ರಾಜಸ್ಥಾನ ಸ್ಥಳೀಯ ಚುನಾವಣೆ: 231 ಸ್ಥಾನಗಳನ್ನು ಗೆದ್ದು ಕಾಂಗ್ರೆಸ್‌ ಮುನ್ನಡೆ; ಬಿಜೆಪಿಗೆ 185 ಸ್ಥಾನಗಳು!

ರಾಜಸ್ಥಾನದಲ್ಲಿ ಆರು ಜಿಲ್ಲೆಗಳ 78 ಪಂಚಾಯತ್‌ ಸಮಿತಿಯ 1,564 ಸ್ಥಾನಗಳಿಗೆ ಚುನಾವಣೆ ನಡೆದಿದ್ದು, ಇಂದು ಮತ ಎಣಿಕೆ ನಡೆಯುತ್ತಿದೆ. ಇದೂವರೆಗೂ, ಆಡಳಿತಾರೂಢ ಕಾಂಗ್ರೆಸ್ 231 ಪಂಚಾಯತಿ ಸ್ಥಾನಗಳನ್ನು ಮತ್ತು ವಿರೋಧ ಪಕ್ಷ ಬಿಜೆಪಿ 185 ರಲ್ಲಿ ಸ್ಥಾನಗಳನ್ನು ಗೆದ್ದುಕೊಂಡಿದೆ.

ಆರು ಜಿಲ್ಲಾ ಕೇಂದ್ರಗಳಲ್ಲಿ ಶನಿವಾರ ಮತ ಎಣಿಕೆ ನಡೆಯುತ್ತಿದ್ದು, ಕಾಂಗ್ರೆಸ್‌ ಹೆಚ್ಚು ಸ್ಥಾನಗಳನ್ನು ಗೆದ್ದಿದೆ. ಮಾತ್ರವಲ್ಲದೆ, ಹೆಚ್ಚು ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ.

ಜೋಧ್‌ಪುರದಲ್ಲಿ ಜಿಲಾ ಪರಿಷತ್‌ನ ಒಂದು ಸ್ಥಾನವನ್ನು ಕಾಂಗ್ರೆಸ್ ವಶಪಡಿಸಿಕೊಂಡಿದೆ.

1 ಗಂಟೆಯವರೆಗೆ ನಡೆದಮತ ಎಣಿಕೆಯಲ್ಲಿ ಒಟ್ಟು 1,564 ಸ್ಥಾನಗಳಲ್ಲಿ ಕಾಂಗ್ರೆಸ್ 231, ಬಿಜೆಪಿ 185, ಆರ್‌ಎಲ್‌ಪಿ 16 ಮತ್ತು ಬಿಎಸ್‌ಪಿ ಮೂರು ಸ್ಥಾನಗಳನ್ನು ಗೆದ್ದಿದೆ. ಸ್ವತಂತ್ರರು 111 ಸ್ಥಾನಗಳಲ್ಲಿ ಗೆದ್ದಿದ್ದಾರೆ.

ಜಿಲ್ಲಾ ಪರಿಷತ್‌ನ ಒಟ್ಟು 200 ಸ್ಥಾನಗಳಲ್ಲಿ ಇಲ್ಲಿಯವರೆಗೆ ಒಂದು ಸ್ಥಾನದ ಫಲಿತಾಂಶ ಮಾತ್ರ ಪ್ರಕಟವಾಗಿದ್ದು, ಅದನ್ನು ಕಾಂಗ್ರೆಸ್‌ ಗೆದ್ದುಕೊಂಡಿದೆ.

ಆಗಸ್ಟ್ 26, 29 ಮತ್ತು ಸೆಪ್ಟೆಂಬರ್ 1 ರಂದು ಭರತಪುರ, ದೌಸಾ, ಜೈಪುರ, ಜೋಧಪುರ, ಸವಾಯಿ ಮಾಧೋಪುರ ಮತ್ತು ಸಿರೋಹಿ ಜಿಲ್ಲೆಗಳಲ್ಲಿ ಒಟ್ಟು ಆರು ಜಿಲ್ಲಾ ಪರಿಷತ್‌ನ 200 ಸದಸ್ಯರು ಮತ್ತು 78 ಪಂಚಾಯತ್ ಸಮಿತಿಯ 1,564 ಸದಸ್ಯರನ್ನು ಆಯ್ಕೆ ಮಾಡಲು ಮೂರು ಹಂತಗಳಲ್ಲಿ ಮತದಾನ ನಡೆದಿತ್ತು.

ಇದನ್ನೂ ಓದಿ: ಪಂಚರಾಜ್ಯ ಚುನಾವಣೆ 2022: ಕಾಂಗ್ರೆಸ್‌ಗೆ ಬಿಗ್‌ಶಾಕ್‌; ನಾಲ್ಕು ರಾಜ್ಯಗಳಲ್ಲಿ ಬಿಜೆಪಿಗೇ ಅಧಿಕಾರ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights