‘ತಲೈವಿ’ ಸಿನಿಮಾ ತೆರೆಗೆ ವಿಘ್ನ : ಅಸಮಾಧನದ ನಡುವೆ ಜಯಲಲಿತಾ ಸಮಾಧಿಗೆ ಕಂಗನಾ ಭೇಟಿ!
‘ತಲೈವಿ’ ತಮಿಳುನಾಡಿನ ದಿವಂಗತ ಮಾಜಿ ಮುಖ್ಯಮಂತ್ರಿ ಜೆ ಜಯಲಲಿತಾ ಅವರ ಜೀವನಾಧರಿತ ಚಿತ್ರ. ಈ ಚಿತ್ರದಲ್ಲಿ ಬಾಲಿವುಡ್ ನಟಿ ಕಂಗನಾ ರಣಾವತ್ ಜಯಲಲಿತಾ ಪಾತ್ರವನ್ನು ನಿರ್ವಹಿಸಿದ್ದಾರೆ. ಇದೇ ಸೆಪ್ಟಂಬರ್ 10ರಂದು ತಲೈವಿ ಚಿತ್ರ ತೆರೆ ಕಾಣಲಿದ್ದು ಭಾರೀ ನಿರೀಕ್ಷೆ ಹುಟ್ಟಿಸಿದೆ.
ವಿವಾದದ ಮೂಲಕ ಸದಾ ಸುದ್ದಿಯಲ್ಲಿರುವ ನಟಿ ಕಂಗನಾ ರಣಾವತ್ ಇಂದು ಮಾಜಿ ಸಿಎಂ ಜಯಲಲಿತಾ ಸಮಾಧಿಗೆ ಭೇಟಿ ನೀಡಿ ಗೌರವ ಸಲ್ಲಿಸಿದ್ದಾರೆ. ಸೆಪ್ಟಂಬರ್ 10 ರಂದು ತೆರೆಕಾಣಲಿರುವ ತಲೈವಿ ಸಿನಿಮಾ ತಮಿಳು, ತೆಲುಗು ಮತ್ತು ಹಿಂದೆ ಭಾಷೆಯಲ್ಲಿ ಬಿಡುಗಡೆಯಾಗಲಿದೆ.
ಚಿತ್ರಕ್ಕೆ ಕೆ.ವಿ ವಿಜಯೇಂದ್ರ ಪ್ರಸಾದ್ ಚಿತ್ರಕಥೆ ರಚಿಸಿದ್ದಾರೆ. ಈ ಸಿನಿಮಾದಲ್ಲಿ ಎಂಜಿಆರ್ ಪಾತ್ರದಲ್ಲಿ ನಟ ಅರವಿಂದ್ ಸ್ವಾಮಿ ಅಭಿನಯಿಸಿದ್ದಾರೆ. ಈಗಾಗಲೇ ತಲೈವಿ ಸಿನಿಮಾದ ಪೋಸ್ಟರ್, ಟೀಸರ್ ಹಾಗೂ ಹಾಡಿನ ಸಣ್ಣ ದೃಶ್ಯಗಳು ಬಿಡುಗಡೆಯಾಗಿದ್ದು, ಸಿನಿಮಾದ ಬಗ್ಗೆ ಸಾಕಷ್ಟು ನಿರೀಕ್ಷೆ ಮೂಡಿಸಿದೆ. ಕಂಗನಾ ರಣಾವತ್ ಸಿನಿಮಾ ಪ್ರಚಾರದಲ್ಲಿ ಬ್ಯೂಸಿಯಾಗಿದ್ದಾರೆ.
ಆದರೆ ನಿರೀಕ್ಷೆ ಹುಟ್ಟುಹಾಕಿದ್ದ ತಮಿಳುನಾಡು ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರ ಜೀವನವನ್ನಾಧರಿಸಿದ ತಲೈವಿ ಚಿತ್ರದ ಬಿಡುಗಡೆಗೆ ವಿಘ್ನ ಎದುರಾಗಿದೆ. ದೇಶದ ಅತಿದೊಡ್ಡ ಮಲ್ಟಿಪ್ಲೆಕ್ಸ್ ಸಂಸ್ಥೆ ‘ತಲೈವಿ’ ಸಿನಿಮಾ ಪ್ರದರ್ಶಿಸಲು ಹಿಂದೇಟು ಹಾಕಿದೆ. ಇದಕ್ಕಾಗಿ ನಟಿ ಕಂಗನಾ ರಣಾವತ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ದೊಡ್ಡ ದೊಡ್ಡ ಸ್ಟಾರ್ ನತರ ಸಿನಿಮಾಗಳಿಗಾದರೆ ಎಲ್ಲಾ ನಿಯಮಗಳನ್ನು ಮುರಿದು ಅವರ ಸಿನಿಮಾಗಳನ್ನು ಪ್ರದರ್ಶನ ಮಾಡುತ್ತಾರೆ. ನನ್ನ ಸಿನಿಮಾಗೆ ಯಾಕೆ ಈ ನಿರ್ಬಂಧ ಎಂದು ಕಂಗನಾ ಪ್ರಶ್ನೆ ಮಾಡಿದ್ದಾರೆ.
ಒಟ್ಟಾರೆ ಅಸಮಾಧಾನ, ವಿಘ್ನಗಳ ನಡುವೆಯೂ ತಲೈವಿ ಸಿನಿಮಾ ಅಭಿಮಾನಿಗಳಲ್ಲಿ ಭಾರೀ ನಿರೀಕ್ಷೆಯನ್ನು ಹುಟ್ಟುಹಾಕಿದೆ.

