‘ರಾಜ್ಯದಲ್ಲಿ ಸಿಡಿ ತಯಾರಿಸುವ ಫ್ಯಾಕ್ಟರಿಗಳಿವೆ’ – ಯತ್ನಾಳ್ ಹೊಸ ಬಾಂಬ್!

ಮಾಜಿ ಸಚಿವ ರಮೇಶ್ ಜಾರಕಿಹೊಳಿ ರಾಸಲೀಲೆ ಸಿಡಿ ವಿಚಾರ ಸಾಕಷ್ಟು ಟ್ವಿಸ್ಟ್ ಪಡೆದುಕೊಳ್ಳುತ್ತಿದೆ. ಎಸ್ಐಟಿ ತನಿಖೆ ಮದ್ಯೆ ಶಾಸಕ ಬಸನಗೌಡ ಯತ್ನಾಳ್ ಸಿಡಿ ಬಗ್ಗೆ ಹೊಸ ಬಾಂಬ್ ಸಿಡಿಸಿದ್ದಾರೆ.

ಬಿಜಾಪುರದಲ್ಲಿ ರಮೇಶ್ ಸಿಡಿ ಬಗ್ಗೆ ಮಾತನಾಡಿದ ಯತ್ನಾಳ್ ಹೊಸ ಬಾಂಬ್ ಸಿಡಿಸಿದ್ದಾರೆ. ” ರಾಜ್ಯದಲ್ಲಿ ಸಿಡಿ ತಯಾರಿಸುವ ಫ್ಯಾಕ್ಟರಿಗಳಿವೆ. ಇಬ್ಬರು ಸಿಡಿ ತಯಾರಕರಿದ್ದಾರೆ. ಒಬ್ಬರು ಕಾಂಗ್ರೆಸ್ ನಲ್ಲಿದ್ದಾರೆ. ಇನ್ನೊಬ್ಬರು ಬಿಜೆಪಿಯಲ್ಲಿದ್ದಾರೆ. ಬ್ಲಾಕ್ ಮೇಲ್ ಮಾಡುವ ಕೆಲವರು ಬೆಂಗಳೂರಿನಲ್ಲಿದ್ದಾರೆ ” ಎಂದು ಮತ್ತೊಂದು ಗುಟ್ಟು ರಟ್ಟು ಮಾಡಿದ್ದಾರೆ.

ಯತ್ನಾಳ್ ಹೇಳಿದಂತೆ ಸಿಡಿ ತಯಾರಿಸುವ ಫ್ಯಾಕ್ಟರಿಗಳು ಇದ್ದಿದ್ದೇ ಆದರೆ ಅವು ಎಲ್ಲಿವೆ? ಅವುಗಳನ್ನು ನಡೆಸುವವರು ಯಾರು? ಎನ್ನುವ ಪ್ರಶ್ನೆ ಉದ್ಬವಿಸಿವೆ. ಆದರೂ ಸಿಡಿ ತಯಾರಕರು ಯಾರು ಎನ್ನುವ ಬಗ್ಗೆ ಹೇಳದೇ ಹೋದರೂ ಅವರು ಎಲ್ಲಿದ್ದಾರೆ ಎನ್ನುವ ಸುಳಿವು ಕೊಟ್ಟಿದ್ದಾರೆ ಯತ್ನಾಳ್.

ಸಿಡಿ ತಯಾರಕರು ಕಾಂಗ್ರೆಸ್ ಹಾಗೂ ಬಿಜೆಪಿಯಲ್ಲಿ ಇದ್ದಾರೆ ಎಂದು ಸಿಡಿ ವಿಚಾರಕ್ಕೆ ಮತ್ತಷ್ಟು ಟ್ವಿಸ್ಟ್ ಕೊಟ್ಟಿದ್ದಾರೆ. ಈ ಹಿಂದೆ 26 ಸಿಡಿಗಳು ಇವೆ ಎನ್ನುವ ಹೇಳಿಕೆ ನೀಡಿ ಗೊಂದಲ ಸೃಷ್ಟಿ ಮಾಡಿದ್ದ ಯತ್ನಾಳ್, ಸದ್ಯ ಮತ್ತೊಂದು ಬಾಂಬ್ ಸಿಡಿಸಿದ್ದಾರೆ. ಸಿಡಿ ತಯಾರಿಸಿ ಕೋಟಿಗಟ್ಟಲೆ ವ್ಯವಹಾರ ಮಾಡಲಾಗುತ್ತದೆ ಎಂದು ಹೇಳಿದ್ದಾರೆ.

ಆದರೂ ಒಬ್ಬ ಶಾಸಕರಾಗಿ ಯತ್ನಾಳ್ ಹೇಳುತ್ತಿರುವ ಈ 26 ಸಿಡಿಗಳು, ಫ್ಯಾಕ್ಟರಿಗಳ ಬಗ್ಗೆ ತನಿಖೆಯಾಗಬೇಕಿದೆ.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights