ಫ್ಯಾಕ್ಟ್‌ಚೆಕ್ : ಬಟ್ಟೆ ಅಂಗಡಿಯಲ್ಲಿ ಇರಿಸುವ ಬೊಂಬೆಯನ್ನು ಬೈಕ್‌ನಲ್ಲಿ ಕೊಂಡೊಯ್ದ ದೃಶ್ಯವನ್ನು ಲವ್ ಜಿಹಾದ್ ಎಂದು ಹಂಚಿಕೆ

ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್‌ವೊಂದು ವೈರಲ್ ಆಗುತ್ತಿದ್ದು ಮುಸ್ಲಿಂ ವ್ಯಕ್ತಿಯೊಬ್ಬ ತನ್ನ ಹಿಂದೂ ಪತ್ನಿಯನ್ನು ಕೊಂದು ಆಕೆಯ ಮೃತ ದೇಹವನ್ನು ರಾಜಾರೋಷವಾಗಿ ತನ್ನಬೈಕ್‌ನ ಹಿಂಬದಿ ಸೀಟಿನಲ್ಲಿ ಇರಿಸಿಕೊಂಡು ಹೋಗುತ್ತಿದ್ದಾನೆ ಎಂದು ಪ್ರತಿಪಾದಿಸಿ ಪೋಸ್ಟ್‌ಅನ್ನು ಹಂಚಿಕೊಂಡಿದ್ದಾರೆ. ಇಲ್ಲಿ ಮತ್ತೊಬ್ಬ ಅಬ್ದುಲ್ಲನಿಂದ ಲವ್ ಜಿಹಾದ್ ನಡೆದಿದೆ ಎಂದು ಪ್ರತಿಪಾದಿಸಿ ವ್ಯಾಪಕವಾಗಿ ಪ್ರಸಾರ ಮಾಡಲಾಗುತ್ತಿದೆ.

ಸಾಮಾಜಿಕ ಮಾಧ್ಯಗಳಲ್ಲಿ ಹಂಚಿಕೊಳ್ಳಲಾದ ಫೋಟೊ ಮತ್ತು ಫೋಸ್ಟ್‌ಗಳಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿರುವ ಫೋಟೊವನ್ನು ಪರಿಶೀಲಿಸಲು ಗೂಗಲ್ ರಿವರ್ಸ್ ಇಮೇಜಸ್‌ನಲ್ಲಿ ಸರ್ಚ್ ಮಾಡಿದಾಗ, 2 ಜೂನ್, 2023 ರಂದು ಕೈರೋ 24 ಎಂಬ ಸುದ್ದಿ ಮಾಧ್ಯಮದಲ್ಲಿ ಪ್ರಕಟವಾದ ಲೇಖನವೊಂದು ಲಭ್ಯವಾಗಿದೆ.

ಕೈರೋದ ಮೊಕಟ್ಟಮ್ ಪ್ರದೇಶದಲ್ಲಿನ ಬಟ್ಟೆ ಅಂಗಡಿಯ ಮಾಲೀಕರೊಬ್ಬರು ತಮ್ಮ ಬಟ್ಟೆ ಮಳಿಗೆಗೆ ಬೇಕಿರುವ ಮಾನವಾಕೃತಿ ಬೊಂಬೆಯನ್ನು ಖರೀದಿಸಿದ್ದಾರೆ. ಆ ಆಕೃತಿಯನ್ನು ತನ್ನ ಮಳಿಗೆಗೆ ತಲುಪಿಸಲು ಡೆಲಿವರಿ ಕಂಪನಿಯವರು ಬೈಕ್‌ನಲ್ಲಿ ಇಟ್ಟುಕೊಂಡು ಹೋಗುವಾಗ ಗಾಳಿಯ ವೇಗಕ್ಕೆ ಕಾಲಿನ ಭಾಗದಲ್ಲಿ ಮುಚ್ಚಿದ್ದ ಪೇಪರ್ ಹಾರಿಹೊಗಿದೆ. ಈ ವಾಹನದ ಹಿಂದೆ ಬರುತ್ತಿದ್ದ ಮತ್ತೊಬ್ಬ ವಾಹನ ಸವಾರ ಈ ದೈಶ್ಯವನ್ನು ಸೆರೆಹಿಡಿದು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದಾನೆ.

ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿರುವ ಚಿತ್ರದ ಬಗ್ಗೆ ಸ್ಪಷ್ಟನೆ ನೀಡಲು ಅಂಗಡಿಯ ಮಾಲೀಕರು ಅಂಗಡಿಯ ಫೇಸ್‌ಬುಕ್ ಪೇಜ್‌ನಲ್ಲಿ ಸ್ಪಷ್ಟನೆ ನೀಡಿ ಪೋಸ್ಟ್‌ಅನ್ನು ಹಂಚಿಕೊಂಡಿದ್ದಾರೆ

“ಈಜಿಪ್ಟ್‌ನ ಕೈರೋದಲ್ಲಿರುವ ಮೊಕಟ್ಟಮ್ ಬಟ್ಟೆಯ ಮಳಿಗೆಯ ಮತ್ತೊಂದು ಶಾಖೆಗೆ ಮನುಷ್ಯಾಕೃತಿಯ ಬೊಂಬೆಯನ್ನು ಸಾಗಿಸಲಾಗಿದೆ. ನಮ್ಮ ಶಾಖೆಗಳ ಸಿಬ್ಬಂದಿ ತೊಂದರೆಗಳನ್ನು ಲೆಕ್ಕಿಸದೆ ತಮ್ಮ ಕೆಲಸವನ್ನು ನಿರ್ವಹಿಸಿದಾರೆ. ಈ ಕಾರಣಕ್ಕಾಗಿ ಅವರ ಸಮರ್ಪಣೆಗಾಗಿ ನಾವು ಧನ್ಯವಾದ ಹೇಳಲು ಬಯಸುತ್ತೇವೆ. ಆದರೆ ಮತ್ತೆ ಇಂತಹ ಸಾಹಸಕ್ಕೆ ಕೈ ಹಾಕಬೇಡಿ  ಎಂದು ಪೋಸ್ಟ್‌ನಲ್ಲಿ ಹೇಳಿದ್ದಾರೆ.

ಒಟ್ಟಾರೆಯಾಗಿ ಹೇಳುವುದಾದರೆ, ಬಟ್ಟೆ ಅಂಗಡಿಯ ಶೋರೂಂ ಒಂದಕ್ಕೆ ಶೋಕೇಸ್‌ನಲ್ಲಿ ನಿಲ್ಲಿಸಲು ಮಾನವಾಕೃತಿ ಬೊಂಬೆಯನ್ನು ತರಿಸಿದ್ದಾರೆ. ಈ ಗೊಂಬೆಯನ್ನು ತರುವಾಗ ರಸ್ತೆಯಲ್ಲಿ ಗಾಳಿಯ ರಭಸಕ್ಕೆ ಗೊಂಬೆಯ ಕಾಲುಗಳು ಹೊರಕ್ಕೆ ಕಾಣಿಸಿವೆ. ಇದನ್ನು ತಿಳಿಯದ ಕೆಲವರು ಅಬ್ದುಲ್ಲಾ ತನ್ನ ಹಿಂದೂ ಹೆಂಡತಿಯನ್ನು ಕೊಂದು ಲವ್ ಜಿಹಾದ್ ಮಾಡಿದ್ದಾನೆ ಎಂದು ಕೋಮು ಹಿನ್ನಲೆಯಲ್ಲಿ ಹಂಚಿಕೊಂಡಿದ್ದಾರೆ. ಆದರೆ ಇದು ಸುಳ್ಳು ಎಂದು ಆಲ್ಟ್‌ನ್ಯೂಸ್ ವರದಿ ಮಾಡಿದೆ.

ಕೃಪೆ: ಯೂಟರ್ನ್

ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : ಫ್ಯಾಕ್ಟ್‌ಚೆಕ್ : ಪ್ರಧಾನಿ ಮೋದಿ ಗಿಟಾರ್ ನುಡಿಸುತ್ತಿರುವ ಚಿತ್ರದ ಹಿಂದಿನ ವಾಸ್ತವವೇನು?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights