ICC T-20 ವೇಳಾಪಟ್ಟಿ ಪ್ರಕಟ: ಭಾರತ ಮತ್ತು ಪಾಕಿಸ್ಥಾನದ ನಡುವೆ ಮೊದಲ ಹಣಾಹಣಿ!

ಅಕ್ಟೋಬರ್ 17ರಿಂದ ಆರಂಭವಾಗಿಲಿರುವ ಐಸಿಸಿ ಪುರುಷರ ಟ್ವೆಂಟಿ- 20 ವಿಶ್ವಕಪ್ 2021 ರ ವೇಳಾಪಟ್ಟಿ ಪ್ರಕಟವಾಗಿದೆ. ಭಾರತ ತಂಡವು ಗ್ರೂಪ್ 2ರಲ್ಲಿದ್ದು, ಅಕ್ಟೋಬರ್‌ 24 ರಂದು ತನ್ನ ಮೊದಲ ಪಂದ್ಯದಲ್ಲಿ ಪಾಕಿಸ್ತಾನದ ವಿರುದ್ದ ಸೆಣೆಸಾಡಲಿದೆ.

ಐಸಿಸಿ ಮಂಗಳವಾರ ತನ್ನ ಡಿಜಿಟಲ್ ವೇದಿಕೆಯ ಮೂಲಕ ಸಂಪೂರ್ಣ ವೇಳಾಪಟ್ಟಿಯನ್ನು ಘೋಷಿಸಿದೆ. ಟ್ವೆಂಟಿ-20 ವಿಶ್ವಕಪ್ ಟೂರ್ನಿಯು ಯುಎಇ ಹಾಗೂ ಓಮಾನ್ ಆತಿಥ್ಯದಲ್ಲಿ ಅಕ್ಟೋಬರ್ 17ರಿಂದ ಆರಂಭವಾಗಲಿದೆ. ನವೆಂಬರ್ 14ರಂದು ದುಬೈನಲ್ಲಿ ಫೈನಲ್ ಪಂದ್ಯ ನಡೆಯಲಿದೆ.

ಅಕ್ಟೋಬರ್ 17 ರಂದು ಬಿ ಗುಂಪಿನ ಓಮಾನ್ ಹಾಗೂ ಪಪುವಾ ನ್ಯೂಗಿನಿ ತಂಡಗಳ ನಡುವೆ ಉದ್ಘಾಟನಾ ಪಂದ್ಯ ನಡೆಯಲಿದೆ. ಅದೇ ಗುಂಪಿನಲ್ಲಿರುವ ಸ್ಕಾಟ್ಲೆಂಡ್ ಹಾಗೂ ಬಾಂಗ್ಲಾದೇಶಗಳ ನಡುವೆ ಅದೇ ದಿನ ಸಂಜೆ ಪಂದ್ಯ ನಡೆಯಲಿದೆ.

ಐರ್ಲೆಂಡ್, ನೆದರ್ಲ್ಯಾಂಡ್ಸ್, ಶ್ರೀಲಂಕಾ ಹಾಗೂ ನಮೀಬಿಯಾ – ಗ್ರೂಪ್ ಎ ನಲ್ಲಿ ಸ್ಥಾನ ಪಡೆದಿವೆ. ಈ ತಂಡಗಳು ಅಕ್ಟೋಬರ್ 18ರಿಂದ ಅಬುಧಾಬಿಯಲ್ಲಿ ತಮ್ಮ ಅಭಿಯಾನ ಆರಂಭಿಸಲಿವೆ.

ಇದನ್ನೂ ಓದಿ: ಚಿನ್ನದ ಹುಡುಗ ನೀರಜ್‌ಗೆ ತರಬೇತಿ ನೀಡಿದ್ದ ಕನ್ನಡಿಗ ಕಾಶಿನಾಥ್‌ಗೆ 10 ಲಕ್ಷ ರೂ ಬಹುಮಾನ!

ಆಸ್ಟ್ರೇಲಿಯ ಹಾಗೂ ದಕ್ಷಿಣ ಆಫ್ರಿಕಾ ಸೆಣಸಾಟದೊಂದಿಗೆ ಸೂಪರ್-12ರ ಹಂತ ಅಕ್ಟೋಬರ್ 23 ರಿಂದ ಆರಂಭವಾಗುತ್ತದೆ. ಅದೇ ದಿನ ಸಂಜೆ ದುಬೈನಲ್ಲಿ ಇಂಗ್ಲೆಂಡ್ ಹಾಗೂ ವೆಸ್ಟ್ ಇಂಡೀಸ್ ತಂಡಗಳು ಹೋರಾಟ ನಡೆಸುತ್ತವೆ.

ಇಂಗ್ಲೆಂಡ್ ಹಾಗೂ ಆಸ್ಟ್ರೇಲಿಯವು ಅಕ್ಟೋಬರ್ 30ರಂದು ದುಬೈನಲ್ಲಿ ಮುಖಾಮುಖಿಯಾಗುತ್ತವೆ. ಗ್ರೂಪ್-1ರ ಹಂತದ ಪಂದ್ಯವು ನವೆಂಬರ್ 6ರಂದು ಆಸ್ಟ್ರೇಲಿಯ ಹಾಗೂ ವೆಸ್ಟ್ ಇಂಡೀಸ್(ಅಬುಧಾಬಿಯಲ್ಲಿ) ಹಾಗೂ ಇಂಗ್ಲೆಂಡ್ ಹಾಗೂ ದ. ಆಫ್ರಿಕಾ(ಶಾರ್ಜಾದಲ್ಲಿ) ನಡುವಿನ ಪಂದ್ಯದ ಮೂಲಕ ಕೊನೆಯಾಗುತ್ತದೆ.

https://twitter.com/T20WorldCup/status/1427555850319798275?s=20

ಅಕ್ಟೋಬರ್ 24ರಂದು ಭಾರತ ಹಾಗೂ ಪಾಕಿಸ್ತಾನ ತಂಡಗಳ ಮುಖಾಮುಖಿಯೊಂದಿಗೆ ಗ್ರೂಪ್ -2ರ ಹಂತ ಆರಂಭವಾಗುತ್ತದೆ. ಪಾಕಿಸ್ತಾನವು ಅ.26ರಂದು ನ್ಯೂಝಿಲ್ಯಾಂಡ್ ಅನ್ನು ಎದುರಿಸಲಿದೆ. ನವೆಂಬರ್ 8ರಂದು ಭಾರತವು ಗ್ರೂಪ್ ಎ ಯಿಂದ ಎರಡನೇ ಸ್ಥಾನ ಪಡೆದ ರೌಂಡ್ 1 ಕ್ವಾಲಿಫೈಯರ್ ತಂಡವನ್ನು ಎದುರಿಸುವ ಮೂಲಕ ಗ್ರೂಪ್ 2ರ ಹಂತವು ಕೊನೆಯಾಗಲಿದೆ.

ಮೊದಲ ಸೆಮಿ ಫೈನಲ್ ಪಂದ್ಯವು ಅಬುಧಾಬಿಯಲ್ಲಿ ನವೆಂಬರ್ 10ರಂದು ನಡೆದರೆ, ಎರಡನೇ ಸೆಮಿ ಫೈನಲ್ ನವೆಂಬರ್ 11ರಂದು ದುಬೈನಲ್ಲಿ ನಡೆಯಲಿದೆ. ಎರಡೂ ಸೆಮಿ ಫೈನಲ್ ಗೆ ಮೀಸಲು ದಿನಗಳಿವೆ.

ನವೆಂಬರ್ 14ರಂದು ರವಿವಾರ ದುಬೈನಲ್ಲಿ ಫೈನಲ್ ಪಂದ್ಯ ನಡೆಯಲಿದೆ. ಸೋಮವಾರ ಮೀಸಲು ದಿನವಾಗಿದೆ.

ಭಾರತದ ವೇಳಾಪಟ್ಟಿ:

ಸೂಪರ್ 12 ಹಂತ, ಗ್ರೂಪ್- 2

ಭಾರತ vs ಪಾಕಿಸ್ತಾನ ಅಕ್ಟೋಬರ್ 24, ದುಬೈ

ಭಾರತ vs ನ್ಯೂಝಿಲ್ಯಾಂಡ್ ಅಕ್ಟೋಬರ್ 31, ದುಬೈ

ಭಾರತ vs ಅಫ್ಘಾನಿಸ್ತಾನ ನವೆಂಬರ್ 3, ಅಬುಧಾಬಿ

ಭಾರತ vs ಗ್ರೂಪ್ B1 ನವೆಂಬರ್ 5, ದುಬೈ

ಭಾರತ vs ಗ್ರೂಪ್ A2 ನವೆಂಬರ್ 8, ದುಬೈ

ಇದನ್ನೂ ಓದಿ: ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಮೊದಲ ಚಿನ್ನ ಗೆದ್ದ ನೀರಜ್ ಚೋಪ್ರಾ; ಅವರ ಸಾಧನೆಯ ಹಾದಿ ಹೀಗಿದೆ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights