Fact check: ಮನ ಕಲಕುವ ಮಕ್ಕಳ ಕಣ್ಣೀರನ ಈ ವಿಡಿಯೋ ರಷ್ಯಾ – ಉಕ್ರೇನ್ ಯುದ್ದಕ್ಕೆ ಸಂಬಂಧಿಸಿಲ್ಲ!

ರಷ್ಯಾ-ಉಕ್ರೇನ್ ಬಿಕ್ಕಟ್ಟಿಗೆ ಸಂಬಂಧಿಸಿದ ಹ್ಯಾಶ್‌ಟ್ಯಾಗ್‌ಗಳೊಂದಿಗೆ ಇಬ್ಬರು ಮಕ್ಕಳ ಹೃದಯವಿದ್ರಾವಕ ವೀಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗಿದೆ. ವೀಡಿಯೊದಲ್ಲಿನ ಹೇಳಿಕೆಯ ಪ್ರಕಾರ, ಇಬ್ಬರೂ ಮಕ್ಕಳನ್ನು ಅವರ ಕುಟುಂಬದ ಬಗ್ಗೆ ಕೇಳಿದಾಗ ಯುದ್ದದಲ್ಲಿ ಅವರು ತಮ್ಮ ಕುಟುಂಬವನ್ನು ಕಳೆದುಕೊಂಡಿದ್ದೇವೆ ಎಂದು ಹೇಳಿದರು. ಊಟ ಸಿಗುತ್ತಿದೆಯೇ ಎಂದು ಕೇಳಿದಾಗ ಬಾಲಕಿ ಅಳಲು ತೋಡಿಕೊಂಡಿದ್ದಾಳೆ. ಯಾಕೆ ಜಾಕೆಟ್ ಇಲ್ಲ ಎಂದು ಕೇಳಿದಾಗ ಬಾಲಕನೂ ಕಣ್ಣೀರಿಟ್ಟಿದ್ದಾನೆ. ಇನ್ನು ಮುಂದೆ ಅವನು ಕುಟುಂಬದಿಂದ  ಏನನ್ನು ಪಡೆಯಲು ಸಾಧ್ಯವಿಲ್ಲ” ಎಂದು ವಿಡಿಯೊದಲ್ಲಿ ಹೇಳಲಾಗಿದೆ. ಈ ವಿಡಿಯೊ ಉಕ್ರೇನ್ ಮೇಲೆ ರಷ್ಯಾ ಸಾರಿರುವ ಯುದ್ದದ ಪರಿಣಾಮ ಎಂದು ಪ್ರತಿಪಾದಿಸಲಾಗುತ್ತಿದೆ.

ಒಂದೇ ರೀತಿಯ ಪೋಸ್ಟ್‌ಗಳ ಆರ್ಕೈವ್ ಮಾಡಿದ ಆವೃತ್ತಿಗಳನ್ನು ಇಲ್ಲಿ, ಇಲ್ಲಿ ಮತ್ತು ಇಲ್ಲಿ ನೋಡಬಹುದು.

ಈಗಾಗಲೆ ಉಕ್ರೇನ್ ತನ್ನ ನಿಲುವನ್ನು ಬದಲಿಸಿ ರಷ್ಯಾ ಹೇಳಿರುವ ಷರತ್ತುಗಳ್ನು ಒಪ್ಪಿ ಮಾತುಕತೆಗೆ ಮುಂದಾಗಿರುವುದರಿಂದ ಕದನ ವಿರಾಮ ಘೋಷಣೆಯಾಗಿದೆ. ಹಾಗಾಗಿ ಈ ವಿಡಿಯೋದಲ್ಲಿ ಮಾಡಲಾಗಿರುವ ಪ್ರತಿಪಾದನೆಯನ್ನು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್:

ವೀಡಿಯೊದ ಸ್ಕ್ರೀನ್‌ಶಾಟ್ ಸಹಾಯದಿಂದ ಗೂಗಲ್ ರಿವರ್ಸ್ ಇಮೇಜ್ ಸರ್ಚ್ ಮಾಡಲಾಗಿದ್ದು, ಅದೇ ರೀತಿಯ ಹಲವಾರು ವಿಡಿಯೋಗಳು 2017 ರಲ್ಲಿ YouTube ಚಾನಲ್‌ಗಳಲ್ಲಿ ಅಪ್‌ಲೋಡ್ ಆಗಿರುವುದು ಕಂಡುಬಂದಿದೆ.  4 ನಿಮಿಷದ ಅವಧಿಯ ವಿಡಿಯೊವೊಂದು ಲಭ್ಯವಾಗಿದ್ದು ಅದೊಂದು ಸಾಕ್ಷ್ಯಚಿತ್ರ ಎಂದು ತಿಳಿದು ಬಂದಿದೆ. ಅದರ ಹೆಸರು “Malak: The Girl Who Stumbled Out of a War Zone and Stole Our Hearts,” ಎಂದಾಗಿದೆ. Preemptive Love ಎಂಬ ಸಂಸ್ಥೆ ಈ ವಿಡಿಯೋವನ್ನು ತನ್ನ ಯೂಟ್ಯೂಬ್ ಚಾನೆಲ್‌ನಲ್ಲಿ ಅಪ್‌ಲೋಡ್ ಮಾಡಿದೆ.

ಚಾನೆಲ್ ಅಪ್‌ಲೋಡ್ ಮಾಡಿದ ವಿಡಿಯೊದ ಪ್ರಕಾರ, ಈ ವೀಡಿಯೊದಲ್ಲಿರುವ ಹುಡುಗಿ ಹೆಸರು ಮಲಕ್, ಐಸಿಸ್ ಜೊತೆಗಿನ ಯುದ್ಧದ ಸಮಯದಲ್ಲಿ ಇರಾಕ್‌ನ ಫಲ್ಲುಜಾದಿಂದ ತನ್ನ ಕುಟುಂಬದವರಿಂದ ದೂರವಾಗಿರುತ್ತಾಳೆ . ಆಕೆಯ ಪೋಷಕರು ಯುದ್ಧದಲ್ಲಿ ಸಾವಿಗೀಡಾಗಿರುತ್ತಾರೆ. ಮಲಕ್ ನ  ವಿಡಿಯೊವನ್ನು 2016 ರಲ್ಲಿ ಚಿತ್ರೀಕರಿಸಲಾಯಿತು, ಅವಳು ಯುದ್ಧ ಪ್ರದೇಶದಿಂದ ತಪ್ಪಿಸಿಕೊಂಡು ಫಲ್ಲುಜಾದ ಹೊರಗಿನ ಮರುಭೂಮಿಯ ಶಿಬಿರಕ್ಕೆ ಸೇರಿಕೊಂಡಿರುತ್ತಾಳೆ.

Preemptive Love ಸಂಸ್ಥೆಯು ಅಪ್‌ಲೋಡ್ ಮಾಡಿದ ಸಾಕ್ಷ್ಯಚಿತ್ರವು ವೈರಲ್ ಆದ ಬಳಿಕ ವಿಡಿಯೊದಲ್ಲಿರುವ ಹುಡುಗಿ ಮಲಕ್ ತನ್ನ ಅಜ್ಜಿಯರೊಂದಿಗೆ ಹೊಸ ಮನೆಯಲ್ಲಿ ನೆಲೆಸಿದ್ದಾಳೆ ಎಂದು ವಿಡಿಯೊದಲ್ಲಿ ಹೇಳಲಾಗಿದೆ.

ಮಕ್ಕಳ ಸುಸ್ಥಿರ ಅಭಿವೃದ್ಧಿ ಗುರಿಗಳನ್ನು ಬೆಂಬಲಿಸಲು UNICEF ನ ಡಿಜಿಟಲ್ ಕಲ್ಪನೆಗಳ ವೇದಿಕೆಯಾದ ಗ್ಲೋಬಲ್ ಡೆವಲಪ್‌ಮೆಂಟ್ ಕಾಮನ್ಸ್‌ನ ವೆಬ್‌ಸೈಟ್‌ನಲ್ಲಿ ಈ ವೀಡಿಯೊವನ್ನು ಅಪ್‌ಲೋಡ್ ಮಾಡಲಾಗಿದೆ.Preemptive Love ಪ್ರಕಟಿಸಿದ ಬ್ಲಾಗ್‌ಗಳಲ್ಲಿಯೂ ಹುಡುಗಿ ಮಲಕ್‌ನ ಕಥೆಯ ವಿಡಿಯೊ ಲಭ್ಯವಿದೆ.

ಹುಡುಗನ ವಿಡಿಯೊ:

ಪೋಸ್ಟ್ ಜೊತೆಗೆ ಶೇರ್ ಮಾಡಿರುವ ಹುಡುಗನ ವಿಡಿಯೋ ಕೂಡ ಹಲವು ವರ್ಷಗಳಷ್ಟು ಹಳೆಯದು. ಫೆಬ್ರವರಿ 2020 ರಲ್ಲಿ ಡೈಲಿ ಸಬಾ ವರದಿಯಲ್ಲಿ ವೀಡಿಯೊದ ಸ್ಕ್ರೀನ್‌ಗ್ರಾಬ್ ಅನ್ನು ತೆಗೆದುಕೊಳ್ಳಲಾಗಿದೆ. ವರದಿಯ ಪ್ರಕಾರ, ಹುಡುಗ ಇಡ್ಲಿಬ್‌ನಿಂದ ಸ್ಥಳಾಂತರಗೊಂಡ ಸಿರಿಯನ್ ನಿರಾಶ್ರಿತನಾಗಿದ್ದನು.

ವೀಡಿಯೊದಲ್ಲಿ ನಿರಾಶ್ರಿತ ಹುಡುಗನಿಗೆ ಸ್ವಯಂಸೇವಾ ಸಂಸ್ಥೆಯ ಕಾರ್ಯಕರ್ತರು  ಜಾಕೆಟ್  ಒದಗಿಸುವುದನ್ನು ಕಾಣಬಹುದು, ಇದನ್ನು ಡೈಲಿ ಸಭಾ ಟ್ವೀಟ್ ಮಾಡಿದೆ.

ಟರ್ಕಿಶ್ ಸುದ್ದಿ ಸೈಟ್ ಎ ಹೇಬರ್‌ನ ಪರಿಶೀಲಿಸಿದ ಟ್ವಿಟರ್ ಹ್ಯಾಂಡಲ್ ವೀಡಿಯೊದ ದೀರ್ಘ ಆವೃತ್ತಿಯನ್ನು ಟ್ವೀಟ್ ಮಾಡಿದೆ. ವರದಿಯ ಪ್ರಕಾರ, ಟರ್ಕಿಯ ಆಂತರಿಕ ಸಚಿವ ಸುಲೇಮಾನ್ ಸೊಯ್ಲು ಅವರು ವೀಡಿಯೊವನ್ನು ನೋಡಿದ ನಂತರ ಹುಡುಗನನ್ನು ಪತ್ತೆಹಚ್ಚಲು ಮತ್ತು ಸಹಾಯವನ್ನು ಒದಗಿಸುವಂತೆ ಅಧಿಕಾರಿಗಳನ್ನು ಕೇಳಿದರು.

ಒಟ್ಟಾರೆಯಾಗಿ ಹೇಳುವುದಾದರೆ ವೀಡಿಯೊದಲ್ಲಿ ಕಂಡುಬರುವ ಹುಡುಗಿ ಮತ್ತು ಹುಡುಗ ಇಬ್ಬರಿಗೂ ಉಕ್ರೇನ್ ರಷ್ಯಾದ ಯುದ್ದದಿಂದ ನರಳುತ್ತಿರುವ ಮಕ್ಕಳಲ್ಲ. ಈ ವೈರಲ್ ವಿಡಿಯೋದಲ್ಲಿರುವ ಮಕ್ಕಳಿಗೂ ಉಕ್ರೇನ್ ರಷ್ಯಾದ ಆಕ್ರಮಣಕ್ಕೂ ಯಾವುದೇ ಸಂಬಂಧವಿಲ್ಲ ಎಂಬುದು ಇದರಿಂದ ಸ್ಪಷ್ಟವಾಗಿದೆ.


ಇದನ್ನು ಓದಿರಿ: Fact check: ಹಿಂದೂ ದೇವಾಲಯದ ಅರ್ಚಕರನ್ನು ಕ್ರಿಶ್ಚಿಯನ್‌ ಧರ್ಮಕ್ಕೆ ಮತಾಂತರ ಆಗುವಂತೆ ಒತ್ತಾಯಿಸಿದ್ದು ನಿಜವೆ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights