ರೆಮ್‍ಡೆಸಿವಿರ್ ಲಸಿಕೆ ಪಡೆದರೆ ಕೊರೊನಾದಿಂದ ಸಾಯುವುದಿಲ್ಲ ಎಂಬ ಭ್ರಮೆಯಿಂದ ಜನ ಹೊರಬರಬೇಕು: ಸಚಿವ ಈಶ್ವರಪ್ಪ

ಕೊರೊನಾ ಸೋಂಕಿನ ವಿರುದ್ದ ನೀಡಲಾಗುತ್ತಿರುವ ರೆಮ್‍ಡೆಸಿವಿರ್ ಲಸಿಕೆ ಪಡೆದರೆ ಕೊರೊನಾದಿಂದ ಸಾಯುವುದಿಲ್ಲ ಎಂಬ ಭ್ರಮೆಯಿಂದ ಜನರು ಹೊರಬರಬೇಕು. ಅಲ್ಲದೆ, ಎಲ್ಲರಿಗೂ ಲಸಿಕೆ ನೀಡುವುದಿಲ್ಲ. ಲಸಿಕೆ ಪಡೆದವರೆಲ್ಲರೂ ಬದುಕುತ್ತಾರೆ ಎಂದೂ ಹೇಳಲಾಗುವುದಿಲ್ಲ ಎಂದು ಸಚಿವ ಈಶ್ವರಪ್ಪ ಹೇಳಿದ್ದಾರೆ.

ಶಿವಮೊಗ್ಗದಲ್ಲಿ ಅಧಿಕಾರಿಗಳೊಂದಿಗಿನ ಸಭೆಯಲ್ಲಿ ಮಾತನಾಡಿದ ಅವರು, ಕೊರೋನ ಪಾಸಿಟಿವ್ ವ್ಯಕ್ತಿಗಳಿಗೆ ರೆಮ್‍ಡೆಸಿವಿರ್ ನೀಡಿದರೆ ಸಂಪೂರ್ಣವಾಗಿ ಗುಣಮುಖರಾಗುತ್ತಾರೆ ಎಂಬುವುದಕ್ಕೆ ಆಧಾರವಿಲ್ಲ. ಜಿಲ್ಲೆಯ ರೋಗಿಗಳ ಅಂಕಿ ಅಂಶಗಳನ್ನು ನೋಡಿದರೂ ಇದು ಸ್ಪಷ್ಟವಾಗುತ್ತದೆ ಎಂದು ಎಂದು ವೈದ್ಯರು ಸ್ಪಷ್ಟಪಡಿಸಿರುವುದಾಗಿ ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ಇದುವರೆಗೆ ಗುಣಮುಖರಾಗಿರುವ ಶೇ.80ರಷ್ಟು ಮಂದಿಗೆ ಈ ಇಂಜೆಕ್ಷನ್ ನೀಡಲಾಗಿರಲಿಲ್ಲ. ಅದೇ ರೀತಿ ಕೊರೊನಾದಿಂದ ಸಾವಿಗೀಡಾದ ಎಲ್ಲ 15 ಮಂದಿಗೂ ಮ್‍ಡೆಸಿವಿರ್ ಲಸಿಕೆ ನೀಡಲಾಗಿತ್ತು ಎಂದು ತಿಳಿಸಿದ್ದಾರೆ.

ಹೀಗಾಗಿ ತಜ್ಞ ವೈದ್ಯರ ಸಲಹೆ ಅನುಸರಿಸಬೇಕು. ಒಂದು ವೇಳೆ, ಇಂಜೆಕ್ಷನ್ ಬೇಕೇ ಬೇಕು ಎಂದಾದರೆ ಅನಿವಾರ್ಯವಾಗಿ ಕೊಡಬೇಕಾಗುತ್ತದೆ. ಆದರೆ, ಜನರು ಇಂಜೆಕ್ಷನ್ ತೆಗೆದುಕೊಂಡ ಬಳಿಕ ಗುಣಮುಖರಾಗುತ್ತೇವೆ ಎಂದು ಭ್ರಮೆಯಿಂದ ಹೊರಗಡೆ ಬರಬೇಕು ಎಂದು ಈಶ್ವರಪ್ಪ ಹೇಳಿದ್ದಾರೆ.

ಇದನ್ನೂ ಓದಿ: BJP ಸರ್ಕಾರ ಜಿಂದಾಲ್‌ ಮುಂದೆ ಮಂಡಿಯೂರಲು ಕಾರಣವಿದೆ; ಅದನ್ನು BSY ಬರಿರಂಗಪಡಿಸಲಿ: ಹೆಚ್‌ಡಿಕೆ

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights