Fact check: ಜಾಟ್ ಮನೆಗಳಿಂದ ಲಸ್ಸಿ ಕೇಳುತ್ತಿದ್ದಾರೆ – ಪ್ರಧಾನಿಯವರ ಭಾಷಣವನ್ನು ತಿರುಚಲಾಗಿದೆ
ಪ್ರಧಾನಿ ನರೇಂದ್ರ ಮೋದಿಯವರಿಗೆ ಸಂಬಂಧಿಸಿದಂತೆ ಪೋಟೋವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದೆ. ಇಂಡಿಯಾ ಟಿವಿ ನ್ಯೂಸ್ನ ಗ್ರಾಫಿಕ್ ಎಂದು ಹೇಳಲಾಗುವ ಪೋಟೋವೊಂದು ಹಲವು ಬಾರಿ ಶೇರ್ ಆಗುತ್ತಿದೆ, “ಪ್ರಧಾನಿ ನರೇಂದ್ರ ಮೋದಿ ಅವರು ಜಾಟ್ ಮನೆಗಳಿಂದ ಲಸ್ಸಿ ಕೇಳುತ್ತಿದ್ದಾರೆ ಹಾಗೂ ತಾನು ಇಪ್ಪತ್ತು ವರ್ಷಗಳ ಕಾಲ ಜಾಟ್ ಲ್ಯಾಂಡ್’ನಲ್ಲಿ ವಾಸಿಸುತ್ತಿದ್ದೆ” ಎಂದು ಮೋದಿ ಹೇಳಿದ್ದರು ಎಂದು ಪ್ರತಿಪಾದಿಸಲಾಗುತ್ತಿದೆ. ವೈರಲ್ ಪೋಟೋದ ಸತ್ಯಾಸತ್ಯತೆಗಳು ಏನೆಂದು ಫ್ಯಾಕ್ಟ್ಚೆಕ್ ಮೂಲಕ ಪರಿಶೀಲಿಸಲಾಗಿದೆ.
लस्सी तब याद आयी जब जाटों ने छठी का दूध याद दिला दिया।😃 pic.twitter.com/InojvJxVLG
— Gaurav Tushir (@gauravtushir09) February 1, 2022
ನ್ಯಾಷನಲ್ ಸ್ಟೂಡೆಂಟ್ಸ್ ಯೂನಿಯನ್ ಆಫ್ ಇಂಡಿಯಾದ (NSUI) ರಾಷ್ಟ್ರೀಯ ಕಾರ್ಯದರ್ಶಿ ಗೌರವ್ ತುಶೀರ್ ತಮ್ಮ ಅಧಿಕೃತ ಟ್ವಿಟರ್ ಹ್ಯಾಂಡಲ್ನಿಂದ ಹಿಂದಿ ಶೀರ್ಷಿಕೆಯೊಂದಿಗೆ ಚಿತ್ರವನ್ನು ಟ್ವೀಟ್ ಮಾಡಿದ್ದಾರೆ, ಇದರರ್ಥ, “ಜಾಟ್ಗಳು ಅವನಿಗೆ ಪಾಠ ಕಲಿಸಿದಾಗ ಅವನಿಗೆ ಲಸ್ಸಿ ನೆನಪಾಯಿತು”. ಎಂದು ಲೇವಡಿ ಮಾಡಿದ್ದಾರೆ.
ಫ್ಯಾಕ್ಟ್ಚೆಕ್:
2022 ರ ಜನವರಿ 28 ರಂದು ನವದೆಹಲಿಯ ಕರಿಯಪ್ಪ ಗ್ರೌಂಡ್ನಲ್ಲಿ (NCC) ಎನ್ಸಿಸಿ ಕೆಡೆಟ್ಗಳನ್ನು ಉದ್ದೇಶಿಸಿ ಭಾಷಣ ಮಾಡುವಾಗ ಮೋದಿ ಅವರು ಧರಿಸಿದ್ದ ಪೇಟ ಹಾಗೂ ಸದ್ಯ ಸಾಮಾಜಿಕ ಮಾಧಯಮಗಳಲ್ಲಿ ವೈರಲ್ ಆಗುತ್ತಿರುವ ಫೋಟೋ ಒಂದೆ ಮಾದರಿಯಾಗಿವೆ. ವೈರಲ್ ಆಗಿರುವ ಇಂಡಿಯಾ ಟಿವಿ ಗ್ರಾಫಿಕ್ ಟೈಮ್ ಸ್ಟ್ಯಾಂಪ್ ನಲ್ಲಿ ದಿನ, ವಾರ ಸಮಯ ಎಲ್ಲವನ್ನು ನೋಡಬಹುದಾಗಿದೆ.
ಇಂಡಿಯಾ ಟಿವಿಯ ಯೂಟ್ಯೂಬ್ ಚಾನೆಲ್ನಲ್ಲಿ ಗೂಗಲ್ ಕೀವರ್ಡ್ ಸರ್ಚ್ ನಡೆಸಲಾಗಿದ್ದು , ಅಲ್ಲಿಯೂ ಅದೇ ದಿನಾಂಕದಂದು ಅಪ್ಲೋಡ್ ಮಾಡಿದ ಸುದ್ದಿ ವರದಿಯು ಲಭ್ಯವಾಗಿದ್ದು ಆ ಸಮಯದಲ್ಲಿ ಎನ್ಸಿಸಿ ಈವೆಂಟ್ ಅನ್ನು ಪ್ರಸಾರ ಮಾಡುತ್ತಿರುವುದು ಕಂಡುಬಂದಿದೆ. ವೀಡಿಯೊ ವರದಿಯನ್ನು ಕೆಳಗೆ ನೋಡಬಹುದು.
ಮಧ್ಯಾಹ್ನ 1.05 ಗಂಟೆಯ ಸಮಯ ಸ್ಟ್ಯಾಂಪ್ನಲ್ಲಿ ಪ್ರಸಾರವಾದ ಇಂಡಿಯಾ ಟಿವಿಯ ಮುಖ್ಯಾಂಶಗಳು ಮತ್ತು ಟಿಕ್ಕರ್ಗಳನ್ನು ನಾವು ಪರಿಶೀಲಿಸಿದ್ದೇವೆ ಮತ್ತು ಸುದ್ದಿ ವಾಹಿನಿಯು ಪ್ರಧಾನ ಮಂತ್ರಿಗಳು ಜಾಟ್ ಲ್ಯಾಂಡ್ ವಿಚಾರವಾಗಿ ಮಾತನಾಡಿರುವ ಹೇಳಿಕೆಯಾಗಲಿ ಅಥವಾ ವಿಡಿಯೋ ಕ್ಲಿಪ್ಗಳಾಗಲಿ ಲಭ್ಯವಿಲ್ಲ.
2022 ರ ಜನವರಿ 28 ರಂದು ನವದೆಹಲಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಧಾನಿಯವರು ಮಾಡಿದ ಭಾಷಣವನ್ನು ಅವರ ಅಧಿಕೃತ ಫೇಸ್ಬುಕ್ ಪುಟದಿಂದ ಕೇಳಲಾಗಿದ್ದು ಅವರು ಎಲ್ಲಿಯೂ ಅಂತಹ ಹೇಳಿಕೆ ನೀಡಿರುವುದು ಕಂಡುಬಂದಿಲ್ಲ. ಬದಲಾಗಿ, ಎನ್ಸಿಸಿ ರ್ಯಾಲಿಯನ್ನುದ್ದೇಶಿಸಿ ಮಾತನಾಡುತ್ತಾ ದೇಶವು ತನ್ನ ಸ್ವಾತಂತ್ರ್ಯದ ‘ಆಜಾದಿ ಕಾ ಅಮೃತ್ ಮಹೋತ್ಸವ’ವನ್ನು ಆಚರಿಸುತ್ತಿದೆ ಎಂದು ಪ್ರಧಾನಿ ಹೇಳಿದರು. ನಾನು ನಿಮ್ಮಂತೆಯೇ ಎನ್ಸಿಸಿಯ ಸಕ್ರಿಯ ಕೆಡೆಟ್ ಆಗಿದ್ದೆ ಎಂದೇಳಲು ಹೆಮ್ಮೆಪಡುತ್ತೇನೆ, ಎನ್ಸಿಸಿಯಲ್ಲಿ ನಾನು ಪಡೆದ ತರಬೇತಿಯಿಂದ, ಇಂದು ನಾನು ದೇಶಕ್ಕಾಗಿ ನನ್ನ ಜವಾಬ್ದಾರಿಗಳನ್ನು ನಿರ್ವಹಿಸುವಂತಹ ಅಪಾರ ಶಕ್ತಿಯನ್ನು ಪಡೆದಿದ್ದೇನೆ ಎಂದಿದ್ದಾರೆ.
ಮಾನ್ಯ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರದು ಎಡಿಟ್ ಮಾಡಿರುವ ಫೋಟೋ ಆಗಿದ್ದು ಹಿಂದೆ ಇಂಡಿಯಾ ಟಿವಿ ನ್ಯೂಸ್ ನಲ್ಲಿ ಜಾಟ್ ವಿಚಾರವಾಗಿ ಹೇಳಿಕೆ ನೀಡಿರುವ ವಿಡಿಯೊ ಆಗಲಿ ವರದಿಗಳಾಗಲಿ ಲಭ್ಯವಿಲ್ಲ. ಉತ್ತರ ಪ್ರದೇಶದಲ್ಲಿ ನಡೆಯುತ್ತಿರುವ ವಿಧಾನಸಭಾ ಚುನಾವಣಾ ವೇಳೆ ಪ್ರಧಾನ ಮಂತ್ರಿಯವರ ಭಾಷಣದ ಫೋಟೋವನ್ನು ಎಡಿಟ್ ಮಾಡಿ ಮತ್ತೊಂದು ಹೇಳಿಕೆಯೊಂದಿಗೆ ವೈರಲ್ ಮಾಡುವ ಮೂಲಕ ತಪ್ಪಾಗಿ ಹಂಚಿಕೊಳ್ಳಲಾಗುತ್ತಿದೆ.
ಇದನ್ನು ಓದಿ: Fact check: ಮಾನಸಿಕ ಅಸ್ವಸ್ಥ ಮಹಿಳೆಯ ವಿಡಿಯೊವನ್ನು ಮುಸಲ್ಮಾನರ ವಿರುದ್ದದ ಕೋಮು ದ್ವೇಷಕ್ಕೆ ಬಳಕೆ