ಫ್ಯಾಕ್ಟ್‌ಚೆಕ್ : ಕಾಂಗ್ರೆಸ್ ಸರ್ಕಾರ ಬಂದ ಕೂಡಲೆ ತ್ರಿವರ್ಣ ಧ್ವಜದಲ್ಲಿ ಮಸೀದಿ ಚಿತ್ರ ಹಾಕಲಾಗಿದೆಯೇ? ಈ ಸ್ಟೋರಿ ಓದಿ

ಇತ್ತೀಚೆಗೆ ಸಾಮಾಜಿಕ ಮಾಧ್ಯಮಗಳಲ್ಲಿ ಫೋಟೊವೊಂದು ವೈರಲ್ ಆಗುತ್ತಿದ್ದು, ಸಿರಗುಪ್ಪಾದಲ್ಲಿ ಭಾರತದ ತ್ರಿವರ್ಣ ಧ್ವಜವನ್ನು ತಿರುಚಿ ಅಶೋಕ ಚಕ್ರ ಇರುವ ಜಾಗದಲ್ಲಿ ಮಸೀದಿ ಚಿತ್ರವನ್ನು ಬರೆಯಲಾಗಿದೆ ಎಂದು ಪ್ರತಿಪಾದಿಸಿ ಪೋಸ್ಟ್‌ಅನ್ನು ಹಂಚಿಕೊಳ್ಳುತ್ತಿದ್ದಾರೆ.

ಯಾವುದೇ ಫೋಟೋ ವಿವರಣೆ ಲಭ್ಯವಿಲ್ಲ.ಯಾವುದೇ ಫೋಟೋ ವಿವರಣೆ ಲಭ್ಯವಿಲ್ಲ.ಯಾವುದೇ ಫೋಟೋ ವಿವರಣೆ ಲಭ್ಯವಿಲ್ಲ.

“ಈ ಘಟನೆ ಸಿರಗುಪ್ಪದಲ್ಲಿ ನಡೆದಿದ್ದು, ಅಶೋಕ ಚಕ್ರದ ಬದಲು ಮಸೀದಿಯ ಚಿತ್ರ ಬಂದಾಯ್ತು. ಇನ್ನು ಏನೇನು ಕಾದಿದೆಯೋ ಏನೋ?
ನೀವು ಮಾತ್ರ 2 ರು ಬೆಲೆಯೇರಿಕೆ ಅಂತ ಬೊಬ್ಬೆ ಹೊಡೀತಾ ಇರಿ ಅತ್ತ ಕಡೆ ಅವರ ಬಿರಿಯಾನಿ ಬೇಯಿಸಿಕೊಳ್ತಾ ಹೋಗ್ತಾರೆ.
ಈ ಪೋಸ್ಟ್ ಸರ್ರಿಯಾಗಿ ಶೇರ್ ಆದ್ರೆ ಎರಡು ಮುರು ದಿನದಲ್ಲಿ ಏನಾದ್ರು ಆಗಬಹುದು ಪ್ರಯತ್ನ ಮಾಡಿ. ನೋಡಿಯೂ ನೋಡದಂತೆ ಇರುವ ಸತ್ತಪ್ರಜೆಗಳು ತಮ್ಮ DNA ಟೆಸ್ಟ್ ಮಾಡಿಸಿಕೊಳ್ಳಿ” ಎಂಬ ಹೇಳಿಕೆಯೊಂದಿಗೆ ಪೋಸ್ಟ್‌ಅನ್ನು ಹಂಚಿಕೊಳ್ಳಲಾಗಿದೆ.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ರಚನೆಯಾಗುತ್ತಿದಂತೆ ಈ ಪೋಸ್ಟ್‌ಅನ್ನು ವಾಟ್ಸಾಪ್ ಮತ್ತು ಫೇಸ್‌ಬುಕ್‌ನಲ್ಲಿ ಕೋಮು ದ್ವೇಷದ ಹಿನ್ನಲೆ ಮತ್ತು ಕಾಂಗ್ರೆಸ್ ಮುಸ್ಲಿಮರನ್ನು ಓಲೈಸುತ್ತಿದೆ ಎಂಬರ್ಥದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಹಾಗದ್ದರೆ ಈ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :
ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಪ್ರಸಾರವಾಗುತ್ತಿರುವ ಫೋಸ್ಟ್‌ ಮತ್ತು ಪೋಟೊಗಳನ್ನು ಪರಿಶೀಲಿಸಲು ಗೂಗಲ್ ರಿವರ್ಸ್ ಇಮೇಜಸ್‌ನಲ್ಲಿ ಸರ್ಚ್ ಮಾಡಿದಾಗ ಹೆಚ್ಚಿನ ಮಾಹಿತಿ ಲಭಿಸದ ಕಾರಣ ಫೇಸ್‌ಬುಕ್ ಸರ್ಚ್ ಮಾಡಿದಾಗ, ಇತ್ತೀಚಿನ ಫೋಸ್ಟ್‌ ಸೇರಿದಂತೆ ಹಲವು ಪೋಸ್ಟ್‌ಗಳು ಕಂಡುಬಂದಿವೆ. ಇದರಲ್ಲಿ ಅತಿ ಹಳೇಯ ಪೋಸ್ಟ್ 2018ರ ನವೆಂಬರ್‌ ನಲ್ಲ ಪೋಸ್ಟ್‌ ಮಾಡಿರುವ ಟ್ವಿಟರ್ ಲಭ್ಯವಾಗಿದೆ.
ತ್ರಿವರ್ಣ ಧ್ವಜದ ಮಧ್ಯೆ ಮಸೀದಿ ಚಿತ್ರ, ವೈರಲ್‌ ಮೆಸೇಜ್‌ ಹಿಂದಿನ ಸತ್ಯ ಏನು?ತ್ರಿವರ್ಣ ಧ್ವಜದ ಮಧ್ಯೆ ಮಸೀದಿ ಚಿತ್ರ, ವೈರಲ್‌ ಮೆಸೇಜ್‌ ಹಿಂದಿನ ಸತ್ಯ ಏನು?
ವೈರಲ್‌ ಫೋಸ್ಟ್‌ನಲ್ಲಿರುವ ಫೋಟೋವನ್ನು ಪರಿಶೀಲನೆ ನಡೆಸಿದಾಗ ಫೋಟೋ ಹಿಂದೆ ಭವಾನಿ ಸೂಪರ್‌ ಮಾರ್ಕೆಟ್‌ ಎಂದು ಬರೆದಿರುವುದು ಪತ್ತೆಯಾಗಿದೆ. ಅದನ್ನು ಗೂಗಲ್‌ ಲೊಕೇಶನ್‌ ಮೂಲಕ ಪತ್ತೆ ಮಾಡಿದಾಗ ಅದು ಸಿರಗುಪ್ಪದಲ್ಲಿರುವ ಒಂದು ಮಾರ್ಕೆಟ್‌ ಇರುವ ಕಟ್ಟಡ ಎಂದು ತಿಳಿದುಬಂದಿದೆ. ಇದನ್ನು ಗೂಗಲ್‌ ಮ್ಯಾಪ್‌ನಲ್ಲಿ ನೋಡಬಹುದು.
ಪೋಸ್ಟ್‌ಗೆ ಸಂಬಂಧಿಸಿದಂತೆ ಮತ್ತಷ್ಟು ಸರ್ಚ್ ಮಾಡಿದಾಗ, ನ್ಯೂಸ್‌ಚೆಕ್ಕರ್ ಫ್ಯಾಕ್ಟ್‌ಚೆಕ್ ತಂಡ  ಬಳ್ಳಾರಿ ಜಿಲ್ಲಾ ಪೊಲೀಸ್‌ ಕಂಟ್ರೋಲ್‌ ರೂಮ್ ಅನ್ನು ಸಂಪರ್ಕಿಸಿದ್ದು, ಸಿರಗುಪ್ಪದ ಘಟನೆ ಬಗ್ಗೆ ಎಫ್‌ಐಆರ್ ದಾಖಲಾಗಿದೆಯೇ ಎಂಬ ಬಗ್ಗೆ ವಿಚಾರಣೆ ನಡೆಸಿದೆ. ಈ ವೇಳೆ ಕಂಟ್ರೋಲ್‌ ರೂಮ್‌ ಪೊಲೀಸರು “ಅಂತಹ ಯಾವುದೇ ದಾಖಲೆ ಲಭ್ಯವಿಲ್ಲ” ಎಂದು ಹೇಳಿದ್ದಾರೆ.
ಬಳಿಕ ಸಿರಗುಪ್ಪ ಪೊಲೀಸ್ ಠಾಣೆಯ ಇನ್ಸ್‌ ಪೆಕ್ಟರ್‌ ಅವರನ್ನು ಸಂಪರ್ಕಿಸಲಾಗಿದ್ದು, ಅವರು ನ್ಯೂಸ್‌ ಚೆಕರ್ ಗೆ ಪ್ರತಿಕ್ರಿಯೆ ನೀಡಿ “ಈ ಮೆಸೇಜ್‌ ಸುಮಾರು 4 ವರ್ಷದಿಂದ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವುದಾಗಿ ಹೇಳಿದ್ದಾರೆ. ಜೊತೆಗೆ ಈ ಬಗ್ಗೆ ಪೊಲೀಸ್‌ ಹಿರಿಯ ಅಧಿಕಾರಿಗಳ ಗಮನಕ್ಕೆ ತರಲಾಗಿದೆ. ಆದರೆ ಮೆಸೇಜ್‌ ಬಗ್ಗೆ ಆಗಲಿ, ಧ್ವಜ ಹಾರಿಸಲಾಗಿದೆ ಎಂಬ ಬಗ್ಗೆ ಆಗಲಿ ಯಾವುದೇ ಕೇಸುಗಳು ದಾಖಲಾಗಿಲ್ಲ” ಎಂದು ತಿಳಿಸಿದ್ದಾರೆ ಎಂದು ನ್ಯೂಸ್‌ ಚೆಕರ್ ವರದಿ ಮಾಡಿದೆ.
ಒಟ್ಟಾರೆಯಾಗಿ ಹೇಳುವುದಾದರೆ, ಕಳೆದ ಎರಡು ವಾರಗಳಿಂದ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿರುವ ಚಿತ್ರಕ್ಕೆ ಸಂಬಂಧಿಸಿದಂತೆ ಪರಿಶೀಲಿಸಿದಾಗ, ವೈರಲ್ ಪೋಸ್ಟ್‌ 2018ರಿಂದ ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದೆ ಎಂದು ಪೊಲೀಸ್‌ ಅಧಿಕಾರಿಗಳು ಖಚಿತಪಡಿಸಿದ್ದಾರೆ. ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ರಚನೆಯಾಗುತ್ತಿದಂತೆ, ಹಳೆಯ ಮತ್ತು ಸಂಬಂಧವಿಲ್ಲ ಫೋಟೊವನ್ನು ಹಂಚಿಕೊಳ್ಳವ ಮೂಲಕ ಕಾಂಗ್ರೆಸ್ ಮುಸ್ಲಿಮರನ್ನು ಓಲೈಕೆ ಮಾಡುತ್ತಿದೆ. ಕಾಂಗ್ರೆಸ್ ಹಿಂದೂ ವಿರೋಧಿ ಎಂಬ ಭಾವನೆ ಬರುವಂತೆ ಕೋಮು ಸಾಮರಸ್ಯ ಹಾಳು ಮಾಡುವ ಉದ್ದೇಶದಿಂದ ಹಂಚಿಕೊಳ್ಳಲಾಗುತ್ತಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ

ಇದನ್ನು ಓದಿರಿ : ಫ್ಯಾಕ್ಟ್‌ಚೆಕ್ : ಚುನಾವಣಾ ಫಲಿತಾಂಶದ ಬೆನ್ನಲ್ಲೆ ಕೋಮು ಸಾಮರಸ್ಯ ಕದಡುವ ನಕಲಿ ವಿಡಿಯೋ ವೈರಲ್


ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights