Fact check: ಮನುಷ್ಯನ ಆಕಾರದ ವಿದ್ಯುತ್ ಕಂಬಗಳು ಇರುವುದು ನಿಜವೆ?

ಐಸ್‌ಲ್ಯಾಂಡ್‌ನಾದ್ಯಂತ ವಿದ್ಯುತ್ ಪ್ರಸರಣದ (ಹೈಪವರ್‌ ಸಪ್ಲೈ) ಸಂಪರ್ಕಕ್ಕೆ ಮಾನವ ಆಕಾರದ ಕಂಬಗಳನ್ನು ಬಳಸಲಾಗಿದೆ ಎಂದು ಹೇಳುತ್ತಿರುವ  ಕೆಲವು ಫೋಟೋಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಆ ಮಾನವಾಕಾರದ ಕಂಬಗಳನ್ನು ಈಗಾಗಲೆ ಬಳಸಿ ವಿದ್ಯುತ್ ಪ್ರಸರಣ ಮಾಡಲಾಗಿದೆಯೆ? ವೈರಲ್ ಪೋಸ್ಟ್‌ನಲ್ಲಿ ಮಾಡಲಾಗಿರುವ ಪ್ರತಿಪಾದನೆಯ ವಾಸ್ತವವನ್ನು ಅರಿಯಲು ಇದನ್ನು ಫ್ಯಾಕ್ಟ್‌ಚೆಕ್ ಮೂಲಕ ಪರಿಶೀಲಿಸೋಣ.

ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗುತ್ತಿರುವ ಮಾನವಾಕಾರದ ವಿದ್ಯುತ್ ಪ್ರಸರಣ ಕಂಬಗಳು

ಫ್ಯಾಕ್ಟ್‌ಚೆಕ್:

ಸಾಮಾಜಿಕ ಮಾದ್ಯಮಗಳಲ್ಲಿ ವೈರಲ್ ಆದ ಫೋಟೋಗಳನ್ನು ಗೂಗಲ್ ರಿವರ್ಸ್ ಇಮೇಜ್ ಸರ್ಚ್ ಮಾಡಿದಾಗ, ಅವುಗಳನ್ನು ಚೋಯ್ ಮತ್ತು ಶೈನ್ ಎಂಬ ಆರ್ಕಿಟೆಕ್ಟ್‌ಗಳು ವಿನ್ಯಾಸಗೊಳಿಸಿರುವುದು ಎಂದು ತಿಳಿದು ಬಂದಿದೆ. ಅದೇ ಚಿತ್ರಗಳನ್ನು ಅವರ ವೆಬ್‌ಸೈಟ್‌ನಲ್ಲಿ ನೋಡಬಹುದು. ಅವುಗಳನ್ನು ಈ ಕೆಳಗಿನ ವಿವರಣೆಯೊಂದಿಗೆ ಹಂಚಿಕೊಳ್ಳಲಾಗಿದೆ – “ದ ಲ್ಯಾಂಡ್ ಆಫ್ ಜೈಂಟ್ಸ್™: ಲ್ಯಾಂಡ್‌ಸ್ನೆಟ್, ಐಸ್‌ಲ್ಯಾಂಡ್‌ಗಾಗಿ ಪ್ರಸ್ತಾವನೆ”. ಲ್ಯಾಂಡ್‌ಸ್ನೆಟ್ ಐಸ್‌ಲ್ಯಾಂಡ್‌ನಲ್ಲಿರುವ ವಿದ್ಯುತ್ ಪ್ರಸರಣ ಕಂಪನಿಯಾಗಿದೆ. ಫೋಟೋಗಳನ್ನು ಸ್ಪಷ್ಟವಾಗಿ ಗಮನಿಸಿದಾಗ, ಅವು 3D ಇಮೇಜ್‌ಗಳಾಗಿವೆ, ನಿಜವಾಗಿಯೂ ನಿರ್ಮಿಸಿದ ಕಂಬಗಳಲ್ಲ ಎಂದು ತಿಳಿದುಬಂದಿದೆ.

ಚೋಯ್ + ಶೈನ್ ಆರ್ಕಿಟೆಕ್ಟ್‌ಗಳು ತಮ್ಮ ಫೇಸ್‌ಬುಕ್ ಪುಟದಲ್ಲಿ ಆಗಸ್ಟ್ 2010 ರಲ್ಲಿ ಪೋಸ್ಟ್‌ ಮಾಡಿದ್ದಾರೆ . ಮೇ 2021 ರಲ್ಲಿ ಅವರು ಮಾನವ-ಆಕಾರದ ಕಂಬಗಳ ಚಿತ್ರವನ್ನು Instagram ನಲ್ಲಿ ಪೋಸ್ಟ್ ಮಾಡಿ  “ಪ್ರಸ್ತುತ ಪ್ರಸ್ತಾಪಗಳಲ್ಲಿ ಐಸ್ಲ್ಯಾಂಡ್, ನಾರ್ವೆ, ಫ್ರಾನ್ಸ್, USA, ಕೊರಿಯಾ, ಕೆನಡಾ, ಸ್ಥಳಗಳು ಸೇರಿವೆ ಎಂದು ಬರೆದಿದ್ದಾರೆ.  ” Instagram ಬಳಕೆದಾರರಲ್ಲಿ ಒಬ್ಬರು ಯೋಜನೆಗೆ ಸಂಬಂಧಿಸಿದಂತೆ – “ಈ ಯೋಜನೆಯನ್ನು ಅನುಮೋದಿಸಲಾಗಿದೆಯೇ? ನಾನು ಅವರನ್ನು ಎಲ್ಲಿ ನೋಡಬಹುದು?”, ಎಂದು ಕಮೆಂಟ್ ಮಾಡಿದ್ದಾರೆ. “2021 ರಲ್ಲಿ ಅವರ ಪೋಸ್ಟ್‌ನ ಕಾಮೆಂಟ್‌ಗಳಲ್ಲಿ, ಚೋಯ್ + ಶೈನ್ ಆರ್ಕಿಟೆಕ್ಟ್‌ಗಳು ಉತ್ತರಿಸಿದ್ದಾರೆ – “ಶೀಘ್ರದಲ್ಲೇ ಐಸ್‌ಲ್ಯಾಂಡ್ ಮತ್ತು ನಾರ್ವೆಯಲ್ಲಿ ಆಶಾದಾಯಕವಾಗಿ” ಎಂದು ಉತ್ತರಿಸಲಾಗಿದೆ. ಆದ್ದರಿಂದ, ಅವುಗಳನ್ನು ಇನ್ನೂ ಐಸ್ಲ್ಯಾಂಡ್ನಲ್ಲಿ ನಿರ್ಮಿಸಲಾಗಿಲ್ಲ. ಅಲ್ಲದೆ, ಜನವರಿ 2022 ರಲ್ಲಿ AFP ಯೊಂದಿಗೆ ಮಾತನಾಡುತ್ತಾ, ಚೋಯ್ + ಶೈನ್ ಆರ್ಕಿಟೆಕ್ಟ್‌ಗಳು ತಾವು ಇನ್ನೂ ಅವುಗಳನ್ನು ನಿರ್ಮಿಸಬೇಕಾಗಿದೆ ಎಂದು ಹೇಳಿದ್ದಾರೆ.

2015 ರಲ್ಲಿ, ‘ದಿ ರೇಕ್‌ಜಾವಿಕ್ ಗ್ರೇಪ್‌ವೈನ್’ ಅವರು ಮಾನವ ಆಕಾರದ ಕಂಬಗಳ ಕುರಿತು ಲ್ಯಾಂಡ್‌ಸ್‌ನೆಟ್ ಅಧಿಕಾರಿಗಳನ್ನು ಸಂಪರ್ಕಿಸಿದಾಗ, ಅಧಿಕಾರಿಗಳು ನೀಡಿದ ಮಾಹಿತಿಯಂತೆ – “2008 ರ ಐಸ್‌ಲ್ಯಾಂಡಿಕ್‌ನಲ್ಲಿ ಮಾನ್ಯತೆ ಪ್ರಶಸ್ತಿಯನ್ನು ಗೆದ್ದ ಕಂಬಗಳು ಇವು ಯಾವಾಗ ಅಥವಾ ಎಲ್ಲಿ ಎಂದು ತಲೆ ಎತ್ತುತ್ತವೆ ಎಂದು ನಿರ್ಧರಿಸಲಾಗಿಲ್ಲ. ಆದರೆ ಹೈ-ವೋಲ್ಟೇಜ್ ಎಲೆಕ್ಟ್ರಿಕಲ್ ಕಂಬಗಳು ಅಂತರಾಷ್ಟ್ರೀಯ ವಿನ್ಯಾಸ ಸ್ಪರ್ಧೆಯಲ್ಲಿ ನಿರ್ಮಿಸಲಾಗಿತ್ತು ಎಂದಿದ್ದಾರೆ.

ಒಟ್ಟಾರೆಯಾಗಿ ಹೇಳುವುದಾದರೆ ಸಾಮಾಜಿಕ ಮಾದ್ಯಮಗಳಲ್ಲಿ ವೈರಲ್ ಆಗಿರುವ ಮಾನವ-ಆಕಾರದ ಕಂಬಗಳು 3D ಡಿಸೈನ್ ಆಗಿದ್ದು ಕೇವಲ ಪ್ರಸ್ತಾಪಗಳ ಹಂತದಲ್ಲಿವೆ; ಅವುಗಳನ್ನು ಇನ್ನೂ ಅಧಿಕೃತವಾಗಿ ಎಲ್ಲಿಯೂ ನಿರ್ಮಿಸಲಾಗಿಲ್ಲ ಹಾಗಾಗಿ ಪೋಸ್ಟ್‌ನಲ್ಲಿ ಮಾಡಲಾಗಿರುವ ಪ್ರತಿಪಾದನೆಯು ತಪ್ಪಾಗಿದೆ.


ಇದನ್ನು ಓದಿರಿ: Fact check: ಜಾಟ್ ಮನೆಗಳಿಂದ ಲಸ್ಸಿ ಕೇಳುತ್ತಿದ್ದಾರೆ – ಪ್ರಧಾನಿಯವರ ಭಾಷಣವನ್ನು ತಿರುಚಲಾಗಿದೆ


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights