Fact check: ಯುಪಿಯಲ್ಲಿ ಮತ್ತೆ ಯೋಗಿ ಸರ್ಕಾರ ಬಂದರೆ ಪತ್ರಿಕೋದ್ಯಮ ತೊರೆಯುತ್ತೇನೆ -ಎಂದು ಅಜಿತ್ ಅಂಜುಮ್ ಹೇಳಿದ್ದು ನಿಜವೇ?

ಉತ್ತರ ಪ್ರದೇಶದಲ್ಲಿ ಫೆಬ್ರವರಿ 10 ರಿಂದ ಚುನಾವಣೆ ನಡೆಯಲಿದ್ದು, ಭಾರೀ ಸದ್ದು ಮಾಡುತ್ತಿದೆ. ಈ ಚುನಾವಣೆಯಲ್ಲಿ(2022) ರಲ್ಲಿ ಯೋಗಿ ಆದಿತ್ಯನಾಥ್ ಸರ್ಕಾರ ಮತ್ತೆ ಅಧಿಕಾರಕ್ಕೆ ಬಂದರೆ ಪತ್ರಿಕೋದ್ಯಮ ತೊರೆಯುತ್ತೇನೆ ಎಂದು ಪತ್ರಕರ್ತ ಅಜಿತ್ ಅಂಜುಮ್ ಅವರು ಹೇಳಿದ್ದಾರೆಂದು ಟ್ವೀಟ್‌ನ ಫೋಟೋವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಇದು ನಿಜವೇ ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್:

ಅಜಿತ್ ಅಂಜುಮ್ ಅವರ ಅಧಿಕೃತ ಟ್ವೀಟರ್ ಅಕೌಂಟ್‌ನಲ್ಲಿ (@ajitanjum) ಈ ರೀತಿ ಹೇಳಿಕೆಯಿರುವ ಪೋಸ್ಟ್ ಇದೆಯೇ ಎಂದು ಪರಿಶೀಲಿಸಿದಾಗ ಆ ರೀತಿಯ ಹೇಳಿಕೆ ಲಭ್ಯವಿಲ್ಲ. ಅಥವಾ ಅವರು ಡಿಲೀಟ್ ಮಾಡಿದ್ದರೆಯೇ ಎಂದು ವೆಬ್ ಆರ್ಕೈವಿಂಗ್ ಟೂಲ್ “ವೇಬ್ಯಾಕ್ ಮೆಷಿನ್” ನಲ್ಲಿ ಪ್ರಶ್ನೆಯಲ್ಲಿರುವ ಟ್ವೀಟ್‌ನ ಆರ್ಕೈವ್ ಮಾಡಿದ ಲಿಂಕ್ ಸಹ ಪರಿಶೀಲಿಸಿದ್ದೇವೆ. ಆದಾಗ್ಯೂ, ಅಜಿತ್ ಅಂಜುಮ್ ಅವರು ಜನವರಿ 31 ರಂದು ಅಥವಾ ಆಸು ಪಾಸಿನ  ದಿನಗಳಲ್ಲಿ ಮಾಡಿದ ಯಾವುದೇ ಟ್ವೀಟ್‌ಗಳು ಆರ್ಕೈವ್‌ನಲ್ಲಿ ಲಭ್ಯವಿಲ್ಲ.

ಅಲ್ಲದೆ, ಸ್ಕ್ರೀನ್‌ಶಾಟ್‌ನ ಇರುವ ಪ್ರಕಾರ ಈ ಹೇಳಿಕೆಯು, ಅಜಿತ್ ಅಂಜುಮ್ ಅವರ ದೃಢೀಕರಿಸದ ಟ್ವಿಟರ್ ಅಕೌಂಟ್‌ನಿಂದ ಟ್ವೀಟ್ ಆಗಿದೆ. ಆದರೆ  12 ಲಕ್ಷಕ್ಕಿಂತಲೂ ಹೆಚ್ಚು ಫಾಲೋವರ್ಸ್ ಹೊಂದಿರುವ ಅಜಿತ್ ಅಂಜುಮ್ ಅವರ ಅಧಿಕೃತ ಅಕೌಂಟ್‌ನಲ್ಲಿ  ಪತ್ರಿಕೋದ್ಯಮವನ್ನು ತೊರೆಯುತ್ತೇನೆ ಎಂಬ ಹೇಳಿಕೆಯ ಲಭ್ಯವಿಲ್ಲ. ಅಜಿತ್ ಅವರ ಟ್ವಿಟ್ಟರ್ ಫಾಲೋವರ್ಸ್‌ಗಳಲ್ಲಿ ಹಲವಾರು ರಾಜಕೀಯ ನಾಯಕರು ಮತ್ತು ಪತ್ರಕರ್ತರು ಇದ್ದಾರೆ ಎಂಬುದು ಗಮನಾರ್ಹ.

ಪತ್ರಕರ್ತ ಅಜಿತ್ ಅಂಜುಮ್ ಅವರೇ ಈ ಹೇಳಿಕೆ ಬಗ್ಗೆ ಸ್ಪಷ್ಟನೆ ನೀಡಿದ್ದು , “ಕೆಲವು ದಿನಗಳ ಹಿಂದೆ ಕೆಲವು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿರುವಂತೆ “ಯುಪಿಯಲ್ಲಿ  ಯೋಗಿ ಆದಿತ್ಯನಾಥ್ ಮತ್ತೆ ಅಧಿಕಾರಕ್ಕೆ ಬಂದರೆ ನಾನು ಪತ್ರಿಕೋದ್ಯಮವನ್ನು ತೊರೆಯುವುದಾಗಿ ಘೋಷಿಸಿದ್ದೇನೆ ಎಂದು ಹೇಳಿಕೆಯನ್ನು ವೈರಲ್ ಮಾಡುತ್ತಿವೆ. ಈಗ ಟ್ವೀಟ್‌ನ ನಕಲಿ ಸ್ಕ್ರೀನ್‌ಶಾಟ್ ಚಲಾವಣೆಯಲ್ಲಿದೆ. ಯುಪಿಯಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದರೆ ನನ್ನ ವೃತ್ತಿಯನ್ನು ಬಿಡುತ್ತೇನೆ ಎಂದು ಎಲ್ಲಿಯೂ ಹೇಳಿಲ್ಲ. ಇವೆಲ್ಲವೂ ಅಸಂಬದ್ಧ, ನಾನು ಅಂತಹ ಯಾವುದೇ ಟೀಕೆಗಳನ್ನು ಮಾಡಿಲ್ಲ. ಅಲ್ಲದೆ, ನನ್ನ ಟ್ವಿಟರ್ ಅಕೌಂಟ್‌ನಿಂದಲೂ @ajitanjum ನಾನು ಆ ರೀತಿಯ ಟ್ವೇಟ್ ಮಾಡಿರುವುದಿಲ್ಲ. ಅದು ಎಡಿಟ್ ಮಾಡಿರುವುದಾಗಿದೆ ಎಂದಿದ್ದಾರೆ.

ಫೆಬ್ರವರಿ 5, 2022 ರಂದು, ಅಜಿತ್ ಅಂಜುಮ್ ಅವರು ಸ್ಪಷ್ಟನೆ ನೀಡಿದ್ದು, ತಾನು ಅಂತಹ ಹೇಳಿಕೆಯನ್ನು ಎಂದಿಗೂ ಪೋಸ್ಟ್ ಮಾಡಿಲ್ಲ ಎಂದು ಟ್ವೀಟ್ ಮೂಲಕ ಸಹ ದೃಢಪಡಿಸಿದ್ದಾರೆ.

ಅದೇ ದಿನ, ಅಜಿತ್ ಅವರು ತಮ್ಮ ಹೆಸರಿನಲ್ಲಿ ಹರಡುತ್ತಿರುವ ನಕಲಿ ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳು ಮತ್ತು ಐಟಿ ಸೆಲ್‌ಗಳಿಂದ ಆಗಾಗ್ಗೆ ಟ್ರೋಲ್‌ಗಳನ್ನು ಸ್ವೀಕರಿಸುವ ಬಗ್ಗೆ ಮಾತನಾಡುವ ವೀಡಿಯೊವನ್ನು ಸಹ ಟ್ವೀಟ್ ಮಾಡಿದ್ದಾರೆ.

ಈ ವೀಡಿಯೊವನ್ನು ಹಿಂದಿ ಬಾಷೆಯಲ್ಲಿ ಹಂಚಿಕೊಳ್ಳಲಾಗಿದೆ, “ನನ್ನ ಬಗ್ಗೆ ವಿವಿಧ ರೀತಿಯ ಸುಳ್ಳು ವದಂತಿಗಳನ್ನು ಯೋಜಿತ ರೀತಿಯಲ್ಲಿ ಹರಡಲಾಗುತ್ತಿದೆ. ಫೋಟೋಶಾಪ್ ರಚನೆಗಳನ್ನು ಸಹ ಪ್ರಸಾರ ಮಾಡಲಾಗುತ್ತದೆ. ನಾನು ದೇಶಾದ್ಯಂತ ಪ್ರವಾಸ ಮಾಡುವುದನ್ನು ಮತ್ತು ನನ್ನ ಅಭಿಪ್ರಯಗಳನ್ನು ಐಟಿ ಸೆಲ್ ಇಷ್ಟಪಡುವುದಿಲ್ಲ ಎಂಬುದನ್ನು ಇದು ತೋರಿಸುತ್ತದೆ ” ಎಂದು ಲೇವಡಿ ಮಾಡಿದ್ದಾರೆ.

ಒಟ್ಟಾರೆ ಅಜಿತ್ ಅಂಜುಮ್ ಹೆಸರಿನಲ್ಲಿ ಹರಿದಾಡಿರುವ ಸ್ಕ್ರೀನ್‌ಶಾಟ್ ನಕಲಿ ಎಂಬುದು ಸ್ಪಷ್ಟವಾಗಿದೆ. ಯುಪಿಯಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದರೆ ಪತ್ರಿಕೋದ್ಯಮವನ್ನು ತೊರೆಯುತ್ತೇನೆ ಎಂದು ಪತ್ರಕರ್ತ ಎಂದಿಗೂ ಟ್ವೀಟ್ ಮಾಡಿಲ್ಲ. ಹಾಗಾಗಿ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿರುವ ಪೋಸ್ಟ್‌ ಸುಳ್ಳು ಎಂದು ಫ್ಯಾಕ್ಟ್‌ಚೆಕ್ ದೃಢಪಡಿಸುತ್ತದೆ.

ಉಲ್ಲೇಖಗಳು

ಅಜಿತ್ ಅಂಜುಮ್ ಅವರ ಅಧಿಕೃತ ಟ್ವಿಟರ್ ಹ್ಯಾಂಡಲ್: https://twitter.com/ajitanjum
ಅಜಿತ್ ಅಂಜುಮ್ ಅವರ ಸ್ಪಷ್ಟನೆ: https://twitter.com/ajitanjum/status/1489813457574584323
ಅಜಿತ್ ಅಂಜುಮ್ ಅವರ ಸ್ಪಷ್ಟನೆ: https://twitter.com/ajitanjum/status/1489827108570292233
ಅಜಿತ್ ಅಂಜುಮ್ ಅವರ ಸ್ಪಷ್ಟೀಕರಣ (ಫೇಸ್‌ಬುಕ್): https://www.facebook.com/AnjumAjit/videos/468247794963396/
ಅಜಿತ್ ಅಂಜುಮ್ ಅವರ ಸ್ಪಷ್ಟೀಕರಣ (YouTube): https://www.youtube.com/watch?v=xvc_dY7SacM


ಇದನ್ನು ಓದಿರಿ: Fact Check: ಅಖಿಲೇಶ್ ಯಾದವ್ ತನ್ನನ್ನು ‘ರಾವಣ’ನಿಗೆ ಹೋಲಿಸಿ ಟ್ವೀಟ್ ಮಾಡಿದ್ದು ನಿಜವೇ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights