ಫ್ಯಾಕ್ಟ್‌ಚೆಕ್ : ಶಾಲೆಯಲ್ಲಿ ಹಿಂದೂ ಮಕ್ಕಳಿಗೆ ನಮಾಜ್ ಅಭ್ಯಾಸ ಮಾಡಿಸಲಾಗಿದೆಯೇ?

ಉತ್ತರ ಪ್ರದೇಶದ ಶಾಲೆಯೊಂದರಲ್ಲಿ ಶಿಕ್ಷಕರೊಬ್ಬರು ಹಿಂದೂ ವಿದ್ಯಾರ್ಥಿಗಳಿಗೆ ನಮಾಜ್ ಮಾಡುವುದನ್ನು ಅಭ್ಯಾಸ ಮಾಡಿಸುತ್ತಿರುವ ದೃಶ್ಯಗಳು ಎಂಬ ಹೇಳಿಕೆಯೊಂದಿಗೆ ವಿಡಿಯೋ ಪೋಸ್ಟ್‌ಅನ್ನು ಹಂಚಿಕೊಳ್ಳಲಾಗಿದೆ. ಈ ವಿಡಿಯೋ ದೃಶ್ಯದಲ್ಲಿ ಮಕ್ಕಳು ಮಂಡಿಯೂರಿ ನಮಸ್ಕರಿಸುತ್ತಿರುವುದನ್ನು ಕಾಣಬಹುದು.

ಫೇಸ್‌ಬುಕ್ ಮತ್ತು ಟ್ವಿಟರ್‌ನಲ್ಲಿ ಈ ವಿಡಿಯೋವನ್ನು ವ್ಯಾಪಕವಾಗಿ ಹಂಚಿಕೊಳ್ಳಲಾಗಿದ್ದು, ‘ಉತ್ತರ ಪ್ರದೇಶದ ಶಾಲೆಯೊಂದರಲ್ಲಿ ಮಕ್ಕಳಿಗೆ ನಮಾಜ್ ಮಾಡುವುದು ಹೇಗೆ ಎಂಬುದನ್ನು ಹೇಳಿಕೊಡಲಾಗುತ್ತಿದೆ. ಮುಸ್ಲಿಂ ಶಿಕ್ಷಕಿಯೊಬ್ಬರು ತಮ್ಮ ವಿದ್ಯಾರ್ಥಿನಿಯರಿಗೆ ನಮಾಜ್‌ ಅಭ್ಯಾಸ ಮಾಡಿಸುತ್ತಿದ್ದಾರೆ. ನಮಾಜ್ ಅಭ್ಯಾಸ ಮಾಡುತ್ತಿರುವವರಲ್ಲಿ ಹಿಂದೂ ವಿದ್ಯಾರ್ಥಿನಿಯರೂ ಇದ್ದಾರೆ. ಇದು ಉತ್ತರ ಪ್ರದೇಶದ ನಿಜವಾದ ‘ದಿ ಕೇರಳ ಸ್ಟೋರಿ’ ಎಂದು ಪ್ರತಿಪಾದಸಲಾಗಿದೆ. ಹಾಗಿದ್ದರೆ ಈ ವಿಡಿಯೋ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗಿರುವ ವಿಡಿಯೋವನ್ನು ಪರಿಶೀಲಿಸದಾಗ, ಉತ್ತರ ಪ್ರದೇಶದ ಬಾಗ್‌ಪತ್ ಜಿಲ್ಲೆಯ ರಾಥೋಡಾ ಗ್ರಾಮದ ಹೋಶಿಯಾರಿ ದೇವಿ ಗರ್ಲ್ಸ್ ಇಂಟರ್ ಕಾಲೇಜಿನಲ್ಲಿ ಸಾಂಸ್ಕೃತಿಕ ಕಾರ್ಯಕ್ರಮದ ನಿಮ್ಮಿತ ವಿದ್ಯಾರ್ಥಿಗಳು ನಾಟಕ ಅಭ್ಯಾಸ ಮಾಡುತ್ತಿರುವ ಹಳೆಯ ವಿಡಿಯೋವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗಿದೆ.

‘ಇದು ಉತ್ತರ ಪ್ರದೇಶದ ಬಾಗ್‌ಪತ್‌ನ ಶಾಲೆಯೊಂದರಲ್ಲಿ ಚಿತ್ರೀಕರಿಸಲಾದ ವಿಡಿಯೊ. ಹಿಂದೂ ವಿದ್ಯಾರ್ಥಿನಿಯರಿಗೆ ಶಾಲೆಯಲ್ಲಿ ನಮಾಜ್‌ ಹೇಳಿಕೊಡಲಾಗುತ್ತದೆ ಎಂದು ಸ್ಥಳೀಯ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿತ್ತು. ಅದಕ್ಕೆ ಸಂಬಂಧಿಸಿದಂತೆ ಅಮರ್ ಉಜಾಲ, ದೈನಿಕ್‌ ಭಾಸ್ಕರ್ ವರದಿ ಪ್ರಕಟಿಸಿವೆ. ಶಾಲೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಕ್ಕಾಗಿ ಸರ್ವಧರ್ಮ ಸಮನ್ವಯ ಗೀತನೃತ್ಯವನ್ನು ನಡೆಸಲು ಉದ್ದೇಶಿಸಲಾಗಿತ್ತು. ಅದರಲ್ಲಿ ಎಲ್ಲಾ ಧರ್ಮಗಳ ಪ್ರಾರ್ಥನಾ ವಿಧಾನಗಳನ್ನು ತೋರಿಸಲಾಗಿತ್ತು. ಆ ನೃತ್ಯದ ಅಭ್ಯಾಸದ ವಿಡಿಯೊ ಅದು.

ಮೂಲ ವಿಡಿಯೋವನ್ನು ಎಡಿಟ್ ಮಾಡುವ ಮೂಲಕ ಹಂಚಿಕೊಳ್ಳಲಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವಿಡಿಯೊ ಪೂರ್ಣ ಪ್ರಮಾಣದಲ್ಲಿ ಇಲ್ಲ. ವಿದ್ಯಾರ್ಥಿನಿಯರು ಎಲ್ಲಾ ಸ್ವರೂಪದ ಪ್ರಾರ್ಥನೆಗಳನ್ನು ಮಾಡುತ್ತಿರುವ ದೃಶ್ಯಗಳು ಪೂರ್ಣ ವಿಡಿಯೊದಲ್ಲಿ ಇವೆ. ಈ ಬಗ್ಗೆ ದೂರು ದಾಖಲಾದ ನಂತರ ಶಾಲಾ ಆಡಳಿತ ಮಂಡಳಿಯು, ಗೀತನೃತ್ಯವನ್ನು ರದ್ದು ಮಾಡಿತ್ತು. ಆದರೆ ಕೆಲವರು ವಿಡಿಯೊವನ್ನು ಎಡಿಟ್ ಮಾಡಿ , ನಮಾಜ್‌ ಹೇಳಿಕೊಡಲಾಗುತ್ತಿದೆ ಎಂದು ಸುಳ್ಳುಸುದ್ದಿ ಹರಡಿದ್ದಾರೆ ಎಂದು ಆ ವರದಿಗಳಲ್ಲಿ ವಿವರಿಸಲಾಗಿದೆ’ .

ಒಟ್ಟಾರೆಯಾಗಿ ಹೇಳುವುದಾದರೆ, ಉತ್ತರ ಪ್ರದೇಶದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಕ್ಕಾಗಿ ಶಾಲೆಯೊಂದರಲ್ಲಿ ವಿದ್ಯಾರ್ಥಿಗಳು ನಾಟಕವನ್ನು ಅಭ್ಯಾಸ ಮಾಡುತ್ತಿರುವ ಹಳೆಯ ವೀಡಿಯೊವನ್ನು ಈಗ ಕೋಮು ನಿರೂಪಣೆಯೊಂದಿಗೆ ಹಂಚಿಕೊಳ್ಳಲಾಗಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ಕೃಪೆ: ಫ್ಯಾಕ್ಟ್‌ಲಿ

ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : ಫ್ಯಾಕ್ಟ್‌ಚೆಕ್ : ಕತ್ತರಿಸಿದ ಹಸುವಿನ ತಲೆ ಮತ್ತು ಕಾಲುಗಳ ದೃಶ್ಯಗಳು ಎಲ್ಲಿಯದು ಗೊತ್ತೆ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights