ಬೆಲೆ ಏರಿಕೆ ಖಂಡಿಸಿ ಕಾಂಗ್ರೆಸ್ ನಿಂದ ನೂತನ ಪ್ರತಿಭಟನೆ : ಬಿಜೆಪಿ ವಿರುದ್ಧ ಸಿದ್ದರಾಮಯ್ಯ ವಾಗ್ದಾಳಿ!

ಕೊರೊನಾ ಮಧ್ಯೆ ಬೆಲೆ ಏರಿಕೆಯಿಂದಾಗಿ ಜನಸಾಮಾನ್ಯರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಹೀಗಾಗಿ ಬೆಲೆ ಏರಿಕೆ ಖಂಡಿಸಿ ಕಾಂಗ್ರೆಸ್ ನೂತನ ಪ್ರತಿಭಟನೆ ಮಾಡುತ್ತಿದ್ದು ಬಿಜೆಪಿ ವಿರುದ್ಧ ವಾಗ್ದಾಳಿ ಮಾಡಿದೆ.

ಕೇಂದ್ರ ಸರ್ಕಾರದ ಧೋರಣೆ ಖಂಡಿಸಿ ಕಾಂಗ್ರೆಸ್ ಇಂದು ಬೀದಿಗಿಳಿದು ಹೋರಾಡಲು ಮುಂದಾಗಿದೆ. ಡಿಕೆ ಶಿವಕುಮಾರ್, ಸಿದ್ದರಾಮಯ್ಯ ನೇತೃತ್ವದಲ್ಲಿ ಸೈಕಲ್ ಜಾಥ ಮಾಡಲಾಗುತ್ತಿದೆ. ಕೆಪಿಪಿಸಿ ಕಚೇರಿಯಿಂದ- ವಿಧಾನಸೌಧದವರೆಗೆ ಸೈಕಲ್ ನಲ್ಲೇ ತೆರಳಲು ಕಾಂಗ್ರೆಸ್ ಹಿರಿಯ ನಾಯಕರು ತೀರ್ಮಾನಿಸಿದ್ದಾರೆ. ಈ ಹಿಂದೆ ಎತ್ತನಿ ಬಂಡಿಯಲ್ಲಿ ವಿಧಾನಸೌಧಕ್ಕೆ ತೆರಳುವ ಮೂಲಕ ಬೆಲೆ ಏರಿಕೆ ವಿರುದ್ಧ ಪ್ರತಿಭಟಿಸಿದ್ದ ಕಾಂಗ್ರೆಸ್ ಇಂದು ಸೈಕಲ್ ಜಾಥ ಹಮ್ಮಿಕೊಂಡಿದೆ.

ಈ ಮೂಲಕ ಪೆಟ್ರೋಲ್-ಡಿಸೇಲ್ ಅಗತ್ಯವಸ್ತುಗಳ ಬೆಲೆ ಏರಿಕೆಯಿಂದ ಬಡವರಿಗೆ, ಮಧ್ಯಮ ವರ್ಗದವರಿಗೆ, ಜನಸಾಮಾನ್ಯರಿಗೆ ಆಗುವ ತೊಂದರೆಗಳ ಬಗ್ಗೆ ಸರ್ಕಾರದ ಗಮನ ಸೆಳೆಯಲಿದ್ದಾರೆ.

ಈ ಬಗ್ಗೆ ಮಾತನಾಡಿದ ಸಿದ್ದರಾಮಯ್ಯ, ‘ ಅಗತ್ಯೆ ವಸ್ತಗಳ ಬೆಲೆ ಜಾಸ್ತಿ ಮಾಡಿದ್ದಾರೆ. ಬೆಲೆ ಏರಿಕೆಯಿಂದ ಜನಸಾಮಾನ್ಯರಿತೆ ತುಂಬಾ ತೊಂದರೆಯಾಗುತ್ತಿದೆ. ಈ ಹಿಂದೆ ನಾವು ಎತ್ತಿನ ಗಾಡಿಯಲ್ಲಿ ಪ್ರತಿಭಟನೆ ಮಾಡಿದ್ದೇವೆ. ಆದರೆ ಸರ್ಕಾರ ಯಾವುದಕ್ಕೂ ಸ್ಪಂದಿಸುತ್ತಿಲ್ಲ. ಅದಕ್ಕೆ ಎರಡನೇ ಬಾರಿ ಸೈಕಲ್ ಮೇಲೆ ಪ್ರತಿಭಟನೆ ಮಾಡುತ್ತಿದ್ದೇವೆ. ಗ್ಯಾಸ್ ಬೆಲೆ ದುಪ್ಪಟ್ಟಾಗಿದೆ. ಅದ್ರಲ್ಲೂ ಸರ್ಕಾರ ಸಬ್ಸಿಡಿ ನಿಲ್ಲಿಸಿದೆ. 15000 ಸಂಬಳ ತೆಗೆದುಕೊಳ್ಳುವವರಿಗೆ ಇದು ತುಂಬಾ ಹೊರೆ ಬೀಳುತ್ತದೆ. ಅಂಥವರು ಹೆಂಡತಿ ತಾಳಿ ಮಾರಿ ಜೀವನ ಮಾಡುವಂತ ಸ್ಥಿತಿ ಬಂದೊದರಿಗೆ. ಸುಳ್ಳು ಹೇಳಿಕೊಂಡು ಬಿಜೆಪಿ ಸರ್ಕಾರ ನಡೆಸುತ್ತಿದೆ.ಅಧಿವೇಶನದಲ್ಲಿ ಈ ಪ್ರಶ್ನೆ ಮಾಡಿದ್ದೇನೆ ಆದರೂ ಉತ್ತರ ಕೊಟ್ಟಿಲ್ಲ ಎಂದು ಹೇಳಿದ್ದಾರೆ ” ಎಂದು ಕೆಪಿಪಿಸಿ ಕಚೇರಿ ಮುಂದೆ ವಾಗ್ದಾಳಿ ಮಾಡಿದರು.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights