ಕೊರೊನಾ ಸೋಂಕಿತರ ಮನರಂಜನೆಗಾಗಿ ನೃತ್ಯ ಮಾಡಿದ ಜೆಡಿಎಸ್‌ ಶಾಸಕ: ವಿಡಿಯೋ ವೈರಲ್‌

ಕೊರೊನಾ ಸೋಂಕಿತರ ಬೇಸರವನ್ನು ತಪ್ಪಿಸುವುದಕ್ಕಾಗಿ ಮಳವಳ್ಳಿಯ ಕೋವಿಡ್‌ ಕೇರ್‌ ಸೆಂಟರ್‌ನಲ್ಲಿ ಅಲ್ಲಿಯ ಶಾಸಕ ಡಾ.ಕೆ.ಅನ್ನದಾನಿ ಅವರು ನೃತ್ಯ ಮಾಡಿ ರಂಜಿಸಿದ್ದಾರೆ. ಅವರ ನೃತ್ಯದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದ್ದು, ಭಾರೀ ಮೆಚ್ಚುಗೆ ಪಡೆದುಕೊಳ್ಳುತ್ತಿದೆ.

ಮಳವಳ್ಳಿ ಕ್ಷೇತ್ರದ ಜೆಡಿಎಸ್ ಶಾಸಕ ಡಾ.ಕೆ.ಅನ್ನದಾನಿ ಕೋವಿಡ್ ಸೆಂಟರ್‌ನಲ್ಲಿ ಹಾಡು ಹೇಳಿ, ನೃತ್ಯ ಮಾಡಿ‌ ಸೋಂಕಿತರಿಗೆ ಮನರಂಜನೆ ನೀಡಿದ್ದಾರೆ.

ಮಳವಳ್ಳಿ ಪಟ್ಟಣದ ಕೆಎಸ್‌ಆರ್‌ಟಿಸಿ ತರಬೇತಿ‌ ಕೇಂದ್ರದಲ್ಲಿ ಸ್ಥಾಪಿಸಿರುವ ಕೋವಿಡ್ ಕೇರ್ ಸೆಂಟರ್‌ನಲ್ಲಿ ಡಾ.ಕೆ.ಅನ್ನದಾನಿ ಮಾಸ್ಕ್ ಧರಿಸಿಕೊಂಡು ಹಾಡಿ ನೃತ್ಯ ಮಾಡಿ ರಂಜಿಸಿ ಸೋಂಕಿತರ ಯೋಗ ಕ್ಷೇಮ‌ ವಿಚಾರಿಸಿ ಬೇಗನೆ ಗುಣಮುಖರಾಗುವಂತೆ ಹಾರೈಸಿದ್ದಾರೆ‌.

ಶಾಸಕರ ಈ ಕಾರ್ಯಕ್ಕೆ ಸೋಂಕಿತರು‌ ಮೆಚ್ಚುಗೆ ವ್ಯಕ್ತಪಡಿಸುವುದರ ಜತೆಗೆ ಶಾಸಕರ ನೃತ್ಯಕ್ಕೆ ಶಿಳ್ಳೆ ಹಾಕುತ್ತಾ ಜೈಕಾರ ಕೂಗಿ ಮತ್ತಷ್ಟು ಹುರಿದುಂಬಿಸಿದ್ದಾರೆ. ಶಾಸಕರ ನೃತ್ಯ ಕಂಡು ಸೋಂಕಿತರೂ ಹೆಜ್ಜೆ ಹಾಕಿದ್ದು ವಿಶೇಷವಾಗಿತ್ತು.

Read Also: 24 ಗಂಟೆಗಳಲ್ಲಿ ತೀವ್ರಗೊಳ್ಳಲಿರುವ ಟೌಕ್ಟೇ ಚಂಡಮಾರುತ : 5 ರಾಜ್ಯಗಳಲ್ಲಿ ಆತಂಕ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights