ಬೈಕ್ ನಲ್ಲಿ ತೆರಳುತ್ತಿದ್ದ ವೇಳೆ ಮೊಬೈಲ್ ಸ್ಪೋಟ : ಓರ್ವನಿಗೆ ಗಂಭೀರ ಗಾಯ
ಬೈಕ್ ನಲ್ಲಿ ತೆರಳುತ್ತಿದ್ದ ವೇಳೆ ಮೊಬೈಲ್ ಸ್ಪೋಟಗೊಂಡ ಘಟನೆ ಮೈಸೂರು ಜಿಲ್ಲೆಯ ನಂಜನಗೂರು ತಾಲೂಕಿನ ಹುಲ್ಲ ಹಳ್ಳಿಯಲ್ಲಿ ನಡೆದಿದೆ.
ಹೆಚ್. ಎಂ ಬಸವರಾಜು ಗಾಯಗೊಂಡ ವ್ಯಕ್ತಿ. ಬೈಕ್ ನಲ್ಲಿ ತೆರೆಳುತ್ತಿದ್ದ ವೇಳೆ ಬಸವರಾಜುಗೆ ಕರೆ ಬಂದಿದೆ. ಕಾಲ್ ರಿಸೀವ್ ಮಾಡಿದ ತಕ್ಷಣಕ್ಕೆ ಮೊಬೈಲ್ ಸ್ಪೋಟಗೊಂಡಿದೆ. ನಿಯಂತ್ರಣ ತಪ್ಪಿ ಬಸವರಾಜು ಕೆಳಗೆ ಬಿದ್ದಿದ್ದಾರೆ. ಮೊಬೈಲ್ ಸ್ಪೋಟ ಗೊಂಡ ಪರಿಣಾಮ ಎದೆ ಮತ್ತು ಕುತ್ತಿಗೆ ಭಾಗಕ್ಕೆ ಗಂಭೀರ ಗಾಯವಾಗಿದ್ದು, ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಸ್ಥಳಕ್ಕೆ ಹುಲ್ಲ ಹಳ್ಳಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

