ಮೊದಲು ಯಡಿಯೂರಪ್ಪ ಈಗ ಬಸವರಾಜ ಬೊಮ್ಮಾಯಿ ಬೆನ್ನುಬಿಡದ ಬಾಂಬೆ ಫ್ರೆಂಡ್ಸ್..!

ಮೊದಲು ಬಿಎಸ್ ಯಡಿಯೂರಪ್ಪ ಅವರ ಬೆನ್ನು ಬಿಡದೇ ಓಡಾಡುತ್ತಿದ್ದ ಬಾಂಬೆ ಫ್ರೆಂಡ್ಸ್ ಸದ್ಯ ರಾಜ್ಯದ ನೂತನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬೆನ್ನುಬಿಡದೆ ಓಡಾಡುತ್ತಿದ್ದಾರೆ.

ಹೌದು… ಸಚಿವ ಸ್ಥಾನ ಕೈತಪ್ಪುವ ಆತಂಕ ನಮಗಿಲ್ಲ ಎನ್ನುವ ವಲಸೆ ಬಿಜೆಪಿಗರಿಗೆ ಒಳಒಳಗೇ ಕಳವಳ ಇರುವುದು ಅವರ ನಡೆಯಲ್ಲಿ ಸ್ಪಷ್ಟವಾಗಿದೆ. ರಾಜ್ಯದ ನೂತನ ಸಿಎಂ ಆಗಿ ಬಸವರಾಜ ಬೊಮ್ಮಾಯಿ ಪ್ರಮಾಣವಚನ ಸ್ವೀಕರಿಸಿದ್ದೇ ತಡ ಬಾಂಬೆ ಫ್ರೆಂಡ್ಸ್ ಅವರ ಹಿಂಬಾಲಕರಂತೆ ಎಲ್ಲಾ ಕಡೆಗಳಲ್ಲೂ ಕಾಣಿಸಿಕೊಳ್ಳುತ್ತಿದ್ದಾರೆ. ಬಸವರಾಜ ಬೊಮ್ಮಾಯಿ ಹೋದ ಕಡೆಯಲ್ಲಾ ಜೊತೆಗೆ ಹಿಂಬಾಲಿಸುತ್ತಿದ್ದಾರೆ.

ವಿಧಾನಸೌಧದಲ್ಲಿ, ದೇವಸ್ಥಾನ, ರಾಜಭವನ ಹೀಗೆ ಬಸವರಾಜ ಬೊಮ್ಮಾಯಿ ಹೆಜ್ಜೆ ಇಟ್ಟಲ್ಲೆಲ್ಲಾ ಮೂಲ ಬಿಜೆಪಿಗರಿಗಿಂತ ವಲಸೆ ಬಿಜೆಪಿಗರೇ ಎದ್ದು ಕಾಣುತ್ತಿದ್ದಾರೆ. ನೂತನ ಸಿಎಂ ಶಾಡೋ ಆಗಿ ಬಾಂಬೆ ಫ್ರೆಂಡ್ಸ್ ಎಲ್ಲಾ ಕಡೆಗೂ ಮೂಲ ಬಿಜೆಪಿಗರ ಕಣ್ಣಿಗೆ ಕುಕ್ಕೋ ಹಾಗೆ ಕಾಣಿಸಿಕೊಳ್ಳುತ್ತಿದ್ದಾರೆ.

ಮೊದಲು ಬಿಎಸ್ ಯಡಿಯೂರಪ್ಪ ಅವರ ಹಿಂದೆ ಓಡಾಡುತ್ತಿದ್ದ ಅವರು ಈಗ ಬೊಮ್ಮಾಯಿ ಹಿಂದೆ ಬೆಳೆಗ್ಗೆಯಿಂದಲೂ ಹೋದಲೆಲ್ಲಾ ಬಂದಲ್ಲೆಲ್ಲಾ ಒಬ್ಬರಾದ ಒಬ್ಬರಂತೆ ಓಡಾಡುತ್ತಿದ್ದಾರೆ.

ಯಡಿಯೂರಪ್ಪ ಅಧಿಕಾರದಲ್ಲಿ ಇರುವವರೆಗೂ ನಿರಾಳವಾಗಿದ್ದ ವಲಸೆ ಬಿಜೆಪಿಗರು ಈಗ ನಿದ್ದೆಗೆಡಿಸಿಕೊಂಡಿದ್ದಾರೆ. ಮೈತ್ರಿ ಸರ್ಕಾರ ಬಿಟ್ಟು ಬಿಜೆಪಿ ಅಧಿಕಾರಕ್ಕೆ ಬರಲು ಕಾರಣರಾದವರನ್ನು ಬಿಜೆಪಿ ಕೈಬಿಡುತ್ತಾ ಅಥವಾ ಮಂತ್ರಿಮಂಡಲದಲ್ಲಿ ಮುಂದುವರೆಸಿಕೊಂಡು ಹೋಗಗುತ್ತಾ ಕಾದು ನೋಡಬೇಕಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.