Fact check: ಈ ಮಹಿಳೆ ಆಟೋದಲ್ಲಿ ಬಿಟ್ಟುಹೋಗಿದ್ದ ಬ್ಯಾಗ್ಅನ್ನು ರಿಕ್ಷಾ ಚಾಲಕ ಮರಳಿಸಿದ್ದು ನಾಟಕೀಯ ವಿಡಿಯೋ ಹೊರತು ನಿಜವಾಗಿ ನಡೆದುದ್ದಲ್ಲ
ಮಹಿಳೆಯೊಬ್ಬರು ಆಟೋ ರಿಕ್ಷಾದಲ್ಲಿ ಬಿಟ್ಟು ಹೋಗಿದ್ದ ಬೆಲೆ ಬಾಳುವ ವಸ್ತುಗಳಿದ್ದ ಬ್ಯಾಗ್ವೊಂದನ್ನು ರಿಕ್ಷಾ ಚಾಲಕ ಮಹಿಳೆಗೆ ತಲುಪಿಸುವ ಮೂಲಕ ಪ್ರಾಮಾಣಿಕತೆ ಮೆರೆದಿದ್ದಾರೆ ಎಂಬ ಹೇಳಿಕೆಯೊಂದಿಗೆ ವಿಡಿಯೊವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದೆ. ಜನವರಿ 22 ರಂದು ಈ ಘಟನೆ ನಡೆದಿದ್ದು, ಆ ದೃಶ್ಯಾವಳಿಗಳು ಸಿಸಿ ಟಿವಿಯಲ್ಲಿ ಸೆರೆಯಾಗಿವೆ ಎಂದು ಹೇಳಲಾಗಿದೆ. ಇದು ನಿಜವೇ ಎಂಬುದನ್ನು ಪರಿಶೀಲಿಸೋಣ.

ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿರುವ ವಿಡಿಯೋ
ಭಾರತದ ಖ್ಯಾತ ಬ್ಯಾಡ್ಮಿಂಟನ್ ಆಟಗಾರ್ತಿ ಜ್ವಾಲಾ ಗುಟ್ಟಾರವರು ತಮ್ಮ ಫೇಸ್ಬುಕ್ನಲ್ಲಿ ಈ ವಿಡಿಯೋವನ್ನು ಹಂಚಿಕೊಂಡಿದ್ದಾರೆ.
ಸಾಮಾಜಿಕ ಮಾದ್ಯಮಗಳಲ್ಲಿ ವೈರಲ್ ಆಗುತ್ತಿರುವ ವಿಡಿಯೊವೊಂದರಲ್ಲಿ ಆಟೋರಿಕ್ಷಾದಲ್ಲಿ ಪ್ರಯಾಣಿಸುತ್ತಿದ್ದ ಒಬ್ಬ ಮಹಿಳೆ ತಾನು ಇಳಿಯಬೇಕಿದ್ದ ಸ್ಥಳದಲ್ಲಿ ಆಟೋ ನಿಲ್ಲಿಸಿ ಆಟೋ ಚಾಲಕನಿಗೆ ಹಣ ಪಾವತಿಸಿ ಹೋಗುತ್ತಾಳೆ, ನಂತರ ಆಟೋ ಚಾಲಕ ಅದೇ ನಿಲ್ದಾಣದಿಂದ ಒಂದು ಶಾಲಾ ಮಗುವನ್ನು ತನ್ನ ಆಟೋದಲ್ಲಿ ಶಾಲೆಗೆ ಕರೆದುಕೊಂಡು ಹೋಗಲು ಹತ್ತಿಸಿಕೊಳ್ಳುತ್ತಾನೆ, ಅಷ್ಟರಲ್ಲಿ ಆ ಚಾಲಕನಿಗೆ ಒಂದು ಕರೆ ಬರುತ್ತದೆ, ಆಗ ಚಾಲಕ ಕರೆ ಸ್ವೀಕರಿಸಿ ಮಾತನಾಡುತ್ತಿರುವಾಗ ಆಟೋದಲ್ಲಿದ ಶಾಲಾ ಮಗು ಆಟೋದಲ್ಲಿದ್ದ ಬ್ಯಾಗ್ ಗಮನಿಸಿ ಅದನ್ನು ಚಾಲಕನಿಗೆ ತೋರಿಸುತ್ತದೆ, ಆಗ ಆಟೋ ಚಾಲಕ ಅದು ಯಾರದು ಎಂದು ಯೋಚಿಸಿ, ಮಹಿಳೆಯೊಬ್ಬರು ಆಟೋದಿಂದ ಇಳಿದುಹೋಗಿದ್ದನ್ನು ನೆನಪು ಮಾಡಿಕೊಂಡು ಆ ಮಹಿಳೆ ಬರಬಹುದೆಂದು ಕೆಲ ಸಮಯ ಕಾಯುತ್ತಿರುತ್ತಾನೆ. ಆದರೆ ಆ ಶಾಲಾ ಮಗುವಿಗೆ ತಡವಾಗುತ್ತಿದೆ ಎಂದು ತಿಳಿದು ಅಲ್ಲಿಂದ ತೆರಳುತ್ತಾನೆ.
ಸ್ವಲ್ಪ ಸಮಯದ ನಂತರ ಬ್ಯಾಗ್ ಕಳೆದುಕೊಂಡಿದ್ದ ಮಹಿಳೆ ತನ್ನ ಬ್ಯಾಗ್ ಹುಡುಕಿಕೊಂಡು ಆಟೋ ಇಳಿದ ಜಾಗಕ್ಕೆ ಬರುತ್ತಾಳೆ. ಅಷ್ಟರಲ್ಲಾಗಲೆ ಆಟೋ ಅಲ್ಲಿಂದ ಹೋಗಿರುವುದನ್ನು ಕಂಡು ಗಾಬರಿಯಾಗುತ್ತಾಳೆ. ಸುತ್ತ ಮುತ್ತ ಹುಡಿಕಿದರೂ ಬ್ಯಾಗ್ ಬಿಟ್ಟದ ಆಟೋ ಆಕೆಗೆ ಕಾಣುವುದಿಲ್ಲ. ಆಗ ಚಿಂತೆಗೀಡಾಗುವ ಮಹಿಳೆ ಮುಂದೇನು ಮಾಡಬೇಕೆಂದು ತೋಚದೆ ಚಿಂತಿಸುತ್ತ ನಿಲ್ಲುತ್ತಾಳೆ. ಆಗ ಅದೇ ಜಾಗಕ್ಕೆ ಆಟೋ ಬರುತ್ತದೆ ಬ್ಯಾಗ್ ಕಳೆದುಕೊಂಡಿದ್ದ ಮಹಿಳೆಯನ್ನು ನೋಡಿದ ಆಟೋ ಚಾಲಕ ಆ ಮಹಿಳೆಗೆ ಬ್ಯಾಗ್ ಅನ್ನು ಹಿಂತಿರುಗಿಸುತ್ತಾನೆ.
ಬ್ಯಾಗ್ ಕಳೆದುಕೊಂಡಿದ್ದ ಮಹಿಳೆಯು ತನ್ನ ಬ್ಯಾಗ್ನಲ್ಲಿದ ವಸ್ತುಗಳನ್ನು ಪರಿಶೀಲಿಸುತ್ತಾಳೆ, ಎಲ್ಲವೂ ಸರಿತಾಗಿರುವುದನ್ನು ಕಂಡು ಸಮಾಧಾನ ಪಟ್ಟುಕೊಳ್ಳುತ್ತಾಳೆ. ಆಟೋ ದಲ್ಲಿದ ಮಗು ಮತ್ತು ಆಟೋ ಚಾಲಕನಿಗೆ ಕೃತಜ್ಞತೆ ತಿಳಿಸುತ್ತಾಳೆ.
ಫ್ಯಾಕ್ಟ್ಚೆಕ್:
ವಾಸ್ತವವಾಗಿ ಸೆರೆಯಾಗಿರುವ ದೃಶ್ಯಗಳು ಸಿಸಿ ಟಿವಿಯದ್ದಲ್ಲ ಬದಲಿಗೆ ಇದನ್ನು ಶೈಕ್ಷಣಿಕ ಉಪಯೋಗಕ್ಕೆ ಮತ್ತು ಜನ ಜಾಗೃತಿ ಮೂಡಿಸಲು ಸ್ಕ್ರಿಪ್ಟ್ (ಅಭಿನಯಿಸಿರುವ) ಮಾಡಿರುವ ವಿಡಿಯೊ ಆಗಿದೆ. ವಿಡಿಯೋ ಮುಗಿದ ನಂತರ ಕೊನೆಯಲ್ಲಿ ಇದು ನಿಜವಾಗಿ ನಡೆದಿರುವುದಲ್ಲ, ಅಭಿನಯಿಸಿರುವುದು ಎಂದು ತೋರಿಸುತ್ತದೆ.
ಈ ರೀತಿಯ ಹಲವು ವಿಡಿಯೋಗಳನ್ನು ಭಾರತದ ಬ್ಯಾಡ್ಮಿಂಟನ್ ಆಟಗಾರ್ತಿ ಜ್ವಾಲಾ ಗುಟ್ಟಾ ಅವರು ಸಾಮಾಜಿಕ ಕಳಕಳಿಯ ಉದ್ದೇಶದಿಂದ ತಮ್ಮ ಸೋಶಿಯಲ್ ಮೀಡಿಯಾ ಪೇಜ್ನಲ್ಲಿ ಶೇರ್ ಮಾಡಿಕೊಳ್ಳುತ್ತಿರುತ್ತಾರೆ. ಆ ವಿಡಿಯೋ ವಿವರಣೆಯಲ್ಲಿಯೂ ಸಹ ಇದು ಮನೋರಂಜನೆ ಮತ್ತು ಶೈಕ್ಷಣಿಕ ಉದ್ದೇಶಕ್ಕಾಗಿ ಮಾತ್ರ ಅಂತ ಬರೆದಿದೆ.

ಹಲವರು ಆಟೋ/ಕ್ಯಾಬ್ನಲ್ಲಿ ಪ್ರಯಾಣ ಮಾಡುವಾಗ ಬ್ಯಾಗ್ ಕಳೆದುಕೊಂಡ ಸಂದರ್ಭದಲ್ಲಿ ಚಾಲಕರು ಅದನ್ನು ವಾಪಸ್ ಮಾಡಿದ ಹಲವಾರು ಘಟನೆಗಳು ನಿಜವಾಗಿ ಜರುಗಿವೆ. ಅದರೆ ಇಲ್ಲಿ ಹಂಚಿಕೊಂಡಿರುವ ಈ ವಿಡಿಯೊ ವಿದ್ಯಾರ್ಥಿಗಳಿಗೆ ಜಾಗೃತಿ ಮೂಡಿಸುವ ಸಲುವಾಗಿ ಮಾಡಲಾಗಿರುವ ಸ್ಕ್ರಿಪ್ಟೆಡ್ ವಿಡಿಯೊವಾಗಿದ್ದು, ಇದನ್ನು ಜನಸಾಮಾನ್ಯರು ನಿಜವಾಗಿಯೂ ನಡೆದ ಘಟನೆ ಎಂದು ತಿಳಿದು ತಮ್ಮ ಸೋಶಿಯಲ್ ಮೀಡಿಯಾಗಳಲ್ಲಿ ಶೇರ್ ಮಾಡಿಕೊಳ್ಳುತ್ತಿದ್ದಾರೆ. ಹಾಗಾಗಿ ಈ ವಿಡಿಯೊ ವಿದ್ಯಾರ್ಥಿಗಳಿಗೆ ಮತ್ತು ಜನಸಾಮಾನ್ಯರಿಗೆ ಜಾಗೃತಿ ಮೂಡಿಸುವ ಸಲುವಾಗಿ ಮಾಡಲಾಗಿರುವ ವಿಡಿಯೊ ಎಂದು ಫ್ಯಾಕ್ಟ್ಚೆಕ್ ಮೂಲಕ ತಿಳಿಸಲಾಗಿದೆ.
ಇದನ್ನು ಓದಿರಿ: Fact check: ಮನುಷ್ಯನ ಆಕಾರದ ವಿದ್ಯುತ್ ಕಂಬಗಳು ಇರುವುದು ನಿಜವೆ?

