ದಕ್ಷಿಣ ಆಫ್ರಿಕಾ ಮೂಲದ ಕೋವಿಡ್ ಸೋಂಕಿತ ವ್ಯಕ್ತಿ ಡಿಸ್ಚಾರ್ಜ್ : ಕುಟುಂಬಸ್ಥರು ನಿರಾಳ!
ದಕ್ಷಿಣ ಆಫ್ರಿಕಾ ಕೋವಿಡ್ ಕೊರೊನಾ ಸೋಂಕು ತಗುಲಿದ ಶಿವಮೊಗ್ಗದ ವ್ಯಕ್ತಿ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದು ಕುಟುಬಂಸ್ಥರು ನಿರಾಳರಾಗಿದ್ದಾರೆ.
ಹೌದು… ಶಿವಮೊಗ್ಗದ ಜಿಲ್ಲಾ ಸರ್ಕಾರಿ ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವ್ಯಕ್ತಿಗೆ ದಕ್ಷಿಣ ಆಫ್ರಿಕಾ ಮೂಲದ ಕೊರೊನಾ ಸೋಂಕು ತಗುಲಿ ಭಾರೀ ಆತಂಕವನ್ನೇ ಸೃಷ್ಟಿ ಮಾಡಿತ್ತು. ಈತನಿಗೆ ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕದಲ್ಲಿದ್ದ 30 ಜನರನ್ನೂ ಪರೀಕ್ಷೆಗೆ ಒಳಪಡಿಸಲಾಗಿತ್ತು. ಆದರೆ ಅದೃಷ್ಟವಶಾತ್ ಇವ್ರಿಲ್ಲಿ ಯಾರಿಗೂ ಸೋಂಕು ಇರುವುದು ಪತ್ತೆಯಾಗಿಲ್ಲ.
ಸೋಂಕಿತ ವ್ಯಕ್ತಿ ಡಿಸ್ಚಾರ್ಜ್ ಆಗಿದ್ದಾರೆ. ಆಶ್ಚರ್ಯ ಎಂದರೆ ಸೋಂಕಿತ ವ್ಯಕ್ತಿಗೆ ಲಕ್ಷಣಗಳು ಇರಲಿಲ್ಲ. ವಿದೇಶಕ್ಕೆ ಹೋಗಿದ್ದ ವ್ಯಕ್ತಿ ಫೆಬ್ರವರಿ 24ಕ್ಕೆ ಈತ ಬೆಂಗಳೂರಿನಿಂದ ಶಿವಮೊಗ್ಗಕ್ಕೆ ಪ್ರಯಾಣ ಮಾಡಿರುತ್ತಾನೆ. ಶಿವಮೊಗ್ಗಕ್ಕೆ ಬಂದು ಕೆಲ ದಿನಗಳ ಬಳಿಕ ಕೊರೊನಾ ವರದಿ ಬಿಡುಗಡೆ ಮಾಡಲಾಗಿದೆ. ಅಷ್ಟರಲ್ಲಾಗಲೇ ಮನೆ ಕುಟುಂಬದವರೊಂದಿಗೆ ವ್ಯಕ್ತಿ ಬೆರತಾಗಿತ್ತು. ಹೀಗಾಗಿ ಈತನ ಸಂಪರ್ಕದಲ್ಲಿದ್ದ 30 ಜನರನ್ನು ಪರೀಕ್ಷೆಗೆ ಒಳಪಡಿಸಲಾಗಿತ್ತು. ಅದೃಷ್ಟವಶಾತ್ ಇವರ್ಯಾರಿಗೂ ಸೋಂಕು ಇರುವುದು ದೃಢಪಟ್ಟಿಲ್ಲ.
ಒಂದು ವೇಳೆ ಕುಟುಂಬಸ್ಥರಿಗೆ ಸೋಂಕು ತಗುಲಿದ್ದರೆ ದೊಡ್ಡ ಅಪಾಯವನ್ನೇ ಎದರಿಸಬೇಕಾಗಿತ್ತು. ಹೀಗಾಗಿ ವರದಿ ತಡವಾಗಿ ಬಂದ ಹಿನ್ನೆಲೆ ಕುಟುಂಬಸ್ಥರು ಆರೋಗ್ಯ ಇಲಾಖೆ ವಿರುದ್ಧ ಕಿಡಿ ಕಾರಿದ್ದಾರೆ. ಆರೋಗ್ಯ ಅಧಿಕಾರಿಗಳ ನಿರ್ಲಕ್ಷ್ಯ ಮಾಡಿದ್ದಕ್ಕೆ ಕುಟುಂಬಸ್ಥರು ಆಕ್ರೋಶ ಹೊರಹಾಕಿದ್ದಾರೆ.