ಮೋದಿ ಆಗಮನ‌ ಹಿನ್ನಲೆ ಅವೈಜ್ಞಾನಿಕವಾಗಿ ಧೂಳು ತೆರವು : ಅಧಿಕಾರಿಗಳಿಗೆ ಹಿಡಿಶಾಪ ಹಾಕಿದ ಜನ

ಜ. 2 ರಂದು ತುಮಕೂರಿಗೆ ಪ್ರಧಾನಿ ಮೋದಿ ಆಗಮಿಸುತ್ತಿರುವ ಹಿನ್ನೆಲೆ ನಗರದ ಬಿಹೆಚ್ ರಸ್ತೆಯಲ್ಲಿ ಅವೈಜ್ಞಾನಿಕವಾಗಿ ದೂಳನ್ನ ತೆಗೆಯುತ್ತಿದ್ದು ಸಾರ್ವಜನಿಕರು ಅಧಿಕಾರಿಗಳಿಗೆ ಹಿಡಿಶಾಪ ಹಾಕುತ್ತಿದ್ದಾರೆ.

ಏರ್ ಕಂಪ್ರೇಶರ್ ನಲ್ಲಿ ರಸ್ತೆಗೆ ಗಾಳಿ ಬಿಟ್ಟು ದೂಳೆಬ್ಬಿಸುತ್ತಿದ್ದು ಆ ದೂಳು ಅಂಗಡಿ, ಮುಂಗಟ್ಟುಗಳು, ವಾಹನಗಳು,ಪಾದಾಚಾರಿಗಳ ಮೇಲೆ ಎರಗಿದೆ ಇದರಿಂದ ಕಿರಿಕಿರಿ ಗೊಂಡ ಸಾರ್ವಜನಿಕರು ಅಧಿಕಾರಿಗಳಿಗೆ ಹಿಡಿಶಾಪ ಹಾಕಿದ್ದಾರೆ. ಪ್ರಧಾನಿ ಮೋದಿಗೆ ಸ್ಮಾರ್ಟ್ ಸಿಟಿ ಕಾಮಾಗಾರಿಗಳಿಂದ ಜನರಿಗೆ ಆಗುತ್ತಿರುವ ತೊಂದರೆಗಳನ್ನ ಮರೆಮಾಚಲು ಇನ್ನಿಲ್ಲದ ಪ್ರಯತ್ನ ಮಾಡುತ್ತಿದ್ದಾರೆ.

ಪ್ರತಿದಿನ ಜನರು ದೂಳು ಕುಡಿದು ಆಸ್ಪತ್ರೆ ಸೇರಿದರು ಕನಿಕರ ವಿಲ್ಲದ ಅಧಿಕಾರಿಗಳು ಒಂದು ದಿನ ಬಂದು ಹೋಗುವ ಪ್ರಧಾನಿಗೆ ಇಷ್ಟೆಲ್ಲ ಸಿದ್ದತೆ ಮಾಡಲು ಜನರಿಗೆ ಸಮಸ್ಯೆಗಳನ್ನ ಸೃಷ್ಠಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತ ಪಡಿಸುತ್ತಿದ್ದಾರೆ.

ರಸ್ತೆ ಕಾಮಗಾರಿಯಿಂದ ಎರಡು ಕಿ ಮಿ ಟ್ರಾಫಿಕ್ ಜಾಮ್….

ಹೊತ್ತಿಲ್ಲದ ಹೊತ್ತಲ್ಲಿ ದಿಡಿರ್ ರಸ್ತೆ ಗುಂಡಿ ಮುಚ್ಚು ಕಾಮಗಾರಿಗಳನ್ನ ಮಾಡುತ್ತಿರುವುದರಿಂದ ನಗರದ ಲ್ಲಿ ಟ್ರಾಫಿಕ್ ಉಂಟಾಗಿದೆ. ಬಟವಾಡಿಯಿಂದ ಶಿವಕುಮಾರವಸ್ವಾಮಿಜಿ ವೃತ್ತದ ವರೆಗೂ ಟ್ರಾಫಿಕ್ ಜಾಮ್ ನಿಂದ ವಾಹನ ಸವಾರರು ಪರದಾಡುವಂತಾಗಿದೆ.

ಪ್ರಧಾನಿ ಮೋದಿ ಆಗಮಿಸುತ್ತಿರುವ ಹಿನ್ನೆಲೆ ಅಂತಹ ತುರ್ತು ಅವಶ್ಯಕತೆ ಇದ್ದರೆ ರಾತ್ರಿ 10 ಗಂಟೆ ‌ನಂತರ ಸಿದ್ದತೆ ಕಾಮಗಾರಿಗಳನ್ನ ಮಾಡಿಕೊಳ್ಳಲಿ. ಈ ರೀತಿ ದೂಳು, ಟ್ರಾಫಿಕ್ ಜಾಮ್ ಮಾಡಿ ಜನರಿಗೆ ತೊಂದರೆ ಕೊಡುವುದನ್ನ ನಿಲ್ಲಿಸಲಿ ಎಂದು ಸಾರ್ವಜನಿಕರೊಬ್ಬರು ಅಧಿಕಾರಿಗಳ ನಡೆಗೆ ಬೇಸರ ವ್ಯಕ್ತ ಪಡಿಸಿದರು.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights