ರಾಜ್ಯದ ಜಿಲ್ಲೆಗಳಲ್ಲಿ ಕೊರೊನಾ ಅಟ್ಟಹಾಸ : ಬಳ್ಳಾರಿಯಲ್ಲಿ ಬೆಚ್ಚಿ ಬೀಳಿಸುವ ಮಹಾ ಸುದ್ದಿ!
ರಾಜ್ಯದ ರಾಜಧಾನಿ ಅಲ್ಲದೇ ಜಿಲ್ಲೆಗಳಲ್ಲಿಯೋ ಕೊರೊನಾ ಅಟ್ಟಹಾಸ ಮೆರೆಯುತ್ತಿದ್ದು ಪ್ರತಿನಿತ್ಯ ಸೋಂಕಿತರ ಸಂಖ್ಯೆ ಜಿಲ್ಲೆಗಳಲ್ಲಿಯೂ ಹೆಚ್ಚಾಗುತ್ತಿದೆ. ಬಳ್ಳಾರಿ ಜಿಲ್ಲೆಯಲ್ಲಿ ಕೊರೊನಾ ಅಬ್ಬರ ಹೆಚ್ಚಾಗುತ್ತಿದೆ.
ಹೌದು…. ಇಂದು ಜಿಲ್ಲಾಡಳಿತ ಕೊಟ್ಟ ಮಾಹಿತಿ ಬಳ್ಳಾರಿ ಜನತೆಯನ್ನು ಬೆಚ್ಚಿ ಬೀಳಿಸಿದೆ. ನೂರರಲ್ಲಿ 60 ಜನರಿಗೆ ಸೋಂಕು ಕಾಣಿಸಿಕೊಳ್ಳುತ್ತಿದೆ ಎನ್ನುವ ಭಯಾನಕ ಮಾಹಿತಿ ಜಿಲ್ಲಾಡಳಿತ ನೀಡಿದೆ.
ಇಷ್ಟು ದಿನ ಶೇ.11 ರಷ್ಟಿದ್ದ ಸೋಂಕಿತರ ಸಂಖ್ಯೆ ಸದ್ಯ ಶೇ.50 ರಷ್ಟು ದಾಟುತ್ತಿದೆ ಎನ್ನುವ ಭಯಾನಕ ಸತ್ಯವನ್ನು ಜಿಲ್ಲಾಡಳಿತ ಬಿಚ್ಚಿಟ್ಟಿದೆ. ಇಲ್ಲಿವರೆಗೂ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಮಾತ್ರ ತನ್ನ ಅಟ್ಟಹಾಸ ಮೆರೆಯುತ್ತಿದ್ದ ಕೊರೊನಾ ಸದ್ಯ ಜಿಲ್ಲೆಗಳಲ್ಲೂ ತನ್ನ ಅರ್ಭಟ ಹೆಚ್ಚಿಸುತ್ತಿದೆ.
ಇದರಿಂದಾಗಿ ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆಯಲ್ಲೂ ಭಾರೀ ಏರಿಕೆಯಾಗುತ್ತಿದೆ. ನೋಡನೋಡುತ್ತಿದ್ದಂತೆ ಚೆನ್ನಾಗಿದ್ದವರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಅರಾಮಾಗಿದ್ದವರು ಹಾಸಿಗೆ ಹಿಡಿದಿದ್ದಾರೆ. ವಯಸ್ಸಾದವರು ಮಕ್ಕಳ ಸ್ಥಿತಿ ಹೇಳೋ ಹಾಗೇ ಇಲ್ಲ. ಭಯದಲ್ಲೇ ಕಾಲ ಕಳೆಯುವಂತ ಸ್ಥಿತಿ ನಿರ್ಮಾಣವಾಗಿಬಿಟ್ಟಿದೆ.
ಆಸ್ಪತ್ರೆಗಳಲ್ಲಿ ಬೆಡ್ ಗಳು ಖಾಲಿ ಇಲ್ಲ, ಒಂದು ವೇಳೆ ಬೆಡ್ ಸಿಕ್ಕರೂ ಆಕ್ಸಿಜನ್, ವೆಂಟಿಲೇಟರ್ ಸಿಗೋದು ಗ್ಯಾರೆಂಟಿನೇ ಇಲ್ಲ. ತುರ್ತು ಸಂದರ್ಭದಲ್ಲಿ ಪ್ರಾಣ ಬಿಡಬೇಕೇ ಹೊರತು ಎಷ್ಟೇ ದುಡ್ಡು ಕೊಡುತ್ತೇನೆ ಅಂತ ಅಂಗಲಾಚಿದರೂ ಐಸಿಯು, ಆಕ್ಸಿಜನ್, ವೆಂಟಿಲೇಟರ್ ಸಿಗೋದು ಕಷ್ಟ ಇದೆ. ಹೀಗಾಗಿ ಜನ ಎಷ್ಟೇ ಜಾಗರೂಕರಾಗಿದ್ದರೂ ಜೀವ ಉಳಿಸಿಕೊಳ್ಳೋದು ಹೇಗಪ್ಪಾ ಅನ್ನೋ ದುಸ್ಥಿತಿಗೆ ಬಂದು ಬಿಟ್ಟಿದೆ.
ಒಟ್ಟಿನಲ್ಲಿ ಪ್ರಾಣ ಉಳಿಸಿಕೊಳ್ಳೋಕೆ ರಾಜಧಾನಿ ಬಿಟ್ಟು ಜಿಲ್ಲೆಗಳತ್ತ ಹೆಚ್ಚೆ ಹಾಕುತ್ತಿರುವ ಕೊರೊನಾ ಬಗ್ಗೆ ಜಾಗರೂಕರಾಗಿರುವುದೊಂದೇ ಮಾರ್ಗವಾಗಿದೆ.

