ಮಾಜಿ ಸಿಎಂ ಸದಾನಂದ ಗೌಡರದ್ದು ಎನ್ನಲಾದ ಅಶ್ಲೀಲ ವಿಡಿಯೋ ಬಿಡುಗಡೆ; ರಾಜ್ಯ ರಾಜಕೀಯದಲ್ಲಿ ಅಲ್ಲೋಲ-ಕಲ್ಲೋಲ!

ಬಿಜೆಪಿ ನಾಯಕ ಮಾಜಿ ಸಚಿವ ರಮೇಶ್‌ ಜಾರಕಿಹೊಳಿ ಅವರ ಅಶ್ಲೀಲ ಸಿಡಿ ಬಿಡುಗಡೆಯಾಗಿ ಭಾರೀ ಸದ್ದು ಮಾಡಿದ್ದ ಬೆನ್ನಿಗೆ ತಮಿಳುನಾಡಿನ ಮತ್ತೋರ್ವ ಬಿಜೆಪಿ ನಾಯಕ ಕೆ.ಟಿ. ರಾಘವನ್ ಅವರ ಅಶ್ಲೀಲ ಸಿಡಿ ಬಿಡುಗಡೆಯಾಗಿ ಇಡೀ ದೇಶದಾದ್ಯಂತ ಸದ್ದು ಮಾಡಿತ್ತು. ಆದರೆ, ಇದೀಗ ಮತ್ತೋರ್ವ ಬಿಜೆಪಿ ನಾಯಕ ಮತ್ತು ಮಾಜಿ ಮುಖ್ಯಮಂತ್ರಿ ಸದಾನಂದ ಗೌಡ ಅವರದ್ದು ಎನ್ನಲಾದ ಆಶ್ಲೀಲ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಅಗುತ್ತಿದ್ದು, ಭಾರೀ ಸದ್ದು ಮಾಡುತ್ತಿದೆ.

ಈ ಹಿಂದೆ ರಮೇಶ್ ಜಾರಕಿಹೊಳಿ ಅವರ ಅಶ್ಲೀಲ ಸಿಡಿ ಬಿಡುಗಡೆಯಾದ ಸಂದರ್ಭದಲ್ಲೇ ಸದಾನಂದ ಗೌಡ ಸೇರಿದಂತೆ ಅನೇಕ ಬಿಜೆಪಿ ನಾಯಕರ ಸಿಡಿ ಇದೆ ಎಂಬ ಸುದ್ದಿಯನ್ನು ಹರಿಬಿಡಲಾಗಿತ್ತು. ಆ ಸಂದರ್ಭದಲ್ಲಿ ಅಚ್ಚರಿಯ ಹೇಳಿಕೆ ನೀಡಿದ್ದ ಬಿಜೆಪಿ ನಾಯಕರೇ ಆಗಿದ್ದ ಬಸನಗೌಡ ಪಾಟೀಲ್ ಯತ್ನಾಳ್ “ಬಿ.ಎಸ್‌. ಯಡಿಯೂರಪ್ಪ ಅವರ ಸಿಡಿಯೂ ಇದೆ. ಅದನ್ನು ಕಣ್ಣಲ್ಲಿ ನೋಡಲು ಸಾಧ್ಯವಿಲ್ಲ” ಎಂದು ಹೇಳುವ ಮೂಲಕ ರಾಜ್ಯ ರಾಜಕೀಯ ವಲಯದಲ್ಲಿ ವಿವಾದದ ಅಲೆಯಲ್ಲೇ ಎಬ್ಬಿಸಿದ್ದರು.

ಆದರೆ, ಈ ಅಲೆ ತಣ್ಣಗಾಗುವ ಮೊದಲೇ ಇದೀಗ ಮಾಜಿ ಸಿಎಂ ಸದಾನಂದ ಗೌಡರದ್ದು ಎನ್ನಲಾದ ಅಶ್ಲೀಲ ವಿಡಿಯೋ ವಾಟ್ಸಾಪ್ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಆದರೆ, ಈ ಬಗ್ಗೆ ಸದಾನಂದ ಗೌಡರಾಗಲಿ ಬೇರೆ ಯಾರೇ ಆಗಲಿ ದೂರು ನೀಡಿಲ್ಲ. ಈ ಹಿಂದೆ ರಮೇಶ್ ಜಾರಕಿಹೊಳಿ ಮೊದಲು ತನ್ನ ಸಿಡಿ ಬಿಡುಗಡೆಯಾಗಿದ್ದಾಗ ಅದರಲ್ಲಿರುವುದು ತಾನಲ್ಲ ಎಂದಿದ್ದರು. ನಂತರ ವಿಚಾರಣೆ ವೇಳೆ ಅದು ತಾನೇ ಎಂದು ತಪ್ಪೊಪ್ಪಿಕೊಂಡಿದ್ದರು.

ಹೀಗಾಗಿ ಈ ವಿಡಿಯೋ ಕುರಿತು ಸದಾನಂದ ಗೌಡರ ಹೇಳಿಕೆಗೆ ಇದೀಗ ಎಲ್ಲರೂ ಕಾಯುತ್ತಿದ್ದಾರೆ. ಆದರೆ, ಅದೇ ಸಂದರ್ಭದಲ್ಲಿ ಈ ವಿಡಿಯೋ ಸತ್ಯಾಸತ್ಯತೆಯನ್ನು ಪೊಲೀಸ್‌ ಇಲಾಖೆ ಶೀಘ್ರದಲ್ಲಿ ಬಯಲು ಮಾಡಬೇಕಾಗಿದೆ. ಒಂದು ವೇಳೆ ಈ ವಿಡಿಯೋ ಸದಾನಂದಗೌಡರದ್ದೇ ಆಗಿದ್ದರೆ, ಮೇಲಿಂದ ಮೇಲೆ ಬಿಜೆಪಿ ನಾಯಕರ ಅಶ್ಲೀಲ ಸಿಡಿಗಳು ಬಿಡುಗಡೆಯಾಗುತ್ತಿರುವುದು ರಾಜ್ಯ ಮತ್ತು ಕೇಂದ್ರ ಸರ್ಕಾರಕ್ಕೆ ಮುಜುಗರವನ್ನು ಉಂಟು ಮಾಡಿರುವುದು ಮಾತ್ರ ದಿಟ.

ಇದನ್ನೂ ಓದಿ: 2020ರಲ್ಲಿ ರಸ್ತೆ ಅಪಘಾತಗಳಲ್ಲಿ 1.20 ಲಕ್ಷ ಸಾವು; ದೈನಂದಿನ ಸರಾಸರಿ 328 ಸಾವುಗಳಾಗಿವೆ: NCRB ಡೇಟಾ

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights