ಇಂಧನ ಬೆಲೆ ಹೆಚ್ಚಳ ವಿರೋಧಿಸಿ ರಾಬರ್ಟ್ ವಾದ್ರಾ ವಿಭಿನ್ನ ಪ್ರತಿಭಟನೆ..!
ದೇಶದಲ್ಲಿ ಇಂಧನ ಬೆಲೆ ಹೆಚ್ಚಳ ವಿರೋಧಿಸಿ ಪ್ರತಿಭಟನೆಗಳಾಗುತ್ತಿವೆ. ಇದರ ಬೆನ್ನಲ್ಲೇ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅಳಿಯ ಮತ್ತು ಉದ್ಯಮಿ ರಾಬರ್ಟ್ ವಾದ್ರಾ ಸೋಮವಾರ ರಾಷ್ಟ್ರ ರಾಜಧಾನಿಯಲ್ಲಿ ಬೈಸಿಕಲ್ ಸವಾರಿ ಮಾಡುವ ಮೂಲಕ ದಾಖಲೆಯ ಬೆಲೆಗಳನ್ನು ವಿರೋಧಿಸಿದರು.
ರಾಜ್ಯದಲ್ಲಿ ಪೆಟ್ರೋಲ್ ಬೆಲೆ ಈಗಾಗಲೇ 100 ರೂ.ಗಿಂತ ಹೆಚ್ಚಾಗಿದೆ. ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು ಭಾಗಶಃ ಹಿಂತೆಗೆದುಕೊಳ್ಳುವ ಮೂಲಕ “ರಾಜ್ ಧರ್ಮ” ವನ್ನು ಅನುಸರಿಸುವಂತೆ ಒತ್ತಾಯಿಸಿ ಸೋನಿಯಾ ಗಾಂಧಿ ಭಾನುವಾರ ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದಿದ್ದಾರೆ. ಇಂಧನ ಬೆಲೆಗಳ ಹೆಚ್ಚಳವು “ಅಭೂತಪೂರ್ವ ಆರ್ಥಿಕ ಕುಸಿತ, ವ್ಯಾಪಕ ನಿರುದ್ಯೋಗ, ವೇತನ ಕಡಿತ ಮತ್ತು ಉದ್ಯೋಗ ನಷ್ಟಗಳು, ಹೆಚ್ಚಿನ ಬೆಲೆಗಳು ಮತ್ತು ಆದಾಯದ ಸವೆತ” ದೊಂದಿಗೆ ಹೋರಾಡುತ್ತಿರುವ ರೈತರು, ಬಡವರು ಮತ್ತು ಮಧ್ಯಮ ಮತ್ತು ಸಂಬಳ ಪಡೆಯುವ ವರ್ಗವನ್ನು ನೋಯಿಸುತ್ತಿದೆ ಎಂದು ಅವರು ಹೇಳಿದ್ದಾರೆ.
ಮುಂಬೈನಲ್ಲಿ ಶನಿವಾರ ಪೆಟ್ರೋಲ್ ಬೆಲೆ ಸಾರ್ವಕಾಲಿಕ ಗರಿಷ್ಠ 97 ರೂ.ಗೆ ತಲುಪಿದ್ದರೆ, ಡೀಸೆಲ್ 88 ರೂ. ದೆಹಲಿಯಲ್ಲಿ ಪೆಟ್ರೋಲ್ ಬೆಲೆ 90.58 ರೂ. ಇದೆ. ಹೀಗಾಗಿ ಇಂಧನ ಬೆಲೆ ಹೆಚ್ಚಳ ವಿರೋಧಿಸಿ ಪಿಸಿ ಶರ್ಮಾ, ಜಿತು ಪಟ್ವಾರಿ ಮತ್ತು ಕುನಾಲ್ ಚೌಧರಿ ಸೇರಿದಂತೆ ಕಾಂಗ್ರೆಸ್ ನಾಯಕರು ಸೈಕಲ್ ಓಡಿಸಿದರು.