ಫ್ಯಾಕ್ಟ್‌ಚೆಕ್: ಪ್ರಧಾನಿ ಮೋದಿ ವಿಶ್ವನಾಯಕರ ಮಧ್ಯದಲ್ಲಿರುವಂತೆ ಎಡಿಟ್ ಫೋಟೊ ಹಂಚಿಕೆ

ಜರ್ಮನಿಯಲ್ಲಿ ನಡೆದ ಜಿ -7 ಶೃಂಗಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗಿಯಾಗಿದ್ದರು. ಅಮೆರಿಕ ಅಧ್ಯಕ್ಷ ಜೋ ಬೈಡನ್, ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊ ಮತ್ತು ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಸೇರಿದಂತೆ ವಿವಿಧ ರಾಷ್ಟ್ರಗಳ ನಾಯಕರನ್ನು ಭೇಟಿ ಮಾಡಿ ಮೋದಿ ಮಾತುಕತೆ ನಡೆಸಿದರು. ಈ ಸಭೆಯ ನಂತರ ಎಲ್ಲ ನಾಯಕರು ಫೋಟೋಗೆ ಪೋಸ್‌ ನೀಡಿರುವ ಚಿತ್ರ ವೈರಲ್ ಆಗಿದೆ. ವೈರಲ್ ಫೋಟೋದಲ್ಲಿ ಪ್ರಧಾನಿ ಮೋದಿಯವರು ವಿಶ್ವ ಮಟ್ಟದ ನಾಯಕರೆಲ್ಲರಿಗಿಂತ ಮುಂದಿನ ಸಾಲಿನಲ್ಲಿ ನಿಂತು ಫೋಟೋ ತೆಗೆಸಿಕೊಂಡಿದ್ದಾರೆಂದು ಪ್ರತಿಪಾದಿಸಿ ಪೋಸ್ಟ್ ಹಂಚಿಕೊಳ್ಳಲಾಗಿದೆ. ಇದು ನಿಜವೇ ಎಂಬುದನ್ನು ಪರಿಶೀಲಿಸೋಣ.

ಫೋಟೋ ಕೊನೆಯಲ್ಲಿ ನಿಂತಿರುವ ಮೋದಿಯನ್ನು ಮುಂದೆ ನಿಂತಿರುವಂತೆ ಎಡಿಟ್ ಮಾಡಿದ್ದಾರೆ

ಬಲಪಂಥೀಯ ಪ್ರತಿಪಾದಕರೂ, ಸಂಘಪರಿವಾರದ ಮತ್ತು BJP ಬೆಂಬಲಿಗರು ಪ್ರಧಾನಿ ನರೇಂದ್ರ ಮೋದಿವರು ಜಿ-7 ಶೃಂಗಸಭೆಯಲ್ಲಿ ತೆಗೆಸಿಕೊಂಡ ಫೋಟೋವನ್ನು ಹಂಚಿಕೊಂಡಿದ್ದಾರೆ. ಎಲ್ಲಾ ನಾಯಕರಿಗಿಂತ ಮುಂದಿನ ಸಾಲಿನಲ್ಲಿ ನಿಂತು ನರೇಂದ್ರ ಮೋದಿ ಫೋಸ್ ನೀಡುತ್ತಿರುವಂತೆ ಫೋಟೋವನ್ನು ಹಂಚಿಕೊಂಡಿದ್ದಾರೆ. ಆದರೆ ಈ ಫೋಟೊ ಎಡಿಟ್ ಮಾಡಲಾಗಿದೆ. ವಾಸ್ತವಾಗಿ ಮೋದಿ ಎಲ್ಲಾ ನಾಯಕರು ನಿಂತಿರುವ ಸಾಲಿನಲ್ಲೆ ಕೊನೆಯಲ್ಲಿ ನಿಂತಿದ್ದಾರೆ. ಕೆಲವರು ಫೋಟೋವನ್ನು ಎಡಿಟ್ ಮಾಡಿ ಎಲ್ಲರಿಗಿಂತ ಮುಂದಿನ ಸಾಲಿನಲ್ಲಿ ನಿಂತಿರುವಂತೆ ಮಾಡಿ ಹಂಚಿಕೊಂಡಿದ್ದಾರೆ.

ಒಟ್ಟಾರೆಯಾಗಿ ಹೇಳುವುದಾರೆ ಪ್ರಧಾನಿ ನರೇಂದ್ರ ಮೋದಿ ಎಲ್ಲರೊಂದಿಗೆ ಸಾಲಿನಲ್ಲಿ ನಿಂತು ತೆಗೆಸಿಕೊಂಡುಕೊಂಡಿರುವ ಫೋಟೋವನ್ನು ಎಲ್ಲರಿಗಿಂತ ಮುಂದೆ ನಿಂತು ತೆಗೆಸಿಕೊಂಡಿರುವಂತೆ ಫೋಟೋವನ್ನು ಎಡಿಟ್ ಮಾಡಿ ಹಂಚಿಕೊಳ್ಳಲಾಗಿದೆ.

ಫೋಟೋ, ವಿಡಿಯೊದಲ್ಲಿ ಮುಂದೆ ಹಿಂದೆ ಇರುವುದು ಮುಖ್ಯವಲ್ಲ, ದೇಶದ ಜನರ ಜೀವನ ಮಟ್ಟ ಯಾವ ಸ್ಥಿತಿಯಲ್ಲಿದೆ, ಎಷ್ಟು ಸುಧಾರಿಸಿದೆ ಎನ್ನುವ ಆಧಾರದಲ್ಲಿ ಒಂದು ದೇಶದ ಪ್ರಧಾನಿಯ ಜನಪ್ರೀಯತೆ ಅವಲಂಭಿತವಾಗಿರುತ್ತದೆ. ಅದನ್ನು ಪರಿಗಣಿಸದೆ ಪ್ರಧಾನಿಯೊಬ್ಬರು ತೊಡುವ ಬಟ್ಟೆ, ವಸ್ತ್ರಾಲಂಕಾರ, ತಿನ್ನವ ಆಹಾರದ ಕುರಿತು ಪುಂಕಾನುಪುಂಕವಾಗಿ ತುತ್ತೂರಿ ಊದುತ್ತ, ವೈಭವೀಕರಿಸಿ ಬಹುಪರಾಕ್ ಹೇಳುವುದು ಎಷ್ಟು ಸರಿ ಎಂದು ಜನ ಕೇಳುತ್ತಿದ್ದಾರೆ.

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ: ಫ್ಯಾಕ್ಟ್‌ಚೆಕ್: ವಿಜಯ್ ಮಲ್ಯ BJP ಗೆ 35 ಕೋಟಿ ರೂ ಚೆಕ್ ನೀಡಿದ್ದು ನಿಜವೇ?

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights