ಹಾವೇರಿಯಲ್ಲಿ ಕೊರೊನಾ ಸೋಂಕಿತ ನೇಣು ಹಾಕಿಕೊಂಡು ಆತ್ಮಹತ್ಯೆ!

70 ವರ್ಷದ ಕೋವಿಡ್ -19 ಸೋಂಕಿತನೋರ್ವ ಹಾವೇರಿಯಲ್ಲಿನ ಆಸ್ಪತ್ರೆ ವಾರ್ಡ್‌ನಲ್ಲಿ ನೇಣಿಗೆ ಶರಣಾಗಿದ್ದಾರೆ. ಹಾವೇರಿಯಲ್ಲಿರುವ ಜಿಲ್ಲಾ ಆಸ್ಪತ್ರೆಯಲ್ಲಿ ವೈರಸ್ ರೋಗಿಗಳ ವಿಶೇಷ ವಾರ್ಡ್‌ನಲ್ಲಿ ಕೋವಿಡ್ -19 ರೋಗಿಯು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ರಾಣೆಬೆನ್ನೂರಿನ ಲಮಾನಿ ಬುಡಕಟ್ಟಿನ ವ್ಯಕ್ತಿಗೆ ಮೇ 3 ರಂದು ಕೊರೊನಾ ಸೋಮಕು ದೃಢವಾಗಿತ್ತು. ಹೀಗಾಗಿ ಕೊರೊನಾ ರೋಗ ಲಕ್ಷಣಗಳಿರುವ ಅವರನ್ನು ಮೇ 5 ರಂದು ಹಾವೇರಿ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಆದರೆ ಕೊರೊನಾ ಭಯದಿಂದಾಗಿ ಸೋಂಕಿತ ಶುಕ್ರವಾರ ವಾರ್ಡ್‌ನ ಬಾಗಿಲಿನ ಬಳಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ ಪೊಲೀಸರು ವಾರ್ಡ್‌ನಲ್ಲಿ ಉಳಿದವರೆಲ್ಲರೂ ನಿದ್ರೆಗೆ ಜಾರಿದ ನಂತರ ಆ ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದರು.

“ಮೃತ ವ್ಯಕ್ತಿಗೆ ಯಾವುದೇ ತೊಂದರೆಗಳಿಲ್ಲ. ಅವರಿಗೆ ಸರಿಯಾದ ಚಿಕಿತ್ಸೆ ಮತ್ತು ಆರೈಕೆ ನೀಡಲಾಯಿತು. ಅವರು ನಿರಾಶೆಗೊಂಡಿರಬೇಕು” ಎಂದು ಅಧಿಕಾರಿ ಹೇಳಿದರು.

ಈ ವಾರದ ಆರಂಭದಲ್ಲಿ ಮಧ್ಯಪ್ರದೇಶದ ಭೋಪಾಲ್‌ನಲ್ಲಿ 50 ವರ್ಷದ ಕೋವಿಡ್ -19 ರೋಗಿಯು ಆತ್ಮಹತ್ಯೆ ಮಾಡಿಕೊಂಡಿದ್ದನು. ಸೆಹೋರ್ ಜಿಲ್ಲೆಯ ರೆಹತಿ ನಿವಾಸಿ ಹಮೀಡಿಯಾ ಆಸ್ಪತ್ರೆಯ ಆರನೇ ಮಹಡಿಯಿಂದ ಹಾರಿ ಸ್ಥಳದಲ್ಲೇ ಸಾವನ್ನಪ್ಪಿದ್ದನು.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights