ಎಲ್ಗಾರ್ ಪರಿಷತ್ ಪ್ರಕರಣ: ವರವರ ರಾವ್ಗೆ ಷರತ್ತು ಬದ್ಧ ಜಾಮೀನು ನೀಡಿದ ಬಾಂಬೇ ಹೈಕೋರ್ಟ್!

ಎಲ್ಗಾರ್ ಪರಿಷತ್ ಪ್ರಕರಣದಲ್ಲಿ ಬಂಧಿಯಾಗಿದ್ದ ತೆಲುಗು ಸಾಮಾಜಿಕ ಹೋರಾಟಗಾರ ಹಾಗೂ ಲೇಖಕ ವರವರ ರಾವ್ ಅವರಿಗೆ ಬಾಂಬೇ ಹೈಕೋರ್ಟ್ ಜಾಮೀನು ಮಂಜೂರು ಮಾಡಿದೆ.

ವರವರ ರಾವ್ ( 81) ಅವರ ಆರೋಗ್ಯದ ದೃಷ್ಟಿ ಹಿನ್ನಲೆಯಲ್ಲಿ ಅವರಿಗೆ 6 ತಿಂಗಳ  ವೈದ್ಯಕೀಯ ಚಿಕಿತ್ಸೆಯ ಅಗತ್ಯವಿದೆ ವರವರ ರಾವ್ ಅವರ ಆರೋಗ್ಯ ಪರಿಸ್ಥಿತಿಯನ್ನು ದೃಷ್ಟಿಯಲ್ಲಿಟ್ಟುಕೊಂಡು ಬಾಂಬೇ ಹೈಕೋರ್ಟ್ ಷರತ್ತು ಬದ್ದ ಜಾಮೀನು ನೀಡಿದ್ದು, ಮುಂಬೈನಲ್ಲೇ ಇರುವಂತೆ ಮತ್ತು ತನಿಖೆಗೆ ಲಭ್ಯರಿರುವಂತೆ ಸೂಚಿಸಿ ಬಾಂಬೆ ಹೈಕೋರ್ಟ್ ಸೋಮವಾರ ಆರು ತಿಂಗಳ ಮಧ್ಯಂತರ ಜಾಮೀನು ನೀಡಿದೆ. ಆರು ತಿಂಗಳ ಪೂರ್ಣಗೊಂಡ ತಾತ್ಕಾಲಿಕ ಜಾಮೀನು ಅವಧಿಯ ನಂತರ ಶರಣಾಗಬೇಕು ಎಂದು ನ್ಯಾಯಪೀಠ ತಿಳಿಸಿದೆ.

ರಾವ್ ಅವರು ಮುಂಬೈಯಲ್ಲಿಯೇ ಇರಬೇಕಿದೆ ಮತ್ತು ತನಿಖೆಗೆ ಲಭ್ಯವಾಗಬೇಕು ಎಂಬ ಷರತ್ತಿನ ಮೇಲೆ ಜಾಮೀನು ನೀಡಲಾಗಿದೆ. ರಾವ್ ಅವರ ಸ್ಥಿತಿಗೆ ಅನುಗುಣವಾಗಿ ನಾನಾವತಿ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗುವುದು. ಆದರೆ ಆರು ತಿಂಗಳ ಪೂರ್ಣಗೊಂಡ ತಾತ್ಕಾಲಿಕ ಜಾಮೀನು ಅವಧಿಯ ನಂತರ ಶರಣಾಗಬೇಕು ಎಂದು ನ್ಯಾಯಪೀಠ ತಿಳಿಸಿದೆ.

ಮಾತ್ರವಲ್ಲದೆ ರಾವ್ ಅವರು ವಾಟ್ಸಾಪ್ ಕರೆಯ ಮೂಲಕ ಮುಂಬೈ ಪೊಲೀಸರ ಹತ್ತಿರದ ಪೊಲೀಸ್ ಠಾಣೆಗೆ ಹದಿನೈದು ದಿನ ವರದಿ ಮಾಡಬೇಕು. ಅವರು ವಾಸಿಸುವ ಸ್ಥಳ, ಸಂಪರ್ಕ ಸಂಖ್ಯೆ ಮತ್ತು ಅವರೊಂದಿಗೆ ವಾಸಿಸುವ ಸಂಬಂಧಿಕರ ಸಂಖ್ಯೆಯ ಬಗ್ಗೆ ಕೂಡಲೇ ಅವರು ಹೈಕೋರ್ಟ್‌ಗೆ ತಿಳಿಸಬೇಕಾಗುತ್ತದೆ.

ಫೆಬ್ರವರಿ 1 ರಂದು, ಹೈಕೋರ್ಟ್ ಈ ಪ್ರಕರಣದ ಎಲ್ಲಾ ವಾದಗಳನ್ನು ಮುಚ್ಚಿ, ರಾವ್ ಅವರ ವೈದ್ಯಕೀಯ ಜಾಮೀನು ಮತ್ತು ಅವರ ಪತ್ನಿ ಹೆಮ್ಲತಾ ಅವರ ರಿಟ್ ಅರ್ಜಿಯ ಮೇಲಿನ ತೀರ್ಪನ್ನು ಕಾಯ್ದಿರಿಸಿದ್ದು, ಅಸಮರ್ಪಕ ವೈದ್ಯಕೀಯ ಆರೈಕೆ ಮತ್ತು ಅವರ ನಿರಂತರ ಜೈಲುವಾಸದಿಂದಾಗಿ ಅವರ ಮೂಲಭೂತ ಹಕ್ಕುಗಳ ಉಲ್ಲಂಘನೆಯಾಗಿದೆ ಎಂದು ಆರೋಪಿಸಲಾಗಿದೆ. ಮಾತ್ರವಲ್ಲದೇ ಜೈಲಿನ ಅಧಿಕಾರಿಗಳು ರಾವ್‌ಗೆ ಸೂಕ್ತ ವೈದ್ಯಕೀಯ ಚಿಕಿತ್ಸೆ ನೀಡುತ್ತಿಲ್ಲ ಎಂದು ಮನವಿಯಲ್ಲಿ ತಿಳಿಸಲಾಗಿದೆ. ಅಂತರ್ಗತ ಕಾಯಿಲೆಗಳಿಂದ ಬಳಲುತ್ತಿರುವ ಅವರಿಗೆ ಚಿಕಿತ್ಸೆಯ ಅಗತ್ಯವಿದ್ದ ಕಾರಣ ನ್ಯಾಯಾಲಯ ಜಾಮೀನು ನೀಡಿದೆ.

ಈ ಪ್ರಕರಣ ಡಿಸೆಂಬರ್ 31, 2017 ರಂದು ಪುಣೆಯಲ್ಲಿ ನಡೆದ ಎಲ್ಗರ್ ಪರಿಷತ್ ಸಮಾವೇಶದಲ್ಲಿ ಮಾಡಿದ ಭಾಷಣಗಳಿಗೆ ಸಂಬಂಧಿಸಿದೆ. ಭಾಷಣದ ಬಳಿಕ ಪಶ್ಚಿಮ ಮಹಾರಾಷ್ಟ್ರದ ಹೊರವಲಯದಲ್ಲಿರುವ ಕೋರೆಗಾಂವ್-ಭೀಮಾ ಯುದ್ಧ ಸ್ಮಾರಕದ ಬಳಿ ಹಿಂಸಾಚಾರಕ್ಕೆ ಕಾರಣವಾಯಿತು ಎಂದು ಪೊಲೀಸರು ಆರೋಪಿಸಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights