ಅಂತ್ಯಕ್ರಿಯೆಗೆ ಕೆಲವೇ ನಿಮಿಷಗಳ ಮೊದಲು ಎಚ್ಚರಗೊಂಡ ಕೋವಿಡ್ ಸೋಂಕಿತ ಮಹಿಳೆ!

ಅಂತ್ಯಕ್ರಿಯೆಗೆ ಕೆಲವೇ ನಿಮಿಷಗಳ ಮೊದಲು 76 ವರ್ಷದ ಕೋವಿಡ್ ಸೊಂಕಿತೆ ಎಚ್ಚರಗೊಂಡ ವಿಲಕ್ಷಣ ಘಟನೆ ಬಾರಾಮತಿಯಲ್ಲಿ ನಡೆದಿದೆ.

ಬಾರಾಮತಿಯ ಮುಧಲೆ ಗ್ರಾಮದ ಶಕುಂತಲಾ ಗೈಕ್ವಾಡ್ ಎಂದು ಗುರುತಿಸಲ್ಪಟ್ಟ ಮಹಿಳೆ ಕೆಲವು ದಿನಗಳ ಹಿಂದೆ ಕೋವಿಡ್ -19 ಸೋಂಕಿಗೆ ಒಳಗಾಗಿದ್ದರು. ಹೀಗಾಗಿ ಆಕೆ ಮನೆಯಲ್ಲಿ ಪ್ರತ್ಯೇಕವಾಗಿದ್ದಳು. ವೃದ್ಧಾಪ್ಯದಿಂದಾಗಿ ಆಕೆಯ ಸ್ಥಿತಿ ಹದಗೆಟ್ಟಿದೆ. ಹೀಗಾಗು ಕುಟುಂಬ ಆಕೆಯನ್ನು ಬಾರಾಮತಿಯ ಆಸ್ಪತ್ರೆಗೆ ಸ್ಥಳಾಂತರಿಸಲು ನಿರ್ಧರಿಸಿದೆ. ಮೇ 10 ರಂದು ವೃದ್ಧ ಮಹಿಳೆಯನ್ನು ಖಾಸಗಿ ವಾಹನದಲ್ಲಿ ಬಾರಾಮತಿಗೆ ಕರೆದೊಯ್ಯಲಾಯಿತು. ಆಸ್ಪತ್ರೆಯ ಬಳಿ ಆಕೆಗಾಗಿ ಬೆಡ್ ವ್ಯವಸ್ಥೆ ಮಾಡುವುದರಲ್ಲಿ ಕುಟುಂಬ ಪ್ರಯತ್ನಿಸುತ್ತಿರುವಾಗ ಮಹಿಳೆ ಪ್ರಜ್ಞೆ ತಪ್ಪಿದ್ದಾಳೆ. ಆಕೆಯ ಅಂಗಾಂಗಗಳು ಚಲನೆ ಇಲ್ಲದನ್ನು ಗಮನಿಸಿದ ಕುಟುಂಬಸ್ಥರು ಆಕೆ ಸಾವನ್ನಪ್ಪಿದ್ದಾಳೆಂದು ಭಾವಿಸಿದೆ. ಆಸ್ಪತ್ರೆಯಿಂದಲೇ ಅವರು ತಮ್ಮ ಸಂಬಂಧಿಕರಿಗೆ ಕೊನೆಯ ವಿಧಿಗಳ ಬಗ್ಗೆ ಮಾಹಿತಿ ನೀಡಿದರು.

ಕುಟುಂಬ ಸದಸ್ಯರು ಆಕೆಯನ್ನು ಮನೆಗೆ ಕರೆದುಕೊಂಡು ಹೋಗಿ ಶವ ಸಂಸ್ಕಾರಕ್ಕೆ ಸಿದ್ಧತೆ ಆರಂಭಿಸಿದೆ. ಆಕೆಯನ್ನು ಕಳೆದುಕೊಂಡ ಸಂಬಂಧಿಕರು ಶೋಕಿಸುತ್ತಿದ್ದಂತೆ ಇದ್ದಕ್ಕಿದ್ದಂತೆ, ಮಹಿಳೆ ಅಳಲು ಪ್ರಾರಂಭಿಸಿದಳು ಮತ್ತು ನಂತರ ಕಣ್ಣು ತೆರೆದಳು. ಆಘಾತಕ್ಕೊಳಗಾದ ಆಕೆಯ ಕುಟುಂಬ ಆಕೆಯನ್ನು ಆಸ್ಪತ್ರೆಗೆ ಕರೆದೊಯ್ಯಿತು.

ಹೆಚ್ಚಿನ ಚಿಕಿತ್ಸೆಗಾಗಿ ಮಹಿಳೆಯನ್ನು ಬಾರಾಮತಿಯ ಸಿಲ್ವರ್ ಜುಬಿಲಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಸಿಲ್ವರ್ ಜುಬಿಲಿ ಆಸ್ಪತ್ರೆಯ ಸಂಸ್ಥಾಪಕ ಡಾ.ಸದಾನಂದ್ ಕೇಲ್ ತಿಳಿಸಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights