ಫ್ಯಾಕ್ಟ್‌ಚೆಕ್ : ಫೈನಲ್ ಪಂದ್ಯ ವೀಕ್ಷಿಸಲು ಬಂದ CSK ಅಭಿಮಾನಿಗಳು ಎಂದು ಸಂಬಂಧವಿಲ್ಲದ ಫೋಟೊ ಹಂಚಿಕೆ
ಮಹೇಂದ್ರ ಸಿಂಗ್ ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡ ಐಪಿಎಲ್ 2023ನೇ ಆವೃತ್ತಿಯ ಟ್ರೋಫಿಯನ್ನು ತನ್ನದಾಗಿಸಿಕೊಂಡಿದೆ. ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪಾಲಿಗೆ ಇದು ಐದನೇ ಟ್ರೋಫಿ. ಅಂತೆಯೇ ನಾಯಕ ಮಹೇಂದ್ರ ಸಿಂಗ್ ಧೋನಿ ಐಪಿಎಲ್ನ ಅತ್ಯಂತ ಯಶಸ್ವಿ ನಾಯಕ ಎನಿಸಿಕೊಂಡಿದ್ದಾರೆ.
Chennai Super Kings fans are crazy on a whole new level at Ahmedabad. #CSKvGT #IPL2023Final pic.twitter.com/BeWgUFnMQB
— Anant Kashyap (@theanantkashyap) May 28, 2023
ಐಪಿಎಲ್ 16ನೇ ಆವೃತ್ತಿಯ ಫೈನಲ್ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ ತಂಡವನ್ನು ಡಕ್ವರ್ತ್ ಲೂಯಿಸ್ ನಿಯಮದ ಪ್ರಕಾರ ಐದು ವಿಕೆಟ್ಗಳಿಂದ ಸೋಲಿಸಿದ ಸಿಎಸ್ಕೆ ತಂಡ ಟ್ರೋಫಿ ತನ್ನದಾಗಿಸಿಕೊಂಡಿತು. ಏತನ್ಮಧ್ಯೆ, ಕಳೆದ ಆವೃತ್ತಿಯ ಚಾಂಪಿಯನ್ ಗುಜರಾತ್ ಟೈಟನ್ಸ್ ತಂಡಕ್ಕೆ ಟ್ರೋಫಿ ತನ್ನಲ್ಲೇ ಉಳಿಸಿಕೊಳ್ಳುವುದಕ್ಕೆ ಸಾಧ್ಯವಾಗಲಿಲ್ಲ. ಇದರ ಮಧ್ಯೆ ಸಾಮಾಜಿಕ ಮಾಧ್ಯಮಗಳಲ್ಲಿ ಫೋಟೊಗಳು ವೈರಲ್ ಆಗುತ್ತಿದ್ದು ಹಳದಿ ಟಿ-ಶರ್ಟ್‌ಗಳನ್ನು ಧರಿಸಿರುವ ಚೆನ್ನೈ ಸೂಪರ್ ಕಿಂಗ್ಸ್ ಅಭಿಮಾನಿಗಳು ಅಭಿಮಾನ ಮೆರೆದಿದ್ದಾರೆ. CSK ತಂಡದ ಅಭಿಮಾನಿಗಳು IPL ಫೈನಲ್ ಪಂದ್ಯ ವೀಕ್ಷಿಸಲು ಬಂದಿರುವ ಬೃಹತ್ ಜನಸ್ತೋಮದ ಫೋಟೊಗಳು ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ.
https://twitter.com/MahiG0AT07/status/1662519148952576000
IPL 2023 ರ ಫೈನಲ್ ಪಂದ್ಯವನ್ನು ವೀಕ್ಷಿಸಲು CSK ಅಭಿಮಾನಿಗಳ ದೊಡ್ಡ ಸಮೂಹವು ಹಳದಿ ಟಿ-ಶರ್ಟ್‌ಗಳನ್ನು ಧರಿಸಿ ರಸ್ತೆಯನ್ನೆ ಹಳದಿಮಯವಾಗಿಸಿದೆ ಎಂದು ಪ್ರತಿಪಾದಿಸಿ ಪೋಸ್ಟ್‌ಅನ್ನು ಹಂಚಿಕೊಳ್ಳಲಾಗಿದೆ. ಹಾಗಿದ್ದರೆ ಈ ಚಿತ್ರಗಳು CSK ಅಭಿಮಾನಿಗಳು ಫೈನಲ್ ಪಂದ್ಯ ವೀಕ್ಷಿಸಲು ಇಷ್ಟು ದೊಡ್ಡ ಮಟ್ಟದಲ್ಲಿ ಸೇರಿದ್ದು ನಿಜವೇ ಎಂದು ಪರಿಶೀಲಿಸೋಣ.
ಫ್ಯಾಕ್ಟ್‌ಚೆಕ್ :
ಸಾಮಾಜಿಕ ಮಾಧ್ಯಮಗಳಲ್ಲಿ CSK ಅಭಿಮಾನಿಗಳು ಫೈನಲ್ ಪಂದ್ಯ ವೀಕ್ಷಿಸಲು ಸೇರಿದ್ದ ಬೃಹತ್ ಜನಸ್ತೋಮ ಎಂದು ಮೂರು ಬೇರೆ ಬೇರೆ ಚಿತ್ರಗಳನ್ನು ಹಂಚಿಕೊಂಡಿದ್ದು ಇವು ನಿಜವಾಗಿಯೂ IPL ಫೈನಲ್ ಪಂದ್ಯ ವೀಕ್ಷಿಸಲು ಸೇರಿದ ಜನಸ್ತೋಮದ ಚಿತ್ರ ಎಂಬುದು ನಿಜವೇ ಎಂದು ಪರಿಶೀಲಿಸಿದಾಗ, ಮೂರು ಚಿತ್ರಗಳು ಬೇರೆ ಬೇರೆ ಯಾಗಿದ್ದು ಈ ಯಾವ ಚಿತ್ರಗಳು CSK ಮತ್ತು ಗುಜರಾತ್ ಟೈಟನ್ಸ್ ನಡುವಿನ ಫೈನಲ್ ಪಂದ್ಯ ವೀಕ್ಷಿಸಲು ಸೇರಿದ ಜನಸ್ತೋಮವಲ್ಲ ಎಂಬುದು ಸ್ಪಷ್ಟವಾಗಿದೆ.
ಚಿತ್ರ-1
ಮೊದಲ ಚಿತ್ರವು 2010ರಲ್ಲಿ ಇಥಿಯೋಪಿಯಾದಲ್ಲಿ ನಡೆದ ವಾರ್ಷಿಕ ಮ್ಯಾರಥಾನ್ ಓಟದ ಕಾರ್ಯಕ್ರಮವಾಗಿದೆ, ಈ ಓಟದ ಕಾರ್ಯಕ್ರಮಕ್ಕೆ ಜಗತ್ತಿನ ಬೇರೆ ಬೇರೆ ದೇಶಗಳಿಂದ ಜನರು ಭಾಗವಹಿಸುವ ಹಿನ್ನಲೆಯಲ್ಲಿ ಪ್ರಸಿದ್ದಿ ಪಡೆದಿದೆ.
CSK ಅಭಿಮಾನಿಗಳ ಚಿತ್ರ ಎಂದು ಇಥಿಯೋಪಿಯಾದಲ್ಲಿ ನಡೆದ ಗ್ರೇಟ್ ಇಥಿಯೋಪಿಯನ್ ರನ್‌ನಲ್ಲಿ ಭಾಗವಹಿಸುವವರ ಚಿತ್ರವನ್ನು ತಪ್ಪಾಗಿ ಹಂಚಿಕೊಳ್ಳಲಾಗಿದೆ. ಈ ಚಿತ್ರಕ್ಕೂ CSK ಅಭಿಮಾನಿಗಳು ಪಂದ್ಯ ವೀಕ್ಷಿಸಲು ಸೇರಿದ ಚಿತ್ರಕ್ಕೂ ಸಂಬಂಧವಿಲ್ಲ.
ಚಿತ್ರ-2
CSK ಚಭಿಮಾನಗಳ ಚಿತ್ರ ಎಂದು ಹಂಚಿಕೊಳ್ಳಲಾಗಿರುವ ಎರಡನೇ ಚಿತ್ರವು, 05 ಡಿಸೆಂಬರ್ 2012 ರಂದು ಥೈಲ್ಯಾಂಡ್‌ನ ರಾಜ ಮನೆತನದ ಭೂಮಿಬೋಲ್ ಅದುಲ್ಯದೇಜ್ ಅವರ 85 ನೇ ಹುಟ್ಟುಹಬ್ಬದ ಆಚರಣೆಗಾಗಿ ಬ್ಯಾಂಕಾಕ್‌ನಲ್ಲಿ ನೆರೆದಿದ್ದ ಜನರನ್ನು ಸೆರೆಹಿಡಿಯುತ್ತದೆ ಎಂದು ಫ್ಯಾಕ್ಟ್‌ಲಿ ವರದಿ ಮಾಡಿದೆ.
“ಬ್ಯಾಂಕಾಕ್‌ನ ಅನಾತಸಮಾಕೋಮ್ ಸಿಂಹಾಸನ ಸಭಾಂಗಣದಲ್ಲಿ ಥಾಯ್ಲೆಂಡ್‌ನ ರಾಜ ಭೂಮಿಬೋಲ್ ಅದುಲ್ಯದೇಜ್ ಅವರ ಭಾಷಣವನ್ನು ಕೇಳಲು ಹಳದಿ ಶರ್ಟ್‌ಗಳನ್ನು ಧರಿಸಿ ಸೇರಿರುವ ಥಾಯ್ ಜನ ಎಂಬ ಶೀರ್ಷಿಕೆಯೊಂದಿಗೆ ಹಂಚಿಕೊಳ್ಳಲಾಗಿದೆ.
ಚಿತ್ರ-3
ಸ್ಪೇನ್‌ನ ಗ್ರ್ಯಾನ್ ಕೆನರಿಯಾ ಕ್ರೀಡಾಂಗಣದ ಹೊರಗೆ UD ಲಾಸ್ ಪಾಲ್ಮಾಸ್ ತಂಡದ ಫುಟ್‌ಬಾಲ್ ಅಭಿಮಾನಿಗಳ ಚಿತ್ರ. ಯುಡಿ ಲಾಸ್ ಪಾಲ್ಮಾಸ್ ಸ್ಪೇನ್‌ನ ಗ್ರ್ಯಾನ್ ಕೆನರಿಯಾದ ಲಾಸ್ ಪಾಲ್ಮಾಸ್ ಮೂಲದ ಫುಟ್‌ಬಾಲ್ ತಂಡವಾಗಿದೆ.
#EFEfotos | 🔥 Empujón hacia Primera. Miles de aficionados han recibido a la UD Las Palmas en el exterior del estadio de Gran Canaria. #LaLigaSmartBank pic.twitter.com/lwZo0pAt9k
— EFE Deportes (@EFEdeportes) May 27, 2023
ಯುಡಿ ಲಾಸ್ ಪಾಲ್ಮಾಸ್ ಸಾಂಪ್ರದಾಯಿಕವಾಗಿ ಹಳದಿ ಜರ್ಸಿಗಳನ್ನು ತಮ್ಮ ಪ್ರಾಥಮಿಕ ಬಣ್ಣವಾಗಿ ಹೋಮ್ ಪಂದ್ಯಗಳಿಗೆ ಧರಿಸುತ್ತಾರೆ. ಯುಡಿ ಲಾಸ್ ಪಾಲ್ಮಾಸ್‌ನ ಅಭಿಮಾನಿಗಳು ಮತ್ತು ಬೆಂಬಲಿಗರು ತಂಡಕ್ಕೆ ತಮ್ಮ ನಿಷ್ಠೆಯನ್ನು ತೋರಿಸಲು ಪಂದ್ಯಗಳಲ್ಲಿ ಹಳದಿ ಜೆರ್ಸಿಯನ್ನು ಧರಿಸುವುದು ಸಾಮಾನ್ಯವಾಗಿದೆ. ಸ್ಟೇಡಿಯಂನ ಹೊರಗಿನ ಗೂಗಲ್ ಸ್ಟ್ರೀಟ್ ವ್ಯೂ ಚಿತ್ರಗಳು ಚಿತ್ರವು ಸ್ಪೇನ್‌ನ ಗ್ರ್ಯಾನ್ ಕೆನರಿಯಾ ಕ್ರೀಡಾಂಗಣದಿಂದ ಬಂದಿದೆಯೇ ಹೊರತು ಭಾರತದಿಂದಲ್ಲ ಎಂದು ಖಚಿತಪಡಿಸುತ್ತದೆ.
ವೈರಲ್ ಆಗಿರುವ ಮೂರು ಚಿತ್ರಗಳು CSK ತಂಡವನ್ನು ಪ್ರತ್ಸಾಹಿಸಲು ಫೈನಲ್ ಪಂದ್ಯ ವೀಕ್ಷಿಸಲು ಗುಜರಾತ್‌ಗೆ ಬಂದ ಅಭಿಮಾನಿಗಳ ಚಿತ್ರವಲ್ಲ ಎಂದು ಸ್ಪಷ್ಟವಾಗಿದೆ. ಹಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.
ಕೃಪೆ: ಫ್ಯಾಕ್ಟ್‌ಲಿ ಬೂಮ್
ಇದನ್ನು ಓದಿರಿ: ಫ್ಯಾಕ್ಟ್‌ಚೆಕ್ : ಬಂಧನದ ವೇಳೆ ಕುಸ್ತಿಪಟುಗಳು ನಗುತ್ತಾ ಸೆಲ್ಫಿ ತೆಗೆದುಕೊಂಡರೇ?