‘ಯತ್ನಾಳ್ ಕಾಂಗ್ರೆಸ್ನ ಬೀ-ಟೀಂ ಆಗಿ ಕೆಲಸ ಮಾಡುತ್ತಿದ್ದಾರೆ’ – ಮುರುಗೇಶ್ ನಿರಾಣಿ

ಪಂಚಮಸಾಲಿ 2ಎ ಮೀಸಲಾತಿ ನೀಡುವ ಸಂಬಂಧ ಬಸವಜಯಮೃತ್ಯಂಜಯ್ ಸ್ವಾಮಿ ಅವರ ನೇತೃತ್ವದಲ್ಲಿ ನಡೆಯುತ್ತಿರುವ ಸಮಾವೇಶದಕ್ಕೆ ರಾಜಕೀಯ ಬಣ್ಣ ಹಚ್ಚಲಾಗುತ್ತಿದೆ. ಬಸವಜಯಮೃತ್ಯಂಜಯ್ ಸ್ವಾಮಿಯವರನ್ನು ವಿಜಯಾನಂದ ಕಾಶಪ್ಪನವರು ಮತ್ತು ಯತ್ನಾಳ ಅವರ ಕಪಿಮುಷ್ಟಿಯಲ್ಲಿ ಇಟ್ಟುಕೊಂಡಿದ್ದಾರೆ. ಅವರ ಸ್ವಾರ್ಥಕ್ಕಾಗಿ ಬಳಕೆ ಮಾಡಿಕೊಂಡಿದ್ದಾರೆ. ನಿನ್ನೆಯ ಸಮಾವೇಶ ಕಾಂಗ್ರೆಸ್ ಪ್ರೇರಿತ ಎಂದು ಸಚಿವ ಮುರುಗೇಶ್ ನಿರಾಣಿ ಹೇಳಿದ್ದಾರೆ.

“ಬಸನಗೌಡ ಯತ್ನಾಳ್ ನಮ್ಮ ಪಕ್ಷದವರ ಮೇಲೆ ಆರೋಪ ಮಾಡಿದ್ದು ನೋಡಿದ್ದೇವೆ. ಇದು ಶೋಭೆ ತರುವಂತದ್ದಲ್ಲ. ನಿನ್ನೆ ನಡೆದ ಸಮಾವೇಶವು ಕೂಡ ಕಾಂಗ್ರೆಸ್ ಪ್ರೇರಿತ ಸಮಾವೇಶದಂತೆ ಇತ್ತು. ಯತ್ನಾಳ್ ಕಾಂಗ್ರೆಸ್ನ ಬೀ-ಟೀಂ ಆಗಿ ಕೆಲಸ ಮಾಡುತ್ತಿದ್ದಾರೆ. ಅಷ್ಟೇ ಅಲ್ಲ ಬಸವಜಯಮೃತ್ಯಂಜಯ್ ಸ್ವಾಮಿಯವರನ್ನು ವಿಜಯಾನಂದ ಕಾಶಪ್ಪನವರು, ಯತ್ನಾಳ ಅವರ ಕಪಿಮುಷ್ಟಿಯಲ್ಲಿ ಇಟ್ಟುಕೊಂಡಿದ್ದಾರೆ. ಅವರ ಸ್ವಾರ್ಥಕ್ಕಾಗಿ ಬಳಕೆ ಮಾಡಿಕೊಂಡಿದ್ದಾರೆ. ನೀನು ಪಕ್ಷದ ಆಶೀರ್ವಾದದಿಂದ ಗೆದ್ದು ಬಂದಿದ್ದೀಯಾ. ಪಕ್ಷ ಬಿಟ್ಟು ಬಂದು ನಂತರ ಯಡಿಯೂರಪ್ಪ, ಮೋದಿ ಹೆಸರಿಲ್ಲದೇ ಗೆದ್ದು ತೋರಿಸು” ಎಂದು ಸಚಿವ ಮುರುಗೇಶ್ ನಿರಾಣಿ ಏಕವಚನದಲ್ಲೇ ವಾಗ್ದಾಳಿ ಮಾಡಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿದ ಸ್ವಾಮಿಗಳು “ಕಾಶಪ್ಪನವರು, ಯತ್ನಾಳ ಅವರು ನಮ್ಮ ಪ್ರತಿಭಟನೆಗೆ ಸಹಕಾರಕ್ಕೆ ಮುಂದಾಗಿದ್ದಾರೆ. ಹೀಗಾಗಿ ನಾನು ಅವರ ಸಲಹೆ ಕೇಳಿಕೊಂಡಿದ್ದೇನೆ ಹೊರತು ಅವರು ನಮ್ಮನ್ನು ದಾರಿ ತಪ್ಪಿಸಿಲ್ಲ” ಎಂದಿದ್ದಾರೆ.

 

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights