ಫ್ಯಾಕ್ಟ್‌ಚೆಕ್: ಶಾಲಾ ವಿದ್ಯಾರ್ಥಿನಿಗೆ ಪೊಲೀಸ್ ಅಧಿಕಾರಿಯಿಂದ ಸಹಾಯ ಹಸ್ತ! ಇದು ನಾಟಕೀಯ ವಿಡಿಯೊ

ಶಾಲಾ ವಿದ್ಯಾರ್ಥಿನಿಗೆ ರಸ್ತೆ ಮದ್ಯದಲ್ಲಿ ಋತು ಸ್ರಾವ ಉಂಟಾಗಿ ತೊಂದರೆ ಅನುಭವಿಸುತ್ತಿದ್ದ ದೃಶ್ಯಕಂಡು ಮಹಿಳಾ ಪೊಲೀಸ್ ಅಧಿಕಾರಿಯೊಬ್ಬರು ವಿದ್ಯಾರ್ಥಿನಿಗೆ ರಸ್ತೆಯಲ್ಲಿ ಸಹಾಯ ಮಾಡುತ್ತಿದ್ದಾರೆ ಎಂದು ಹೇಳುವ ವಿಡಿಯೊವೊಂದು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದೆ. ಈ ವಿಡಿಯೊ ನೈಜ ಘಟನೆ ಎಂದು ಭಾವಿಸಿ Respect Women, Humanity Still Alive ಎಂದು ಬರೆಯಲಾಗಿದೆ. ಹಾಗಿದ್ದರೆ ಈ ಘಟನೆ ಎಲ್ಲಿ ನಡೆದಿದೆ, ಸಹಾಯ ಮಾಡಿರುವ ಪೊಲೀಸ್ ಅಧಿಕಾರಿ ಯಾರು ಎಂದು ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾನೆಯನ್ನು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್:

ವಿಡಿಯೊದ ಸ್ಕ್ರೀನ್‌ಶಾಟ್ ಸಹಾಯದಿಂದ ಗೂಗಲ್ ರಿವರ್ಸ್ ಇಮೇಜ್‌ ಸರ್ಚ್ ಮಾಡಿದಾಗ ವೀಡಿಯೊದ ವಿಸ್ತೃತ ಆವೃತ್ತಿಯನ್ನು ‘3RD EYE’ ಯೂಟ್ಯೂಬ್ ಚಾನೆಲ್ ಅಪ್‌ಲೋಡ್ ಮಾಡಿರುವುದು ಕಂಡುಬಂದಿದೆ. ವಿಡಿಯೋ ಶೀರ್ಷಿಕೆಯಲ್ಲೇ ಇದೊಂದು ಸಾಮಾಜಿಕ ಜಾಗೃತಿಯ ವಿಡಿಯೋ ಎಂಬುದನ್ನು ಓದಬಹುದು. ಅಲ್ಲದೆ, ವೀಡಿಯೊದ ವಿಸ್ತೃತ ಆವೃತ್ತಿಯ ಕೊನೆಯಲ್ಲಿ, ಇದನ್ನು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾಡಲಾಗಿದೆ ಎಂದು ಹೇಳಲಾಗಿದೆ. ಇಂತಹ ಹಲವು ಸ್ಕ್ರಿಪ್ಟೆಡ್ (ನಾಟಕೀಯ) ವೀಡಿಯೊಗಳನ್ನು ‘3RD EYE’ ಯೂಟ್ಯೂಬ್ ಚಾನೆಲ್‌ನಲ್ಲಿ ಕಾಣಬಹುದು.

https://www.youtube.com/watch?v=Q0ph6zM42rk&t=2s

3rd Eye ಎಂಬ ಯೂಟ್ಯೂಬ್‌ ಚಾನೆಲ್‌ ಹಲವು ಸ್ಕ್ರಿಪ್ಟ್‌ ಮಾಡಲಾದ ವಿಡಿಯೋವನ್ನು ಅಪ್‌ಲೋಡ್ ಮಾಡಿದ್ದು ಇದು ಜನರನ್ನು ಜಾಗೃತಗೊಳಿಸಲು ಮತ್ತು ಅರಿವು ಮೂಡಿಸುವ ಉದ್ದೇಶದಿಂದ ಈ ರೀತಿಯ ವಿಡಿಯೋಗಳನ್ನು ಮಾಡುತ್ತೇವೆ ಎಂಬ ಹೇಳಿಕೆಯನ್ನು ತಮ್ಮ ಯೂಟ್ಯೂಬ್ ಪೇಜ್‌ನಲ್ಲಿ ಹೇಳಿಕೊಂಡಿದೆ.

ವೈರಲ್ ವಿಡಿಯೊ ಸ್ಕ್ರಿಪ್ಟೆಡ್ ಆಗಿದ್ದರೂ ಜನರಲ್ಲಿ ಜಾಗೃತಿ ಮೂಡಿಸುವ ಉದ್ದೇಶವನ್ನು ಹೊಂದಿರುವುದರಿಂದ ಯಾವುದೇ ಆಕ್ಷೇಪಗಳಿಲ್ಲ, ಮತ್ತು ಕೆಲ ಸಂದರ್ಭದಲ್ಲಿ ಪೊಲೀಸ್ ಅಧಿಕಾರಿಗಳಿಂದ ಜನಸಾಮಾನ್ಯರಿಗೆ ಈ ರೀತಿ ಸೇವೆ ಸಿಕ್ಕರೆ ಇನ್ನೂ ಒಳ್ಳೆಯದು. ಯಾಕೆಂದರೆ ನಮ್ಮ ಸಮಾಜದಲ್ಲಿ ಪೊಲೀಸ್‌ ವ್ಯವಸ್ಥೆ ಇನ್ನಷ್ಟು ಜನ ಸ್ನೇಹಿಯಾಗಬೇಕಿದೆ.

ಒಟ್ಟಾರೆಯಾಗಿ ಹೇಳುವುದಾದರೆ  ವೀಡಿಯೊ ನೈಜ ಘಟನೆಯನ್ನು ಆಧರಿಸಿಲ್ಲ, ಇದು ಸ್ಕ್ರಿಪ್ಟ್ ಮಾಡಿದ ವೀಡಿಯೊ. ಆದ್ದರಿಂದ ಪೋಸ್ಟ್‌ನಲ್ಲಿ ಮಾಡಿದ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ: ಫ್ಯಾಕ್ಟ್‌ಚೆಕ್: ಆದಿವಾಸಿ ಮಹಿಳೆ ರಾಷ್ಟ್ರಪತಿ ಹುದ್ದೆಗೇರಿದರೆ ಮೀಸಲಾತಿ ತೆಗೆಯಬೇಕೆಂದು ಅಂಬೇಡ್ಕರ್‌ ಹೇಳಿಲ್ಲ


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights