FACT CHECK | ರಾಹುಲ್ ಗಾಂಧಿ ನಾಮಪತ್ರ ಸಲ್ಲಿಕೆ ರ‍್ಯಾಲಿಯಲ್ಲಿ ಪಾಕ್ ಧ್ವಜಗಳನ್ನು ಹಾರಿಸಲಾಗಿದೆಯೇ?

“ಕೇರಳದ ವಯನಾಡ್ ಅಭ್ಯರ್ಥಿ ರಾಹುಲ್ ಗಾಂಧಿ ನಾಮಪತ್ರ ಸಲ್ಲಿಕೆ ರ‍್ಯಾಲಿಯಲ್ಲಿ ಮುಸಲ್ಮಾನರ ಬಾವುಟವನ್ನು ಹಾರಿಸಲಾಗಿದೆ. ಅಲ್ಲಿ ಹಿಂದೂಗಳ ಧ್ವಜವೇ ಇರಲಿಲ್ಲ. ಹಾಗಾದ್ರೆ ಜಾತಿ ಅಂತಾ ಹೇಳಿ ರಾಹುಲ್ ಗಾಂಧಿಯ ಕಾಂಗ್ರೆಸ್ ಪಕ್ಷಕ್ಕೆ ವೋಟ್ ಕೇಳುವ ಜಾತಿವಾದಿಗಳೇ ನಿಮ್ಮ ನಿಲುವು ಮತ್ತೊಂದು ಇಸ್ಲಾಂ ರಾಷ್ಟ್ರ ಮಾಡೋದಾ. ಇನ್ನಾದರೂ ಯೋಚಿಸಿ” ಎಂಬ ಪ್ರತಿಪಾದನೆಯೊಂದಿಗೆ BJP ಬೆಂಬಲಿತ ಸಾಮಾಜಿಕ ಮಾಧ್ಯಮಗಳ ಬಳಕೆದಾರರು ಪೋಸ್ಟ್‌ಅನ್ನು ಹಂಚಿಕೊಂಡಿದ್ದಾರೆ.

ಇದೇ ರೀತಿಯ ಪ್ರತಿಪಾದನೆಯನ್ನು ಬಸನಗೌಡ ಯತ್ನಾಳ್ ಸೇನೆ ಎಂಬ ಎಕ್ಸ್‌ ಖಾತೆಯಲ್ಲಿ ವಿಡಿಯೋವನ್ನು “ಕೇರಳದ ವಯನಾಡ್ ಅಭ್ಯರ್ಥಿ ರಾಹುಲ್ ಗಾಂಧಿ ನಾಮಪತ್ರ ಸಲ್ಲಿಕೆ ರ‍್ಯಾಲಿಯಲ್ಲಿ ಮುಸಲ್ಮಾನರ ಬಾವುಟ ಕಾಂಗ್ರೆಸ್ ಸಾಬ್ರು ಪಕ್ಷ ಅನ್ನೋದಕ್ಕೆ ಇದಕ್ಕಿಂತ ಸಾಕ್ಷಿ ಬೇಕಾ? ಭಾರತದಲ್ಲಿ ಕಾಂಗ್ರೆಸ್ ಅನ್ನು ಬಹಿಷ್ಕರಿಸದ ಹೊರತು ಹಿಂದೂಗಳಿಗೆ ಇಲ್ಲಿ ಉಳಿಗಾಲವಿಲ್ಲ ಅನ್ನಿಸ್ತಿದೆ. ಹಿಂದೂಗಳೇ ಎಚ್ಚೆತ್ತುಕೊಳ್ಳಿ ಎಂದು ಹಂಚಿಕೊಳ್ಳಲಾಗಿದೆ.

https://twitter.com/yathnalabhimani/status/1776970220709822879

ಇನ್ನು ಕೆಲವರು ಇದು ಪಾಕಿಸ್ತಾನದ ಧ್ವಜ ಎಂದು ಪ್ರತಿಪಾದಿಸಿ ಪೋಸ್ಟ್‌ ಮಾಡಿದ್ದಾರೆ. ಕೇರಳದ ವಯನಾಡ್ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ರಾಹುಲ್ ಗಾಂಧಿಯವರ ನಾಮಪತ್ರ ಸಲ್ಲಿಕೆ ಮೆರವಣಿಗೆಯಲ್ಲಿ ಪಾಕಿಸ್ತಾನದ ಧ್ವಜ ಪ್ರದರ್ಶಿಸಲಾಗಿದೆ ಎಂಬ ಪೋಸ್ಟ್‌ ಅನ್ನು Manipur Banner ಎಂಬ ಫೇಸ್‌ಬುಕ್ ಗ್ರೂಪ್‌ನಲ್ಲಿ ಹಾಕಲಾಗಿದೆ. ಜೊತೆಗೆ ವಿಡಿಯೋವೊಂದನ್ನು ಹಂಚಿಕೊಳ್ಳಲಾಗಿದೆ.

ಹಾಗಿದ್ದರೆ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿರುವ ರಾಹುಲ್ ಗಾಂಧಿ ವಯನಾಡ್ ಕ್ಷೇತ್ರದಲ್ಲಿ ನಾಮಪತ್ರ ಸಲ್ಲಿಕೆ ವೇಳೆ ಪಾಕಿಸ್ತಾನ ಧ್ವಜಗಳನ್ನು ಹಾರಿಸಲಾಗಿದೆ,ಅಥವಾ ಮುಸ್ಲಿಂ ಬಾವುಟ ಹಾರಿಸಲಾಗಿದೆ ಎಂಬ ಪ್ರತಿಪಾದನೆಯನ್ನು ಪರಿಶೀಲಿಸಲು ಗೂಗಲ್ ಸರ್ಚ್ ಮಾಡಿದಾಗ, ಮೇ 25, 2019 ರ @RajivMessage ಅವರ ಎಕ್ಸ್ ಪೋಸ್ಟ್ ಲಭ್ಯವಾಗಿದೆ.

Fact check: ವಯನಾಡ್ ಅಭ್ಯರ್ಥಿ ರಾಹುಲ್‌ ಗಾಂಧಿ ನಾಮಪತ್ರ ಸಲ್ಲಿಕೆ ರಾಲಿಯಲ್ಲಿ ಮುಸ್ಲಿಂ ಬಾವುಟಗಳನ್ನು ಹಾರಿಸಲಾಗಿದೆಯೇ?

ಲಭ್ಯವಾದ ಮಾಹಿತಿಯ ಪ್ರಕಾರ ವಿಡಿಯೋ 2019ರ ಲೋಕಸಭಾ ಚುನಾವಣೆಗೆ ಸಂಬಂಧಿಸಿದೆ ಎಂಬುದು ಸ್ಪಷ್ಟವಾಗುತ್ತದೆ. 2019ರಲ್ಲಿ ಇದೇ ರೀತಿಯ ಧ್ವಜಗಳೊಂದಿಗಿನ ವಿಡಿಯೋಗಳು ಕಂಡು ಬಂದ್ದವು. ಜೊತೆಗೆ ಆ ವರದಿಗಳಲ್ಲಿ “ರಾಹುಲ್‌ ಗಾಂಧಿ ಅವರ ಚುನಾವಣ ರ್ಯಾಲಿಯಲ್ಲಿ ಪ್ರದರ್ಶನಗೊಂಡಿರುವುದು  IUML ನ ಧ್ವಜ ಪಾಕಿಸ್ತಾನದ್ದಲ್ಲ” ಎಂಬುದು ಕಂಡು ಬಂದಿದೆ. ಇದೇ ವಿಡಿಯೋವನ್ನು ಬಳಸಿಕೊಂಡು 2019ರಲ್ಲಿ ಕಾಂಗ್ರೆಸ್‌ ಹಾಗೂ ರಾಹುಲ್‌ ಗಾಂಧಿ ವಿರುದ್ಧ ಸುಳ್ಳು ಆರೋಪಗಳನ್ನು ಹೊರಿಸಲಾಗಿತ್ತು.

ಪಾಕಿಸ್ತಾನ ಧ್ವಜ ಮತ್ತು IUML ಧ್ವಜದ ನಡುವಿನ ವ್ಯತ್ಯಾಸ

ವಾಸ್ತವವಾಗಿ 2024 ರ ಲೋಕಸಭಾ ಚುನಾವಣೆಯಲ್ಲಿ ಸ್ವರ್ಧಿಸುತ್ತಿರುವ ರಾಹುಲ್ ಗಾಂಧಿ ವಯನಾಡ್ ನಲ್ಲಿ ನಾಮಪತ್ರಸಲ್ಲಿಕೆ ವೇಳೆ ಯಾವುದೇ ರೀತಿಯ ರ್ಧವಜವನ್ನು ಬಳಸಲಾಗಿಲ್ಲ. UDF ಭಾಗವಾಗಿರುವ ಇಂಡಿಯನ್‌ ಯೂನಿಯನ್‌ ಮುಸ್ಲಿಂ ಲೀಗ್‌ 2019ರಲ್ಲಿ ರಾಹುಲ್ ಗಾಂಧಿ ನಾಮಪತ್ರ ಸಲ್ಲಿಕೆ ವೇಳೆ ಬಾವುಟಗಳನ್ನು ಪ್ರದರ್ಶಿಸಿತ್ತು ಆ ಇದನ್ನು ಪಾಕ್‌ ಧ್ವಜಗಳು ಎಂದು ಸುಳ್ಳು ಸುದ್ದಿಯನ್ನು ಹಬ್ಬಿಸಲಾಗಿತ್ತು.

ರಾಹುಲ್‌ ಗಾಂಧಿ ಕಾರ್ಯಕ್ರಮದಲ್ಲಿ ಇಸ್ಲಾಮ್‌ಗೆ ಸಂಬಂಧ ಪಟ್ಟ ಯಾವುದೇ ಧ್ವಜ ಪ್ರದರ್ಶನವಾಗಿಲ್ಲ

ಇದೇ ಕಾರಣಕ್ಕೆ ಈ ಭಾರಿ ಈ ರೀತಿಯ ಯಾವುದೇ ಗೊಂದಲಗಳು ಉಂಟಾಗಬಾರದು ಎಂಬ ಕಾರಣಕ್ಕೆ ಕಾಂಗ್ರೆಸ್‌ ಅನ್ನು ಬೆಂಬಲಿಸುವ ಇಂಡಿಯನ್‌ ಯೂನಿಯನ್‌ ಮುಸ್ಲಿಂ ಲೀಗ್‌ಗೆ ಯಾವುದೇ ಕಾರಣಕ್ಕು ತನ್ನ ಸಂಘಟನೆಯ ಧ್ವಜವನ್ನು ಪ್ರದರ್ಶಿಸಬಾರದು ಎಂದು ಮನವಿಯನ್ನು ಕೂಡ  ಮಾಡಿಕೊಂಡಿತ್ತು.

ಒಟ್ಟಾರೆಯಾಗಿ ಹೇಳುವುದಾದರೆ, 2019ರ ಚುನಾವಣೆ ವೇಳೆ, ಕೇರಳ ರಾಜ್ಯದ ಕಾಸರಗೋಡಿನ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ರಾಜಮೋಹನ್ ಉನ್ನಿತಾನ್ ಅವರ ಪರ ಪ್ರಚಾರ ಮಾಡುವಾಗ, ಸೆರೆಹಿದಡಿದ ದೃಶ್ಯಗಳಾಗಿವೆ ಈ ಕುರಿತಾಗಿ ಐಯುಎಂಎಲ್ ಪಕ್ಷದ ಕಾಸರಗೋಡಿನ ಪ್ರಧಾನ ಕಾರ್ಯದರ್ಶಿ ಅವರನ್ನು ಸಂಪರ್ಕಿಸಿ ವಿಚಾರಣೆ ನಡೆಸಿದಾಗ ಅವರೂ ಕೂಡಾ ಈ ವಿಡಿಯೋ ಕಾಸರಗೋಡಿನಲ್ಲಿ ಚಿತ್ರೀಕರಣಗೊಂಡಿದ್ದು ಎಂದು ಖಚಿತಪಡಿಸಿದ್ದಾರೆ.

2019ರಲ್ಲಿಯೂ ವಯನಾಡಿನಲ್ಲಿ ರಾಹುಲ್‌ ಗಾಂಧಿ ನಾಮಪತ್ರ ಸಲ್ಲಿಕೆ ವೇಳೆ ಇಂಡಿಯನ್‌ ಯೂನಿಯನ್‌ ಮುಸ್ಲಿಂ ಲೀಗ್‌ನ ಬಾವುಟಗಳನ್ನು ಪಾಕ್ ಅಥವಾ ಮುಸ್ಲಿಂ ಧ್ವಜಗಳು ಎಂದು ಸುಳ್ಳು ಪೋಸ್ಟ್‌ ಹಂಚಿಕೊಳ್ಳಲಾಗಿತ್ತು. ವಾಸ್ತವವಾಗಿ ಈ 2024ರ ಲೋಕಸಭಾ ಚುನಾವಣೆ ವೇಳೆ ಯಾವುದೇ ರೀತಿಯ ಧ್ವಜವನ್ನು ಬಳಸಿಲ್ಲ. ಹಾಗಾಗಿ ಫೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : FACT CHECK | ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ದ ಸುಳ್ಳು ಪೋಸ್ಟ್‌ ಹಂಚಿಕೆ


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights