ಫ್ಯಾಕ್ಟ್‌ಚೆಕ್ : ಪ್ರಧಾನಿ ಮೋದಿ ಗಿಟಾರ್ ನುಡಿಸುತ್ತಿರುವ ಚಿತ್ರದ ಹಿಂದಿನ ವಾಸ್ತವವೇನು?
ಸಾಮಾಜಿಕ ಮಾಧ್ಯಮಗಳಲ್ಲಿ ಪ್ರದಾನಿ ನರೇಂದ್ರ ಮೋದಿಯವರ ಫೋಟೊವೊಂದು ವೈರಲ್ ಆಗುತ್ತಿದ್ದು, ಇವರು ವಿಶ್ವದಾದ್ಯಂತ ನಂಬರ್ 01, ಗಿಟಾರ್ ಹೊಡೆಯೋದ್ರಲ್ಲಿ ಪ್ರಖ್ಯಾತರು, ಗಿಟಾರ್ ಮೋದಿ ಜೀ ಎಂದು ಪ್ರತಿಪಾದಿಸಿ ಮೋದಿ ಗಿಟಾರ್ ನುಡಿಸುತ್ತ ಫೋಟೊಗೆ ಫೋಸ್ ನೀಡಿದ್ದಾರೆ ಎಂಬ ಹೇಳಿಕೆಯೊಂದಿಗೆ ಪೋಸ್ಟ್‌ಅನ್ನು ಹಂಚಿಕೊಳ್ಳಲಾಗಿದೆ.
ಹಾಗಿದ್ದರೆ ಈ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.
ಫ್ಯಾಕ್ಟ್‌ಚೆಕ್ :
ಸಾಮಾಜಿಕ ಮಾಧ್ಯಮಗಳಲ್ಲಿ ಗಿಟಾರ್ ಮೋದಿ ಎಂಬ ಪ್ರತಿಪಾದನೆಯೊಂದಿಗೆ ಹಂಚಿಕೊಳ್ಳಲಾಗುತ್ತಿರುವ ಚಿತ್ರವನ್ನು ಗೂಗಲ್ ರಿವರ್ಸ್ ಇಮೇಜಸ್‌ನಲ್ಲಿ ಸರ್ಚ್ ಮಾಡಿದಾಗ, ಶಹೀದ್ ಎಂಬ ಡಿಜಿಟಲ್ ಕ್ರಿಯೇಟರ್‌ವೊಬ್ಬರ ಇನ್ಸ್ಟಾಗ್ರಾಮ್ ಪೇಜ್‌ನಲ್ಲಿ ಅದೇ ಫೋಟೋ ಲಭ್ಯವಾಗಿದೆ. ಫೋಟೋ ಶೇರ್ ಮಾಡಿರುವ ಪೋಸ್ಟ್ ನಲ್ಲಿ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಮೂಲಕ ಈ ಫೋಟೋವನ್ನು ರಚಿಸಿರುವುದಾಗಿ ಸ್ಪಷ್ಟವಾಗಿ ತಿಳಿಸಿದ್ದಾರೆ. ಅವರು ತಮ್ಮ ಇನ್ಸ್ಟಾಗ್ರಾಮ್ ಬಯೋದಲ್ಲಿ ಸ್ವತಃ ‘‘AI Enthusiast’ ಎಂದು ಸ್ಪಷ್ಟವಾಗಿ ಉಲ್ಲೇಖಿಸಿದ್ದಾರೆ.
ಈ ಇನ್‌ಸ್ಟಾಗ್ರಾಮ್ ಪೇಜ್‌ನಲ್ಲಿ ಇದೇ ರೀತಿಯ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ನಿಂದ ರಚಿಸಿದ ಅನೇಕ ಸೆಲೆಬ್ರಿಟಿಗಳ ಫೋಟೋಗಳನ್ನು ಸಹ ಹೊಂದಿದೆ. ಇತ್ತೀಚೆಗೆ ಈ ಖಾತೆಯಲ್ಲಿ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ನಿಂದ ಸೃಷ್ಟಿಸಿದ ಮೋದಿಯವರ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಚಿತ್ರಗಳ ಕುರಿತಾಗಿ ಮಾಹಿತಿ ಪಡೆಯಲು ಫ್ಯಾಕ್ಟ್‌ಲಿ ತಂರವು ಇವರನ್ನು ಸಂಪರ್ಕಿಸಿದಾಗ ಇದನ್ನು ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ನಿಂದ ರಚಿಸಲಾಗಿದೆ ಎಂದು ಸ್ಪಷ್ಟಪಡಿಸಿದರು ಎಂದು ವರದಿ ಮಾಡಿದೆ.
ಇತ್ತೀಚಿನ ದಿನಗಳಲ್ಲಿ, ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ನಿಂದ ರಚಿಸಲಾದ ಫೋಟೋಗಳು ನೈಜ ಫೋಟೋಗಳಂತೆ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದೆ. ಅಂತಹ ಫೋಟೋಗಳ ಬಗ್ಗೆ FACTLY ಮಾಡಿರುವ ಫ್ಯಾಕ್ಟ್‌ಚೆಕ್‌ಗಳನ್ನು ಇಲ್ಲಿ ನೋಡಬಹುದು.
ಒಟ್ಟಾರೆಯಾ ಹೇಳುವುದಾದೆ, ಪ್ರದಾನಿ ಮೋದಿಯವರು ಬೇರೆ ಬೇರೆ ರಾಜ್ಯಗಳಿಗೆ ಬೇಟಿ ನೀಡಿದಾದ ಅಲ್ಲಿನ ಸಾಂಪ್ರದಾಯಿಕ ಉಡುಗೆಗಳನ್ನು ತೊಟ್ಟು ಫೋಸ್ ನೀಡಿರುವ ಹಲವು ಪೋಟೊಗಳು ಮಾಧ್ಯಮಗಳಲ್ಲಿ ವೈರಲ್ ಆಗಿವೆ. ಆದರೆ ಮೋದಿ ಗಿಟಾರ್ ನುಡಿಸುತ್ತಿರುವ ವೈರಲ್ ಫೋಟೋ ನಿಜವಾದ ಚಿತ್ರವಲ್ಲ, ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಎಂಬ ಸಾಫ್ಟ್‌ವೇರ್‌ನಿಂದ ರಚಿಸಲಾಗಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆ ತಪ್ಪಾಗಿದೆ.
ಇದನ್ನು ಓದಿರಿ : ಫ್ಯಾಕ್ಟ್‌ಚೆಕ್ : ಫೈನಲ್ ಪಂದ್ಯ ವೀಕ್ಷಿಸಲು ಬಂದ CSK ಅಭಿಮಾನಿಗಳು ಎಂದು ಸಂಬಂಧವಿಲ್ಲದ ಫೋಟೊ ಹಂಚಿಕೆ