ಹೊಸ ವರ್ಷಕ್ಕೆ ‘ರಾಕಿಂಗ್’ ಸಂದೇಶ : ಪಬ್ಲಿಕ್ ಟ್ರಾನ್ಸ್ಪೋರ್ಟ್ ಬಳಸಲು ಮನವಿ..

ಹೊಸ ವರ್ಷಕ್ಕೆ  ರಾಕಿಂಗ್ ಸ್ಟಾರ್ ಸಾರ್ವಜನಿಕರಿಗೆ ಸಂದೇಶ ರವಾನಿಸಿದ್ದಾರೆ.

“ಹೊಸ ವರ್ಷ ಪ್ರತಿ ವರ್ಷ ಬರುತ್ತೆ. ಹೊಸ ವರ್ಷ ಬರಮಾಡಿಕೊಳ್ಳುವುದು ನಿಜ. ಆದರೆ ಯಾಮಾರಿದ್ರೆ ಪಡೆದುಕೊಳ್ಳುವುದಕ್ಕಿಂತ ಕಳೆದುಕೊಳ್ಳುವುದೇ ಹೆಚ್ಚು. ಹೀಗಾಘಿ ಕುಡಿದು ವಾಹನ ಚಲಾಯಿಸಬೇಡಿ. ಅಪಘಾತವಾಗಿ ಪ್ರಾಣಕ್ಕೆ ಅಪಾಯವಾದರೆ ನಿಮ್ಮನ್ನ ನಂಬಿಕೊಂಡಿರುವವರಿಗೆ ಬೀದಿ ಪಾಲಾಗುತ್ತಾರೆ. ಇದನ್ನೆಲ್ಲ ಯೋಚಿಸಿ. ಸುರಕ್ಷತೆ ದೃಷ್ಟಿಯಿಂದ ಪಬ್ಲಿಕ್ ಟ್ರಾನ್ಸ್ಪೋರ್ಟ್ ಬಳಕೆ ಮಾಡಿ. ಯಾವುದೇ ಕಾರಣಕ್ಕೂ ಮದ್ಯಪಾನ ಮಾಡಿ ವಾಹನ ಚಲಾಯಿಸಬೇಡಿ” ಎಂದು ಸಾರ್ವಜನಿಕರಯಲ್ಲಿ ಮನವಿ ಮಾಡಿದ್ದಾರೆ.

ಇನ್ನೂ ಡಿ. 31 ರಿಂದ ಬೆಳಿಗ್ಗೆ 8 ಗಂಟೆಯವರೆಗೆ ಪೊಲೀಸ್ ಕಣ್ಗಾವಲು ಹೆಚ್ಚಾಗಿರುತ್ತದೆ. ಅಹಿತಕರ ಘಟನೆಗೆ ಅವಕಾಶ ಮಾಡಿಕೊಡುವಂತಿಲ್ಲ ಮತ್ತು ನಡೆದುಕೊಳ್ಳುವಂತಿಲ್ಲ. ನಡೆದುಕೊಂಡರೆ ಮದ್ಯಪಾನ ಮಾಡಿ ವಾಹನ ಚಲಾಯಿಸಿದರೆ ಅಂಥವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ತಿಳಿಸಿದ್ದಾರೆ.

ಹೈ ಸೆಕ್ಯೂರಿಟಿ. ಹೆಚ್ಚು ಹಿಡನ್ ಕ್ಯಾಮರಾ ಗಳನ್ನ ಮಾನಿಟರ್ ಮಾಡಲಿವೆ. ಗಾಂಜಾ, ಮಾದಕ ವಸ್ತುಗಳನ್ನ ಬಳಕೆ ಮಾಡದಂತೆ ತಡೆಯಲು ಬಿಗಿ ಭದ್ರತೆ ಒದಗಿಸಲಾಗಿದೆ. ಆಯ್ದ ಭಾಗಗಗಳಲ್ಲಿ ಮೆಟ್ರೋ ಬಸ್ ಸಂಚಾರ ವ್ಯವಸ್ಥೆ ಇರಲಿದೆ. 134 ಕಡೆ ಡ್ರಂಕ್ ಆಂಡ್ ಡ್ರೈವ್ ಚೆಕ್ ಇರುತ್ತದೆ.  ಮಹಿಳೆಯರು ಹೊರಗಡೆ ಹೋಗುವುದಾದರೆ ನಂಬಿಕಸ್ತರೊಂದಿಗೆ ಹೋಗಿ ಎಂದು ತಿಳಿಸಿದ್ದಾರೆ.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights