ದೆಹಲಿ ಕೋವಿಡ್ ಕರ್ಫ್ಯೂ ಜೂನ್ 7 ರವರೆಗೆ ಕೆಲ ಸಡಿಲಿಕೆಯೊಂದಿಗೆ ವಿಸ್ತರಣೆ..!
ಕೋವಿಡ್-ಪ್ರೇರಿತ ಲಾಕ್‌ಡೌನ್ ಅನ್ನು ಜೂನ್ 7 ರವರೆಗೆ ವಿಸ್ತರಿಸುವುದಾಗಿ ದೆಹಲಿ ಸರ್ಕಾರ ಶನಿವಾರ ಹೊರಡಿಸಿದ ಆದೇಶದಲ್ಲಿ ತಿಳಿಸಿದೆ. ನಗರದಲ್ಲಿ ಸಕ್ರಿಯ ಕೋವಿಡ್ -19 ಪ್ರಕರಣಗಳು ಮತ್ತು ಕೇಸ್ ಪಾಸಿಟಿವಿಟಿ ದರವು ಕ್ಷೀಣಿಸುತ್ತಿದ್ದರೂ ಸಹ ಇದನ್ನು ಮಾಡಲಾಗಿದೆ, ಏಕೆಂದರೆ ಪರಿಸ್ಥಿತಿ ಇನ್ನೂ ಸುಧಾರಿಸಬೇಕು ಎಂದು ಸರ್ಕಾರ ತನ್ನ ವರದಿಯಲ್ಲಿ ಹೇಳಿದೆ.
ಈ ಆದೇಶದಲ್ಲಿ ಅಗತ್ಯ ಚಟುವಟಿಕೆಗಳು ಮತ್ತು ಸೇವೆಗಳಿಗೆ ವಿನಾಯಿತಿ ಸಿಗುತ್ತದೆ. ಅಗತ್ಯ ಸರಕುಗಳು ಮತ್ತು ಸೇವೆಗಳಿಗೆ ಸಂಪರ್ಕ ಹೊಂದಿದ ಚಲನೆಗಾಗಿ ಜನರು ಹೊಂದಿರುವ ಇ-ಪಾಸ್‌ಗಳು ಮಾನ್ಯವಾಗಿ ಮುಂದುವರಿಯುತ್ತದೆ. ಹೆಚ್ಚುವರಿಯಾಗಿ, ಮೇ 31 ರಿಂದ ನಗರದಲ್ಲಿ ಕಂಟೈನ್‌ಮೆಂಟ್ ವಲಯಗಳ ಹೊರಗೆ ಕೆಲವು ನಿಷೇಧಿತ ಚಟುವಟಿಕೆಗಳನ್ನು ಅನುಮತಿಸಲಾಗುವುದು.
ಕೈಗಾರಿಕಾ ಪ್ರದೇಶಗಳಲ್ಲಿ ಮುಚ್ಚಿದ ಆವರಣದಲ್ಲಿ ಉತ್ಪಾದನಾ ಘಟಕಗಳ ಕಾರ್ಯಾಚರಣೆಗೆ ಅವಕಾಶ ನೀಡಿಲಾಗಿದೆ. ಕೆಲಸದ ತಾಣಗಳಲ್ಲಿ ನಿರ್ಮಾಣ ಚಟುವಟಿಕೆಗಳಿಗೆ ಮತ್ತು ಷರತ್ತುಗಳೊಂದಿಗೆ ಉತ್ಪಾದನಾ ಘಟಕಗಳು ಮತ್ತು ನಿರ್ಮಾಣ ಕಾರ್ಯಗಳನ್ನು ಪುನಃ ಪ್ರಾರಂಭಕ್ಕೆ ಅನುಮೋದನೆ ಸಿಗಲಿದೆ.
ಇನ್ನೂ ರಸ್ತೆಗಳಲ್ಲಿ ಜನರ ಅನಗತ್ಯ ಸಂಚಾರ ನಡೆಯದಂತೆ ನೋಡಿಕೊಳ್ಳಲು ಪೊಲೀಸ್ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಸಾಕಷ್ಟು ಸಂಖ್ಯೆಯ ಚೆಕಿಂಗ್ ಪಾಯಿಂಟ್‌ಗಳನ್ನು ಹಾಕುವ ಮೂಲಕ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ.

