Fact check: ಅರವಿಂದ್ ಕೇಜ್ರಿವಾಲ್ RSS, BJP ಜೊತೆ ನಂಟು ಹೊಂದಿದ್ದಾರೆ ಎಂಬ ಆರೋಪದ ವಾಸ್ತವವೇನು?

ಅರವಿಂದ್ ಕೇಜ್ರಿವಾಲ್ ಅವರು ತಾನು ಜನಸಂಘದ ಕುಟುಂಬ, ತಾನು ಹುಟ್ಟು ಬಿಜೆಪಿಯವನು ಎಂದು ಹೇಳಿದ್ದಾರೆ ಎಂಬ 7 ಸೆಕೆಂಡುಗಳ ವೀಡಿಯೊ ಕ್ಲಿಪ್ ಅನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದೆ. ಪಂಜಾಬ್ ವಿಧಾನಸಭಾ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷ ಜಯಭೇರಿ ಬಾರಿಸಿದ ನಂತರ ಈ ವಿಡಿಯೋವನ್ನು ಕಾಂಗ್ರೆಸ್ ಸದಸ್ಯೆ ಮಿನಿ ನಾಗ್ರೆ ಟ್ವೀಟ್ ಮಾಡಿದ್ದಾರೆ. ಇದನ್ನು ಅನೇಕರು ಹಂಚಿಕೊಳ್ಳುವ ಮೂಲಕ ಅರವಿಂದ್ ಕೇಜ್ರಿವಾಲ್ ಆರೆಸ್ಸೆಸ್ ಜೊತೆ ನಂಟು ಹೊಂದಿದ್ದಾರೆ ಎಂದು ಪ್ರತಿಪಾದಿಸಲಾಗುತ್ತಿದೆ.

. (ಟ್ವೀಟ್ ಮಾಡಿದ ಲಿಂಕ್ ಅನ್ನು ಆರ್ಕೈವ್ ಮಾಡಲಾಗಿದೆ)

https://twitter.com/MiniforIYC/status/1502354420876468225?ref_src=twsrc%5Etfw%7Ctwcamp%5Etweetembed%7Ctwterm%5E1502354420876468225%7Ctwgr%5E%7Ctwcon%5Es1_&ref_url=https%3A%2F%2Fwww.altnews.in%2Fhindi%2Fno-arvind-kejriwal-didnt-admit-of-having-family-ties-with-rss-clipped-video-viral%2F

ಟ್ವಿಟರ್ ಬಳಕೆದಾರ ಅಜಯ್ 2020 ರ ದೆಹಲಿ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಈ ವೀಡಿಯೊವನ್ನು ಟ್ವೀಟ್ ಮಾಡಿದ್ದರು. ಮತ್ತು  ಅರವಿಂದ್ ಕೇಜ್ರಿವಾಲ್ ಆರ್‌ಎಸ್‌ಎಸ್ ಜೊತೆಗಿನ ಸಂಬಂಧ ಇದೆ ಎಂಬುದಕ್ಕೆ ಪುರಾವೆ ಏನಾದರೂ ಬೇಕೇ ಹೇಳಿ? ಎಂದು ಪ್ರಶ್ನಿಸಿದ್ದರು.

https://twitter.com/SpeakingTigers/status/1225835478093422594?ref_src=twsrc%5Etfw%7Ctwcamp%5Etweetembed%7Ctwterm%5E1225835478093422594%7Ctwgr%5E%7Ctwcon%5Es1_&ref_url=https%3A%2F%2Fwww.altnews.in%2Fhindi%2Fno-arvind-kejriwal-didnt-admit-of-having-family-ties-with-rss-clipped-video-viral%2F

ಫ್ಯಾಕ್ಟ್‌ಚೆಕ್:

ಪೋಸ್ಟ್‌ನಲ್ಲಿ ವೈರಲ್ ಆದ ಸ್ಕ್ರೀನ್‌ಶಾಟ್‌ನ ಗೂಗಲ್ ರಿವರ್ಸ್ ಇಮೇಜ್ ಸರ್ಚ್ ಮಾಡಲಾಗಿದ್ದು ವೈರಲ್ ವಿಡಿಯೊವನ್ನು ಅರವಿಂದ್ ಕೇಜ್ರಿವಾಲ್ ಅವರು NDTV ಗೆ ನೀಡಿದ ಸಂದರ್ಶನದಿಂದ ತೆಗೆದುಕೊಳ್ಳಲಾಗಿದೆ ಎಂದು ಕಂಡುಬಂದಿದೆ. ಫೆಬ್ರವರಿ 2020 ರ ಈ ಸಂದರ್ಶನದಲ್ಲಿ ಅರವಿಂದ್ ಕೇಜ್ರಿವಾಲ್ ಮಾತನಾಡಿರುವ ವಿಡಿಯೊ ಇದಾಗಿದೆ.

ಅರವಿಂದ್ ಕೇಜ್ರಿವಾಲ್ ಅವರ ಸಂದರ್ಶನದ ವಿಡಿಯೋ 7 ನಿಮಿಷ 15 ಸೆಕೆಂಡ್‌ಗಳ ನಂತರದಲ್ಲಿ ಬರುವ ಅವರ ಮಾತುಗಳನ್ನು ತೆಗೆದುಕೊಂಡು ವೈರಲ್ ಮಾಡಲಾಗಿದೆ. ಅದರಲ್ಲಿ “ನಾನು ಒಂದು ಟಿವಿ ಚಾನೆಲ್‌ನಲ್ಲಿ ವ್ಯಕ್ತಿಯೊಬ್ಬರು ಮಾತನಾಡುತ್ತಿದ್ದಿದ್ದನ್ನು ನೋಡಿದೆ. ಅದರಲ್ಲಿ ಅವರು ಹೀಗೆ ಹೇಳುತ್ತಾರೆ  ನಾನು ಬಿಜೆಪಿ ಕಾರ್ಯಕರ್ತ, ನಮ್ಮದು ಜನಸಂಘದ  ಕುಟುಂಬ, ನಮ್ಮ ಮನೆಯವರೆಲ್ಲರು ಬಿಜೆಪಿಯವರು ನನ್ನ ತಂದೆ ಜನಸಂಘದಲ್ಲಿದ್ದರು. ತುರ್ತು ಪರಿಸ್ಥಿತಿಯಲ್ಲಿ ಜೈಲಿಗೆ ಹೋದರು. ಆದರೆ ಈ ಬಾರಿ ನಾನು ಕೇಜ್ರಿವಾಲ್‌ಗೆ ಮತ ಹಾಕುತ್ತೇನೆ ಎಂದು ಹೇಳಿದರು. ಏಕೆ ಎಂದು ಕೇಳಿದಾಗ? ನನ್ನ ಮಗು ಸರ್ಕಾರಿ ಶಾಲೆಯಲ್ಲಿ ಓದುತ್ತದೆ ಮತ್ತು ಸರ್ಕಾರಿ ಶಾಲೆಗಳ ಸ್ಥಿತಿ ಬದಲಾಗುತ್ತಿದೆ, ಅವರು ನನ್ನ ಮಗುವಿನ ಭವಿಷ್ಯವನ್ನುಉಜ್ವಲಗೊಳಿಸುತ್ತಾರೆ. ಕೆಲಸ ಮಾಡಿ ಮತ ಕೇಳುವ ಏಕೈಕ ವ್ಯಕ್ತಿ ಅವರು ಹಾಗಾಗಿ ನಾನು ಅವರನ್ನು ಬೆಂಬಲಿಸುತ್ತೇನೆ ಎಂದು ಅವರು ಹೇಳಿದರು” ಎಂದು ಕೇಜ್ರಿವಾಲ್ ಹೇಳಿದ್ದಾರೆ.

ಒಟ್ಟಾರೆ, ಅರವಿಂದ್ ಕೇಜ್ರಿವಾಲ್ ಅವರ ಸಂದರ್ಶನದ ವಿಡಿಯೋದಲ್ಲಿ ತಮಗೆ ಬೇಕಾದ ಸಾಲುಗಳನ್ನು ತೆಗೆದುಕೊಂಡು ಎಡಿಟ್ ಮಾಡಿ  ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗಿದೆ. ವಿಡಿಯೋದಲ್ಲಿ ಅರವಿಂದ್ ಕೇಜ್ರಿವಾಲ್ ತಮ್ಮ ಬೆಂಬಲಿಗರನ್ನು ಉಲ್ಲೇಖಿಸಿ ಈ ಹೇಳಿಕೆ ನೀಡಿದ್ದರು. ಆದರೆ ವಿಡಿಯೊವನ್ನು ಎಡಿಟ್ ಮಾಡಿ ಆರ್‌ಎಸ್‌ಎಸ್‌ನೊಂದಿಗೆ ಕುಟುಂಬ ಸಂಪರ್ಕ ಹೊಂದಿರುವುದಾಗಿ ಸ್ವತಃ ಕೇಜ್ರಿವಾಲ್ ಒಪ್ಪಿಕೊಂಡಿದ್ದಾರೆ ಎಂದು ಸುಳ್ಳು ಹೇಳಲು 7 ಸೆಕೆಂಡ್‌ಗಳ ವಿಡಿಯೊ ವನ್ನು ಸಾಮಾಜಿಕ ಮಾಧ್ಯಮದಲ್ಲಿ ಪ್ರಸಾರ ಮಾಡಲಾಗಿದೆ. ಆದರೆ,  ಬಿಜೆಪಿ ಬೆಂಬಲಿಗರೊಬ್ಬರು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರೀವಾಲ್ ಅವರನ್ನು ಕುರಿತು ತಮ್ಮ ಕೆಲಸದ ಆಧಾರದ ಮೇಲೆ ಎಎಪಿಗೆ ಮತ ಹಾಕುವ ಬಗ್ಗೆ ಮಾತನಾಡುತ್ತಿದ್ದಾರೆ ಎಂದು ಹೇಳಿದ್ದಾರೆ. ಹಾಗಾಗಿ ಪೊಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ಕೃಪೆ: ಫ್ಯಾಕ್ಟ್‌ಲಿ


ಇದನ್ನು ಓದಿರಿ: Fact check: ಹಿಂದೂ ದೇವಾಲಯದ ಅರ್ಚಕರನ್ನು ಕ್ರಿಶ್ಚಿಯನ್‌ ಧರ್ಮಕ್ಕೆ ಮತಾಂತರ ಆಗುವಂತೆ ಒತ್ತಾಯಿಸಿದ್ದು ನಿಜವೆ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights