FACT CHECK | ಗಾಜಾದಲ್ಲಿ ಬಾಂಬ್ ದಾಳಿಯ ನಡುವೆ, ನಾಯಿಯೊಂದು ಪುಟ್ಟ ಮಗುವಿನ ಜೀವವನ್ನು ಉಳಿಸಿದೆ ಎಂಬ ವಿಡಿಯೋದ ಅಸಲೀಯತ್ತೇನು ಗೊತ್ತೇ?

ಗಾಜಾ ಪಟ್ಟಿಯ ಮೇಲೆ ಇಸ್ರೇಲ್ ನಡೆಸಿದ ಇತ್ತೀಚಿನ ದಾಳಿಗಳಲ್ಲಿ ಸುಮಾರು 25 ಜನರು ಸಾವನ್ನಪ್ಪಿದ್ದಾರೆ. ಸೋಮವಾರ ಆರಂಭವಾದ ಇಸ್ರೇಲ್ ಬಾಂಬ್ ದಾಳಿ ರಾತ್ರಿಯಿಡೀ ಮುಂದುವರೆಯಿತು. ಮೃತಪಟ್ಟವರಲ್ಲಿ ಮಕ್ಕಳು ಮತ್ತು ಮಹಿಳೆಯರು ಕೂಡ ಸೇರಿದ್ದಾರೆ. ಈ ಮಧ್ಯೆ, ಸಾಮಾಜಿಕ ಮಾಧ್ಯಮಗಳಲ್ಲಿ ವಿಡಿಯೋವೊಂದು ವೈರಲ್ ಆಗುತ್ತಿದ್ದು, ಮಗುವಿನ ಮೇಲೆ ಕಟ್ಟಡದ ಅವಶೇಷಗಳು ಇನ್ನೇನು ಬೀಳತ್ತಿದೆ ಎನ್ನುವ ಸಂರ್ಭದಲ್ಲಿ, ನಾಯಿ ಮಗುವನ್ನು ಎತ್ತಿಕೊಂಡು ಅಲ್ಲಿಂದ ಹೋಗುವ ಮೂಲಕ ಅವಶೇಷಗಳ ನಡುವೆ ಸಿಲುಕಿದ್ದ ಪುಟ್ಟ ಮಗುವಿನ ಜೀವವನ್ನು ನಾಯಿಯೊಂದು ರಕ್ಷಿಸುವುದನ್ನು ಕಾಣಬಹುದು.

ಟ್ವಿಟರ್‌ನಲ್ಲಿ ವಿಡಿಯೋವನ್ನು ಹಂಚಿಕೊಂಡ ಮೊಹಮ್ಮದ್ ತೈಮೂರ್ ಚೌಹಾಣ್ ಎಂಬ ವ್ಯಕ್ತಿ, ‘ಗಾಜಾದ ನಾಯಿ ಕೂಡ 57 ಇಸ್ಲಾಮಿಕ್ ಆಡಳಿತಗಾರರಿಗಿಂತ ಉತ್ತಮ’ ಎಂದು ಬರೆದಿದ್ದಾರೆ.

ಈ ವೀಡಿಯೊವನ್ನು X ನಲ್ಲಿ ವಸೀಮ್ ಜೈದಿ, ಹುಸೇನಿ ನ್ಯೂಸ್ ಉರ್ದು, ಸಪಾ ಸ್ಪೀಕ್, ಆದಿಲ್ ಖಾನ್, ಸಿಕಂದರ್ ಮತ್ತು ವಿಲಾ ಖಾನ್ 786 ಎಂಬ ಬಳಕೆದಾರರು ಇದೇ ರೀತಿಯ ಹೇಳಿಕೆಗಳೊಂದಿಗೆ ಹಂಚಿಕೊಂಡಿದ್ದಾರೆ. ಹಾಗಿದ್ದರೆ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿರುವ ವಿಡಿಯೋವನ್ನು ಪರಿಶೀಲಿಸಲು ಗೂಗಲ್ ರಿವರ್ಸ್ ಇಮೇಜಸ್‌ನಲ್ಲಿ ಸರ್ಚ್ ಮಾಡಿದಾಗ, ಇಸ್ರೇಲ್ ಗಾಜಾದ ಮೇಲೆ ನಡೆಸುತ್ತಿರುವ ದಾಳಿಯ ಸಂದರ್ಭದಲ್ಲಿ ಕಟ್ಟಡಗಳ ಅವಶೇಷಗಳಡಿಯಲ್ಲಿ ಸಿಲುಕಿದ ಮಗುವನ್ನು ನಾಯಿ ಕಾಪಾಡಿರುವ ಯಾವ ವರದಿಗಳು ಲಭ್ಯವಾಗಿಲ್ಲ. ಬದಲಿಗೆ ವಿಡಿಯೋವನ್ನು ಸೂಕ್ಷ್ಮವಾಗಿ ಪರಿಶೀಲಿಸಿದಾಗ, ಕಲ್ಲುಗಳ ರಚನೆ ಮತ್ತು ಮಗುವನ್ನು ಎತ್ತಿಕೊಳ್ಳುವಾಗ ನಾಯಿಯ ಮುಖಭಾವಗಳು ವಿಚಿತ್ರವಾಗಿ ಕಾಣುತ್ತವೆ. ಹಾಗಾಗಿ ಈ ವಿಡಿಯೋವನ್ನು AI ತಂತ್ರಜ್ಞಾನದ ಮೂಲಕ ವಿಡಿಯೋವನ್ನು ರಚಿಸಿರಬಹುದು ಎಂಬ ಅನುಮಾನ ಮೂಡುತ್ತದೆ.

gaza fake video 3

ಹಾಗಾಗಿ ಈ ವಿಡಿಯೋವನ್ನು AI ರಚಿತ ವಿಡಿಯೋ ಪತ್ತೆ ಮಾಡುವ Decopy.ai ಎಂಬ ಟೂಲ್‌ ಬಳಸಿಕೊಂಡು ವಿಡಿಯೋವನ್ನು ಪರಿಶೀಲಿಸಿದಾಗ, ಅದು ಶೇಕಡಾ 91.92 ರಷ್ಟು ನಕಲಿ ಎಂದು ಸಾಬೀತಾಗಿದೆ. ಗಾಜಾ ವಿಡಿಯೋ ನಕಲಿಯಾಗಿದ್ದು
ಈ ವೀಡಿಯೊ ಶೇ. 91.92 ರಷ್ಟು ನಕಲಿ ಎಂದು ಕಂಡುಬಂದಿದೆ.

ಒಟ್ಟಾರೆಯಾಗಿ ಹೇಳುವುದಾದರೆ, ಕಟ್ಟಡಗಳ ನಡುವೆ ಸಿಲುಕಿದ್ದ ಮುಗ್ಧ ಮಗುವಿನ ಜೀವವನ್ನು ನಾಯಿಯೊಂದು ಉಳಿಸಿದೆ ಎಂಬ ಹೇಳಿಕೆಯೊಂದಿಗೆ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿರುವ ವಿಡಿಯೋ ನಕಲಿ ಮತ್ತು AI ಸಹಾಯದಿಂದ ತಯಾರಿಸಲಾಗಿದೆ ಎಂದು ತಿಳಿದುಬಂದಿದೆ.

FACT CHECK | 60 ವರ್ಷದ ಮುಸ್ಲಿಂ ವ್ಯಕ್ತಿ ಯುವತಿಯನ್ನು ಗರ್ಭಿಣಿಯನ್ನಾಗಿ ಮಾಡಿದ್ದಾನೆ ಎಂದು AI ಫೋಟೊ ಹಂಚಿಕೆ

ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : FACT CHECK | ಈದ್ ಶುಭಾಶಯ ಕೋರಲು ಯೋಗಿ ಆದಿತ್ಯನಾಥ್ ಮುಖ್ತಾರ್ ಅಬ್ಬಾಸ್ ನಖ್ವಿ ಭೇಟಿ ನೀಡಿದ್ದಾರೆ ಎಂದು 4 ವರ್ಷ ಹಳೆಯ ಫೋಟೊ ಹಂಚಿಕೆ


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights