ಸಾಹುಕಾರ ಸಿಡಿ : ಎರಡೇ ದಿನದಲ್ಲಿ ಷಡ್ಯಂತ್ರಿಗಳ ವಿರುದ್ಧ ಬಾಂಬ್ ಸ್ಪೋಟ!

ಜಾರಕಿಹೊಳಿ ಬ್ರದರ್ಸ್ ಎರಡೇ ದಿನದಲ್ಲಿ ಸಿಡಿ ಷಡ್ಯಂತ್ರಿಗಳ ವಿರುದ್ಧ ಬಾಂಬ್ ಸ್ಪೋಟ ಸಿಡಿಸಲಿದ್ದಾರೆನ್ನುವ ಅನುಮಾನ ಶುರುವಾಗಿದೆ.

ಮಾಜಿ ಸಚಿವ ರಮೇಶ್ ಜಾರಕಿಹೊಳಿ ರಾಸಲೀಲೆ ಸಿಡಿ ಕೇಸ್ ತನಿಖೆ ರೂಪರೇಷಿ ಬದಲಾಗುವ ಸಾಧ್ಯತೆ ಇದೆ. ಎಸ್ಐಟಿ ಮೂಲಕ ಮೊದಲ ಪ್ರಾಥಮಿಕ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಾಗುತ್ತದೆ. ಇವರು ಯಾವುದೇ ವ್ಯಕ್ತಿಗಳನ್ನು ಬಂಧಿಸಲು ಆಗುವುದಿಲ್ಲ. ಇಲ್ಲಿ ಕೋರ್ಟ್ ತನಿಖೆ ಇರುವುದಿಲ್ಲ. ಕೇವಲ ವರದಿ ಮಾತ್ರ ನೀಡಲಾಗುತ್ತದೆ. ಹೀಗಾಗಿ ಎಸ್ ಐಟಿ ಹಲ್ಲಿಲ್ಲದ ಹಾವಿನಂತೆ. ಆದ್ದರಿಂದ ಬಿಜೆಪಿ ಬಜೆಟ್ ಅಧಿವೇಶನದಲ್ಲಿ ವಿಪಕ್ಷ ನಾಯಕರು ತನಿಖೆ ಧ್ವನಿ ಎತ್ತದಿರಲಿ ಎನ್ನುವ ಕಾರಣಕ್ಕೆ ಎಸ್ಐಟಿ ತನಿಖೆಗೆ ನೀಡಲಾಗಿದೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ. ಇದರ ಮಧ್ಯೆ ಜಾರಕಿಹೊಳಿ ಬ್ರದರ್ಸ್ ಎರಡೇ ದಿನದಲ್ಲಿ ಸಿಡಿ ಷಡ್ಯಂತ್ರಿಗಳ ವಿರುದ್ಧ ಬಾಂಬ್ ಸ್ಪೋಟಗೊಳಿಸಲಿದ್ದಾರೆನ್ನುವ ಮಾತುಗಳು ಕೇಳಿ ಬರುತ್ತಿವೆ.

ಎರಡೇ ದಿನದಲ್ಲಿ ಸಿಡಿ ಷಡ್ಯಂತ್ರಿಗಳ ವಿರುದ್ಧ ಬಾಂಬ್ ಸ್ಪೋಟವಾಗುವ ಸಾಧ್ಯತೆ ಇದೆ. ಜಾರಕಿಹೊಳಿ ಬ್ರದರ್ಸ್ ಬಾಂಬ್ ಸಿಡಿಸಲು ತಂತ್ರ ಹೆಣೆಯುತ್ತಿದ್ದಾರೆನ್ನಲಾಗುತ್ತಿದೆ.

ಸಿಡಿ ತನಿಖೆಗೆ ರಮೇಶ್ ಸಹೋದರರು ದೂರು ಕೊಡಲು ಮುಂದಾಗಿಲ್ಲ. ಬದಲಿಗೆ ಸಿಡಿ ಷಡ್ಯಂತ್ರಿಗಳ ಹುಡುಕಾಟವನ್ನು ನಡೆಸಿದ್ದಾರೆ. ಎಸ್ಐಟಿ ಗೆ ತನಿಖೆ ಮನವಿ ಸಲ್ಲಿಸಿ ಸಿಡಿ ಸಾಹುಕಾರರನ್ನು ಹುಡುಕಲು ಮುಂದಾಗಿದ್ದಾರೆ. ಕುಟುಂಬದ ತೇಜೋವಧೆ ಮಾಡಿದವರನ್ನು ನಾವು ಬಿಡುವುದಿಲ್ಲ ಎಂದು ಹೇಳಿದ್ದಾರೆ. ಪೊಲೀಸ್ ದೂರು ಕೂಡ ನೀಡುವುದಾಗಿ ರಮೇಶ್ ಸ್ಪಷ್ಟವಾಗಿ ಹೇಳಿದ್ದಾರೆ.

ಒಂದು ವೇಳೆ ದೂರು ನೀಡಿದರೆ ತನಿಖೆ ತೀವ್ರ ಗೊಳ್ಳುವ ಸಾಧ್ಯತೆ ಇದೆ. ಒಂದು ವೇಳೆ ತನಿಖೆ ಚುರುಕುಗೊಂಡರೆ 2+3+4 ಜನರನ್ನು ಬಯಲಿಗೆಳಿವ ಸಾಧ್ಯತೆ ಇದೆ. ಒಟ್ಟಿನಲ್ಲಿ ಷಡ್ಯಂತ್ರಿ ಸಾಹುಕಾರ ಯಾರು ಎನ್ನುವ ಬಗ್ಗೆ ಜಾರಕಿಹೊಳಿ ಬ್ರದರ್ಸ್ ಇಷ್ಟರಲ್ಲೇ ಬಯಲಿಗೆಳಿಯುವ ಲಕ್ಷಣಗಳು ಕಂಡುಬರುತ್ತಿರುವುದು ಸುಳ್ಳಲ್ಲ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights