ಕಾಬೂಲ್‌ನಲ್ಲಿ ಪ್ರತಿಭಟನಾ ನಿರತ ಅಫ್ಘಾನಿಸ್ತಾನ್ ಮಹಿಳೆ ಮೇಲೆ ಹಲ್ಲೆ..!

ಕಾಬೂಲ್‌ನಲ್ಲಿ ಪ್ರತಿಭಟನಾ ನಿರತ ಅಫ್ಘಾನಿಸ್ತಾನ್ ಮಹಿಳೆಯ ಮೇಲೆ ತಾಲಿಬಾನಿಗಳು ಹಲ್ಲೆ ಮಾಡಿದ್ದು ಕಾಬೂಲ್‌ನಲ್ಲಿ ನಡೆಯುತ್ತಿರುವ ಮಹಿಳಾ ನೇತೃತ್ವದ ಪ್ರತಿಭಟನೆ ಶನಿವಾರ ಹಿಂಸಾತ್ಮಕ ತಿರುವು ಪಡೆದಿದೆ.

ತಾಲಿಬಾನ್ ಅಧ್ಯಕ್ಷೀಯ ಅರಮನೆಗೆ ಹೋಗುವ ದಾರಿಯಲ್ಲಿ ಪ್ರತಿಭಟನಾ ನಿರತ ಮಹಿಳೆಯರನ್ನು ತಡೆದ ತಾಲಿಬಾನಿಗಳು ಅವರ ಮೇಲೆ ಅಶ್ರುವಾಯು ಪ್ರಯೋಗ ಮಾಡಿದ್ದಾರೆ. ಘಟನೆಯಲ್ಲಿ  ಒಬ್ಬ ಮಹಿಳೆ ಗಾಯಗೊಂಡಿದ್ದಾರೆ.

Etilaatroz ಸುದ್ದಿ ಪ್ರಕಾಶಕ ಜಾಕಿ ದಾರ್ಯಾಬಿ ಹಂಚಿಕೊಂಡ ವೀಡಿಯೋದಲ್ಲಿ, ಮಹಿಳೆಯನ್ನು ರಬಿಯಾ ಸಾದತ್ ಎಂದು ಗುರುತಿಸಲಾಗಿದೆ. ವಿಡಿಯೋದಲ್ಲಿ ಆಕೆಯು ಹಣೆಯೊಂದಿಗೆ ರಕ್ತಸ್ರಾವವಾಗಿರುವುದನ್ನು ಕಾಣಬಹುದು. ಇತರ ವೀಡಿಯೋಗಳು ತಾಲಿಬಾನ್ ಹೋರಾಟಗಾರರು ಕಾಬೂಲ್‌ನಲ್ಲಿ ಮಹಿಳೆಯರ ಪ್ರತಿಭಟನಾ ಮೆರವಣಿಗೆಯನ್ನು ನಿಲ್ಲಿಸುವುದು ಕಾಣಬಹುದು.

ಅಫ್ಘಾನಿಸ್ತಾನ ಮಹಿಳೆಯರು ದೇಶದಲ್ಲಿ ಬೀದಿಗಿಳಿದು ಹೋರಾಟ ಮಾಡುತ್ತಿರುವುದು ಹೋರಾಟ ಮಾಡುತ್ತಿರುವುದು ಸತತ ಮೂರನೇ ದಿನ ಇದು. ಫಲಕಗಳನ್ನು ಹೊತ್ತುಕೊಂಡು ಘೋಷಣೆಗಳನ್ನು ಕೂಗುತ್ತಾ, ಅಫಘಾನ್ ಮಹಿಳೆಯರು ತಮಗೆ ಶಿಕ್ಷಣವನ್ನು ಮುಂದುವರಿಸಲು ಮತ್ತು ಉದ್ಯೋಗಗಳನ್ನು ಮಾಡಲು ಅವಕಾಶ ನೀಡಬೇಕು ಎಂದು ಒತ್ತಾಯಿಸಿದ್ದಾರೆ.

ಅಫಘಾನ್ ಮಹಿಳೆಯರು ಆಡಳಿತದಲ್ಲಿ ಮತ್ತು ಚುನಾವಣಾ ಹಕ್ಕುಗಳಲ್ಲಿ ಪ್ರಾತಿನಿಧ್ಯದಂತಹ ಹಕ್ಕುಗಳಿಗಾಗಿ ಒತ್ತಡ ಹಾಕಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights