ಉತ್ತರ ಪ್ರದೇಶದದಲ್ಲಿ ತೀವ್ರ ಜ್ವರದಿಂದ 32 ಮಕ್ಕಳು ಸಾವು : ಪೋಷಕರಲ್ಲಿ ಹೆಚ್ಚಿದ ಆತಂಕ!

ಉತ್ತರ ಪ್ರದೇಶದದಲ್ಲಿ ತೀವ್ರ ಜ್ವರದಿಂದ 32 ಮಕ್ಕಳು ಸಾವನ್ನಪ್ಪಿದ್ದು ಪೋಷಕರಲ್ಲಿ ಹೆಚ್ಚಿದ ಆತಂಕ ಹೆಚ್ಚಾಗಿದೆ.

ಕಳೆದ ಒಂದು ವಾರದಿಂದ ಉತ್ತರ ಪ್ರದೇಶದ ಕೆಲವು ಜಿಲ್ಲೆಗಳಲ್ಲಿ ತೀವ್ರ ಜ್ವರದಿಂದ 32 ಮಕ್ಕಳು ಸಾವನ್ನಪ್ಪಿದ್ದಾರೆ. ಇವರಲ್ಲಿ ಹಲವರು ಮಕ್ಕಳಲ್ಲಿ ಕೀಲು ನೋವು, ತಲೆನೋವು, ನಿರ್ಜಲೀಕರಣ ಮತ್ತು ವಾಕರಿಕೆ ಕಾಣಿಸಿಕೊಂಡಿದೆ. ಕೆಲವು ಸಂದರ್ಭಗಳಲ್ಲಿ ಮಕ್ಕಳ ಕಾಲುಗಳು ಮತ್ತು ತೋಳುಗಳ ಮೇಲೆ ದದ್ದುಗಳು ಹರಡಿರುವುದು ವರದಿಯಾಗಿದೆ.

ಉತ್ತರ ಪ್ರದೇಶದ ಪೂರ್ವ ಭಾಗದ ಆರು ಜಿಲ್ಲೆಗಳಲ್ಲಿ ನೂರಾರು ಜನರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು 50 ಜನರು ಕಳೆದ ಒಂದು ವಾರದಲ್ಲಿ ಸಾವನ್ನಪ್ಪಿದ್ದಾರೆ. ಇವರಲ್ಲಿ 32 ಜನ ಮಕ್ಕಳಿದ್ದಾರೆ. ಸತ್ತವರಲ್ಲಿ ಯಾರೂ ಕೋವಿಡ್ -19 ಗೆ ಧನಾತ್ಮಕ ಪರೀಕ್ಷೆ ಮಾಡಿಲ್ಲ. ಭಾರತದ ಅತ್ಯಂತ ಜನನಿಬಿಡ ಉತ್ತರ ಪ್ರದೇಶದ ಗ್ರಾಮೀಣ ಪ್ರದೇಶದಲ್ಲಿ ವ್ಯಾಪಿಸಿರುವ  ಈ ನಿಗೂಢ ಜ್ವರದ ಬಗ್ಗೆ ಜನರಲ್ಲಿ ಭಯಭೀತಿ ಹುಟ್ಟುಹಾಕಿದೆ.

ಆಗ್ರಾ, ಮಥುರಾ, ಮೈನ್‌ಪುರಿ, ಇಟಾಹ್, ಕಸ್ಗಂಜ್ ಮತ್ತು ಫಿರೋಜಾಬಾದ್ ಪೀಡಿತ ಕೆಲವು ಜಿಲ್ಲೆಗಳ ವೈದ್ಯರು ಡೆಂಗ್ಯೂ, ಸೊಳ್ಳೆಯಿಂದ ಈ ವೈರಲ್ ಸೋಂಕು ಹರಡಿ ಸಾವಿಗೆ ಕಾರಣವಾಗಿರಬಹುದು ಎನ್ನಲಾಗುತ್ತಿದೆ.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights