ಐಸಿಸಿ ಟೆಸ್ಟ್ ಶ್ರೇಯಾಂಕ: ವಿರಾಟ್ ಕೋಹ್ಲಿಯನ್ನು ಹಿಂದಿಕ್ಕಿದ ರೋಹಿತ್ ಶರ್ಮಾ; 5ನೇ ಸ್ಥಾನಕ್ಕೆ ಜಿಗತ!

ಐಸಿಸಿ ಟೆಸ್ಟ್ ಶ್ರೇಯಾಂಕ ಪಟ್ಟಿಯಲ್ಲಿ ಇಂದು (ಸೆ.1) ನವೀಕರಿಸಲಾಗಿದೆ. ಇದರನ್ವಯ, ಭಾರತ ಕ್ರಿಕೆಟ್‌ ತಂಡದ ಆರಂಭಿಕ ಆಟಗಾರ ರೋಹಿತ್‌ ಶರ್ಮಾ 5ನೇ ಸ್ಥಾನ ಪಡೆದುಕೊಂಡಿದ್ದು, ತಂಡದ ನಾಯಕ ವಿರಾಟ್‌ ಕೋಹ್ಲಿ ಅವರನ್ನು ಹಿಂದಿಕ್ಕಿದ್ದಾರೆ. ಈ ಪಟ್ಟಿಯಲ್ಲಿ ಇಂಗ್ಲೆಂಡ್‌ ತಂಡದ ಜೋ ರೋಟ್‌ ಅಗ್ರ ಸ್ಥಾನ ಪಡೆದುಕೊಂಡಿದ್ದಾರೆ.

ಇಂಗ್ಲೆಂಡ್‌ನಲ್ಲಿ ನಡೆಯುತ್ತಿರುವ ಟೆಸ್ಟ್‌ ಸರಣಿಯ 5 ಪಂದ್ಯಗಳ ಪೈಕಿ 3 ಪಂದ್ಯಗಳು ಮುಗಿದಿವೆ. ಇದರ ನಂತರ, ರೋಹಿತ್ ಶರ್ಮಾ 5ನೇ ಸ್ಥಾನಕ್ಕೆ ಜಿಗಿದಿದ್ದಾರೆ. ಆದರೆ, ವಿರಾಟ್ ಕೊಹ್ಲಿ 6ನೇ ಸ್ಥಾನಕ್ಕೆ ಕುಸಿದಿದ್ದಾರೆ.

ಇಂಗ್ಲೆಂಡ್ ವಿರುದ್ಧದ 3 ಟೆಸ್ಟ್‌ಗಳಲ್ಲಿ ರೋಹಿತ್ ಶರ್ಮಾ 230 ರನ್ ಗಳಿಸಿದ್ದರೆ, ವಿರಾಟ್‌ ಕೊಹ್ಲಿ ಕೇವಲ 124 ರನನ್‌ಗಳನ್ನು ಗಳಿಸಿದ್ದಾರೆ. ರೋಹಿತ್‌ ಶರ್ಮಾ ಅವರ ರೇಟಿಂಗ್‌ ಪಾಯಿಂಟ್‌ 773ಕ್ಕೆ ಏರಿಕೆಯಾಗಿದೆ.

ಟಾಪ್ 10 ಐಸಿಸಿ ಟೆಸ್ಟ್ ಬ್ಯಾಟ್ಸ್‌ಮನ್‌ಗಳು: (September 1, 2021)
1. ಜೋ ರೂಟ್ – 916 ರೇಟಿಂಗ್‌ ಪಾಯಿಂಟ್‌
2. ಕೇನ್ ವಿಲಿಯಮ್ಸನ್ – 891
3. ಸ್ಟೀವ್ ಸ್ಮಿತ್ – 891
4. ಮಾರ್ನಸ್ ಲಾಬುಸ್ಚಾಗ್ನೆ – 878
5. ರೋಹಿತ್ ಶರ್ಮಾ – 773
6. ವಿರಾಟ್ ಕೊಹ್ಲಿ – 766
7. ಬಾಬರ್ ಅಜಮ್ – 749
8. ಡೇವಿಡ್ ವಾರ್ನರ್ – 724
9. ಕ್ವಿಂಟನ್ ಡಿ ಕಾಕ್ – 717
10. ಹೆನ್ರಿ ನಿಕೋಲ್ಸ್ – 714

ಭಾರತ ತಂಡದ ಮತ್ತೊಬ್ಬ ಆಟಗಾರ ಚೇತೇಶ್ವರ ಪೂಜಾರ  ಶ್ರೇಯಾಂಕ ಪಟ್ಟಿಯಲ್ಲಿ 15ನೇ ಸ್ಥಾನಕ್ಕೆ ಜಿಗಿದ್ದಾರೆ. ಈ ಹಿಂದೆ ಅವರು 18ನೇ ಸ್ಥಾನದಲ್ಲಿದ್ದರು.

ಇದನ್ನೂ ಓದಿ: ICC T-20 ವೇಳಾಪಟ್ಟಿ ಪ್ರಕಟ: ಭಾರತ ಮತ್ತು ಪಾಕಿಸ್ಥಾನದ ನಡುವೆ ಮೊದಲ ಹಣಾಹಣಿ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights