ಆಪರೇಷನ್ ಕಮಲಕ್ಕೆ ಮತ್ತೊಂದು ರಾಜ್ಯಸರ್ಕಾರ ಬಲಿ : ಪಾಂಡಿಚೇರಿ ಸಿಎಂ ರಾಜೀನಾಮೆ!

ಆಪರೇಷನ್ ಕಮಲದ ಮೂಲಕ ದೇಶದಲ್ಲೆಡೆ ಭದ್ರ ಕೋಟೆ ಸ್ಥಾಪಿಸುತ್ತಿರುವ ಬಿಜೆಪಿಗೆ ಮತ್ತೋರ್ವ ಶಾಸಕ ಸೇರ್ಪಡೆಯಾದ ಅನುಮಾನ ವ್ಯಕ್ತವಾಗಿದೆ. ಆಪರೇಷನ್ ಕಮಲದಿಂದ ಬಹುಮತ ಸಾಬೀತುಪಡಿಸುವಲ್ಲಿ ಕಾಂಗ್ರೆಸ್ ವಿಫಲವಾಯಿತು. ಹೀಗಾಗಿ ಪುದುಚೇರಿಯ ಕಾಂಗ್ರೆಸ್ ಸರ್ಕಾರ ಪತನವಾಗಿ ಸಿಎಂ ವಿ.ನಾರಾಯಣಸ್ವಾಮಿ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಹ ನೀಡಬೇಕಾಯಿತು.

ಹೌದು.. ವಿಧಾನಸಭೆಯಲ್ಲಿ ಬಹುಮತ ಸಾಬೀತು ಮಾಡುವಲ್ಲಿ ನಾರಾಯಣಸ್ವಾಮಿ ಸರ್ಕಾರ ವಿಫಲವಾಯ್ತು. ಕಾಂಗ್ರೆಸ್ ನ 9 ಶಾಸಕರು, ಡಿಎಂಕೆಯ ಮೂವರು ಮತ್ತು ಪಕ್ಷೇತರ ಓರ್ವ ಶಾಸಕ ಸೇರಿದಂತೆ ಸರ್ಕಾರದ ಪರವಾಗಿದ್ದರು. ಆದರೆ ರಾತ್ರೋ ರಾತ್ರಿ ಮನಸ್ಸು ಬದಲಾಯಿಸಿದ ಡಿಎಂಕೆಯ ಓರ್ವ ಶಾಸಕ ರಾಜೀನಾಮೆ ನೀಡಿದ್ದಾರೆ. ಹೀಗಾಗಿ ಕಾಂಗ್ರೆಸ್ ಗೆ ಕೇವಲ 12 ಶಾಸಕರ ಬೆಂಬಲ ಸಿಕ್ಕಿತು.ಆದ್ರೆ ಬಹುಮತಕ್ಕೆ 14 ಮತಗಳು ಬೇಕಿತ್ತು.

ಪುದುಚೇರಿಯ ವಿಧಾನಸಭೆಯ 33 ಸದಸ್ಯರಲ್ಲಿ ಮೂವರು ಕೇಂದ್ರ ಸರ್ಕಾರದಿಂದ ನೇಮಕ ಆಗಿರುತ್ತಾರೆ. ಇನ್ನುಳಿದ 30 ಸದಸ್ಯರು ಜನರಿಂದ ನೇರವಾಗಿ ಆಯ್ಕೆಯಾಗಿ ವಿಧಾನಸಭೆ ಪ್ರವೇಶಿಸಿರುತ್ತಾರೆ. 2016ರ ಚುನಾವಣೆಯಲ್ಲಿ ಕಾಂಗ್ರೆಸ್ 15 ಕ್ಷೇತ್ರಗಳಲ್ಲಿ ಗೆಲವು ಕಂಡಿತ್ತು. ಓರ್ವ ಶಾಸಕರನ್ನ ಕಾಂಗ್ರೆಸ್ ಉಚ್ಚಾಟಿತಗೊಳಿಸಿದ್ರೆ, ಐವರು ಶಾಸಕರು ರಾಜೀನಾಮೆ ನೀಡಿದ್ದಾರೆ.

ಕಾಂಗ್ರೆಸ್ ಗೆ ಡಿಎಂಕೆಯ ಮೂವರು ಶಾಸಕರು ಬೆಂಬಲ ನೀಡಿದ್ದರು. ಆದ್ರೆ ಭಾನುವಾರ ನಡೆದ ಅಚ್ಚರಿ ಬೆಳವಣಿಗೆಯಲ್ಲಿ ಡಿಎಂಕೆ ಓರ್ವ ಶಾಸಕ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವ ಮೂಲಕ ಕೈ ನಾಯಕರಿಗೆ ಬಿಗ್ ಶಾಕ್ ನೀಡಿದ್ದಾರೆ. ಇವರನ್ನು ಒಲಿಸುವಲ್ಲಿ ಬಿಜೆಪಿ ಯಶಸ್ವಿಯಾಗಿದೆ ಎಂದು ಆರೋಪಿಸಲಾಗುತ್ತಿದೆ. ಭಾನುವಾರದ ವೇಳೆ ಕಾಂಗ್ರೆಸ್ ಬಳಿ ಕೇವಲ 12 ಶಾಸಕರು ಸಮರ್ಥನೆ ಇತ್ತು. ಆರು ಶಾಸಕರ ರಾಜೀನಾಮೆ ಮತ್ತು ಒಬ್ಬರ ಅನರ್ಹತೆ ಹಿನ್ನೆಲೆ ಪುದುಚೇರಿಯ ವಿಧಾನಸಭಾ ಸದಸ್ಯರ ಸಂಖ್ಯೆ 26ಕ್ಕೆ ತಲುಪಿತ್ತು.

Spread the love

Leave a Reply

Your email address will not be published. Required fields are marked *