕೊಳ್ಳಲು ತೆರೆದ ಮನೆ ವೇದಿಕೆಯಾಗಿದೆ-

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights