2023ರ ವಿಧಾನಸಭೆ ಚುನಾವಣೆಗೆ 102 ಜೆಡಿಎಸ್‍ ಅಭ್ಯರ್ಥಿಗಳ ಪಟ್ಟಿ ಸಿದ್ದವಿದೆ: ಹೆಚ್‌ಡಿ ಕುಮಾರಸ್ವಾಮಿ

2023ರ ವಿಧಾನಸಭೆ ಚುನಾವಣೆಗಾಗಿ ಈಗಾಗಲೇ ಜೆಡಿಎಸ್‍ನ 102 ಅಭ್ಯರ್ಥಿಗಳ ಪಟ್ಟಿ ಸಿದ್ದವಿದೆ. ಆ ಎಲ್ಲರಿಗೂ ಸೆ. 28ರಿಂದ ಎರಡು ದಿನಗಳ ಕಾರ್ಯಾಗಾರ ನಡೆಸಲಾಗುವುದು ಎಂದು ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ ತಿಳಿಸಿದ್ದಾರೆ.

ಕಾರ್ಯಾಗಾರ ನಡೆಯುವ ವೇಳೆಗೆ ಇನ್ನೂ ಎಂಟತ್ತು ಅಭ್ಯರ್ಥಿಗಳ ಹೆಸರನ್ನು ಪಟ್ಟಿಯಲ್ಲಿ ಸೇರಿಸಲಾಗುವುದು. ಚುನಾವಣೆಗಾಗಿ ಈಗಾಗಲೇ ನೀಲಿನಕ್ಷೆ ಸಿದ್ದವಾಗಿದೆ ಎಂದೂ ಅವರು ಹೇಳಿದ್ದಾರೆ.

ಜಿಟಿ ದೇವೇಗೌಡರಿಗೆ ಪಕ್ಷ ತೊರೆಯುವಂತೆ ಯಾರೂ ಹೇಳಿಲ್ಲ. ಕಳೆದ ಎರಡು ವರ್ಷಗಳಿಂದ ಅವರೇ ಪಕ್ಷದಿಂದ ಅಂತರ ಕಾಯ್ದುಕೊಂಡಿದ್ದಾರೆ. ಜೆಡಿಎಸ್‌ ಮುಕ್ತವಾಗಿದೆ. ಪಕ್ಷ ತೊರೆದು ಹೋಗುವವರಿಗೆ ಹೋಗಿ ಎಂದೂ ಹೇಳಿಲ್ಲ. ಅಂತಹವರಿಗೆ ಅಭಿನಂದನೆ ಸಲ್ಲಿಸುತ್ತೇವೆ. ಬರುವವರನ್ನು ಸ್ವಾಗತಿಸುತ್ತೇವೆ ಎಂದು ಅವರು ಹೇಳಿದ್ದಾರೆ.

ಜೆಡಿಎಸ್‌ ಭದ್ರವಾದ ತಳಹದಿ ಮೇಲಿದೆ. ಯಾರ ಮೇಲೆ ನಾವು ಡಿಪೆಂಡ್‌ ಆಗಿಲ್ಲ. ಜೆಡಿಎಸ್‌ ಕಾರ್ಯಕರ್ತರು ಬದ್ದತೆಯಿಂದ ಇದ್ದಾರೆ. ನಮ್ಮ ಪಕ್ಷದ ಬಗ್ಗೆ ಲಘುವಾಗಿ ಮಾತನಾಡುವವರು, ತಮ್ಮ ಪಕ್ಷವನ್ನು ಸರಿಪಡಿಕೊಳ್ಳಬೇಕು ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಅತ್ಯಾಚಾರ ಅಪರಾಧಿ- ಸ್ವಯಂ ಘೋಷಿತ ದೇವಮಾನವ ಅಸಾರಾಂ ಬಾಪು ಜಾಮೀನು ಅರ್ಜಿ ವಜಾ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights