ಮಂಡ್ಯದಲ್ಲಿ ಪೌರತ್ವ ಕಾಯ್ದೆ ಖಂಡಿಸಿ ಮುಸ್ಲಿಂರಿಂದ ಪ್ರಾರ್ಥನೆ ಪ್ರತಿಭಟನೆ ….
ರಾಜ್ಯದಲ್ಲಿ ಪೌರತ್ವ ಮಸೂದೆಯ ವಿರುದ್ದ ಪ್ರತಿಭಟನೆಯ ಕಾವು ಜೋರಾಗಿದ್ದು, ನೆನ್ನೆ ಮಂಗಳೂರಿನಲ್ಲಿ ನಡೆದ ಪ್ರತಿಭಟನೆಯಲ್ಲಿ ಇಬ್ಬರು ಮುಸ್ಲಿಂರು ಮೃತಪಟ್ಟಿದ್ರು. ಸಕ್ಕರೆನಾಡು ಮಂಡ್ಯದಲ್ಲೂ ಕೂಡ ಇಂದು ಮುಸ್ಲಿಂರು ಪೌರತ್ವ ಕಾಯ್ದೆ ವಿರುದ್ದ ಪ್ರತಿಭಟನೆ ನಡೆಸಲು ಸಿದ್ದತೆ ನಡೆಸಿಕೊಂಡಿದ್ರು. ಆದ್ರೆ ಪೊಲೀಸರು ಪ್ರತಿಭನೆಗೆ ಅವಕಾಶ ನೀಡದ ಕಾರಣ ಈದ್ಗಾ ಮೈದಾನದಲ್ಲೆ ಸಭೆ ನಡೆಸಿ ಶಾಂತಿಯುತ ಪ್ರತಿಭಟನೆ ನಡೆಸಿ ಡಿಸಿಗೆ ಮನವಿ ಸಲ್ಲಿಸಿದ್ರು.


ಹೌದು ! ನೆನ್ನೆ ಪೌರತ್ವ ಕಾಯ್ದೆ ಖಂಡಿಸಿ ನೆನ್ನೆ ದಕ್ಷಿಣ ಕನ್ನಡದಲ್ಲಿ ನಡೆಯತ್ತಿದ್ದ ಪ್ರತಿಭಟನೆಯಲ್ಲಿ ಇಬ್ಬರು ಮುಸ್ಲಿಂ ಯುವಕರು ಸಾವನ್ನಪ್ಪಿದ್ರು.ಪೊಲೀಸರ ಈ ದೌರ್ಜನ್ಯ ಖಂಡಿಸಿ ಮಂಡ್ಯದಲ್ಲಿಂದು ಮುಸ್ಲಿಂ ಸಮುದಾಯದವರು ಬೃಹತ್ ಪ್ರತಿಭಟನೆ ಸಿದ್ದತೆ ನಡೆಸಿಕೊಂಡಿದ್ರು.ಆದ್ರೆ ಪೊಲೀಸರು ನಿಷೇಧಾಜ್ಞೆ ಜಾರಿಯಲ್ಲಿರೋ ಕಾರಣ ಅವಕಾಶ ನೀಡಿರಲ್ಲ ಆದ್ರೆ ಮುಸ್ಲಿಂರು ಪ್ರತಿಭಟನೆ ನಡೆಸದೆ ಪ್ರಾರ್ಥನೆ ಮೂಲಕ ಈದ್ಗಾ ಸ್ಥಳದಲ್ಲಿ ಶಾಂತಿಯುತ ಪ್ರತಿಭಟನೆ ಮಾಡಲು ನಿರ್ಧರಿಸಿದ್ರು. ಈದ್ಗಾ ಮೈದಾನದಲ್ಲಿ ಪ್ರಾರ್ಥನೆಯ ಸಭೆ ಸುದ್ದಿ ತಿಳಿದು ಪೊಲೀಸರು ಮುನ್ನೆಚ್ಚರಿಕೆ ಕ್ರಮವಾಗಿ ಈದ್ಗಾ ಮೈದಾನ ಸೇರಿದಂತೆ ನಗರದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ನಿಯೋಜಿಸಿದ್ರು. ಸಾವಿರಾರು ಜನ ಮುಸ್ಲಿಂರು ಪ್ರಾರ್ಥನ ಸಭೆ ತೋಳಿಗೆ ಕಪ್ಪು ಪಟ್ಟಿ ಧರಿಸಿ ವಿಶೇಷ ಪ್ರಾರ್ಥನೆ ಮೂಲಕ ಕಾಯ್ದೆ ವಿರುದ್ಧ ತಮ್ಮ ಆಕ್ರೋಶ ಹೊರ ಹಾಕಿದ್ರು.

ಇನ್ನು ಮಂಡ್ಯದ ಹೊಳಲು ವೃತ್ತದ ಈದ್ಗಾ ಮೈದಾನದಲ್ಲಿ ಜಿಲ್ಲೆಯ ವಿವಿಧೆಡೆಯಿಂದ ಸಾವಿರಾರು ಮುಸ್ಲಿಂ ಜನರು ಜಮಾವಣೆಯಾದ್ರು. ಪೊಲೀಸರು ಮುಂಜಾಗ್ರತಾ ಕ್ರಮವಾಗಿ ಹೆಚ್ಚಿನ ಪೊಲೀಸ್ ಬಂದೋಬಸ್ತ್ ನಿಯೋಜನೆ ಮಾಡಿಕೊಂಡ್ರು ಭದ್ರತೆ ಕೈಗೊಂಡ್ರು.ಸಭೆಯಲ್ಲಿ ಪ್ರಾರ್ಥನೆ ಸಲ್ಲಿಸಿದ ಸಾವಿರಾರು ಮುಸ್ಲಿಂರು ಕೇಂದ್ರದ ಪೌರತ್ವ ದ ವಿರುದ್ದ ಧಿಕ್ಕಾರ ಕೂಗಿ ಆಕ್ರೋಶ ಹೊರ ಹಾಕಿದ್ರು. ಪ್ರತಿಭಟನಾ ಮೆರವಣಿಗೆಗೆ ಅವಕಾಶ ನೀಡದ ಕಾರಣಕ್ಕೆ ಖುದ್ದು ಡಿಸಿ ಡಾ.ವೆಂಕಟೇಶ್ ಈದ್ಗಾ ಮೈದಾನಕ್ಕೆ ಭೇಟಿ ನೀಡಿ ಮುಸ್ಲಿಂರಿಂದ ರಾಷ್ಟ್ರಪತಿಗೆ ಮನವಿ ಸಲ್ಲಿಸಲು ಮನವಿ ಪತ್ರ ಸ್ವೀಕರಿಸಿ ನಿಮ್ಮ ಬೇಡಿಕೆಯ ಮನವಿಯನ್ನು ರಾಷ್ಟ್ರಪತಿಗಳಿಗೆ ಕಳಸಿ ನ್ಯಾಯ ದೊರಕಿಸಿ ಕೊಡುವ ಭರವಸೆ ನೀಡಿದ್ರು.

ಒಟ್ನಲ್ಲಿ ಪೌರತ್ವ ಕಾಯ್ದೆ ಕಿಚ್ಚು ದಿನೇ ದಿನೇ ರಾಜ್ಯದಲ್ಲೆಡೆ ವ್ಯಾಪಿಸುತ್ತಿದ್ದು, ಸಕ್ಕರೆನಾಡಿಗೂ ಹಬ್ಬುವ ಸಾಧ್ಯತೆ ಇದೆ. ಪೊಲೀಸರು ಮೂರು ದಿನ ನಿಷೇಧಾಜ್ಞೆ ಜಾರಿ ಮಾಡಿರುವ ಕಾರಣ ಸ್ವಲ್ಪ ನಿಯಂತ್ರಣದಲ್ಲಿದ್ರು ನಿಷೇಧಾಜ್ಞೆ ತೆರವು ಬಳಿಕ ಮಂಡ್ಯದಲ್ಲೂ ಪೌರತ್ವದ ಕಿಚ್ಚು ಕಾವೇರುವ ಸಾದ್ಯತೆ ಇದೆ.

