Fact check: ಸಮಾಜವಾದಿ ಪಕ್ಷದ ರ್ಯಾಲಿಯಲ್ಲಿ ‘ಪಾಕಿಸ್ತಾನ ಪರ’ ಘೋಷಣೆ ಕೂಗಿಲ್ಲ, ಇದು BJP ಹಬ್ಬಿಸಿದ ಸುಳ್ಳು!
ಸಮಾಜವಾದಿ ಪಕ್ಷದ (ಎಸ್ಪಿ) ಅಭ್ಯರ್ಥಿಯ ಚುನಾವಣಾ ರ್ಯಾಲಿಯಲ್ಲಿ ‘ಪಾಕಿಸ್ತಾನ್ ಜಿಂದಾಬಾದ್’ ಎಂಬ ಘೋಷಣೆಯನ್ನುಕೂಗಲಾಗಿದೆ ಎಂದು ಹಲವು ಬಿಜೆಪಿ ನಾಯಕರು 14 ಸೆಕೆಂಡುಗಳ ವೀಡಿಯೊ ಕ್ಲಿಪ್ ಅನ್ನು ತಮ್ಮ ಸಾಮಾಜಿಕ ಮಾದ್ಯಮಗಳ ಮೂಲಕ ಹಂಚಿಕೊಂಡಿದ್ದಾರೆ. “ಸೈಕಲ್ ಬಟನ್ ಒತ್ತಿರಿ, (ಯುಪಿ) ಪಾಕಿಸ್ತಾನ ಮಾಡಿರಿ” ಎಂಬ ಹೇಳಿಕೆಯೊಂದಿಗೆ ಬಿಜೆಪಿಯ ರಾಷ್ಟ್ರೀಯ ವಕ್ತಾರ ಸಂಬಿತ್ ಪಾತ್ರಾ ಅವರು ಈ ವಿಡಿಯೋವನ್ನು ಪೋಸ್ಟ್ ಮಾಡಿದ್ದಾರೆ ಮತ್ತು ನಂತರ ಅದನ್ನು ಡಿಲೀಟ್ ಮಾಡಿದ್ದಾರೆ. ಅದರ ಆರ್ಕೈವ್ ಮಾಡಿದ ವೀಡಿಯೋವನ್ನು ಇಲ್ಲಿ ನೋಡಬಹುದು.

ಉತ್ತರ ಪ್ರದೇಶದ ಬಿತ್ತೂರ್ನ ಬಿಜೆಪಿ ಶಾಸಕ ಅಭಿಜಿತ್ ಸಿಂಗ್ ಸಂಗ ಕೂಡ ಈ ವಿಡಿಯೋವನ್ನು ಟ್ವೀಟ್ ಮಾಡಿ ಅದನ್ನೇ ಹೇಳಿಕೊಂಡಿದ್ದಾರೆ.
#जैसी_नियत_वैसी_बरक्कत।
ग्राम टिकरा में आज समाजवादी पार्टी द्वारालगे नारे पाकिस्तान बनाना है साईकिल का बटन दबाना हैराजनीति का यह तरीका मुनीन्द्र शुक्ला का बेहद शर्मनाक है
इन सब पर देश-द्रोह का मुकदमा लगना चाहिए#आएंगे_फिर_योगी_ही pic.twitter.com/ueXdp23HB0
— MLA Abhijeet Singh Sanga (@BJP4Abhijeet) February 4, 2022
ಪ್ರಶಾಂತ್ ಪಟೇಲ್ ಉಮ್ರಾವ್, ಸುರೇಶ್ ನಖುವಾ, ಕೃಷ್ಣಂದನ್ ಪಾಸ್ವಾನ್ ಮತ್ತು ವೈ. ಸತ್ಯ ಕುಮಾರ್ ಸೇರಿದಂತೆ ಹಲವು ಬಿಜೆಪಿ ಸದಸ್ಯರು ಈ ವೀಡಿಯೊವನ್ನು ಹಂಚಿಕೊಂಡಿದ್ದಾರೆ.

ಎಸ್ಪಿ ನಡೆಸಿದ ಚುನಾವಣಾ ರ್ಯಾಲಿಯಲ್ಲಿ “ಪಾಕಿಸ್ತಾನ ಪರ” ಘೋಷಣೆಗಳನ್ನು ಕೂಗಲಾಗಿದೆ ಎಂದು ವರದಿ ಮಾಡಿದ ಮಾಧ್ಯಮಗಳಲ್ಲಿ ನವಭಾರತ್ ಟೈಮ್ಸ್, ಆಜ್ ತಕ್, ಏಷ್ಯಾನೆಟ್, ಪ್ರಭಾತ್ ಖಬರ್, ಟೈಮ್ಸ್ ಆಫ್ ಇಂಡಿಯಾ ಸುದ್ದಿ ಮಾದ್ಯಮಗಳು ಸೇರಿವೆ. ಬಿಜೆಪಿ ಪರ ಪ್ರಚಾರ ಕೇಂದ್ರವಾದ ಒಪ್ ಇಂಡಿಯಾ ಕೂಡ ಇದೇ ವರದಿಯನ್ನು ಪ್ರಕಟಿಸಿದೆ.

ಫ್ಯಾಕ್ಟ್ಚೆಕ್:
ಬಿತ್ತೂರ್ನ ಎಸ್ಪಿ ಅಭ್ಯರ್ಥಿ ಮುನೀಂದ್ರ ಶುಕ್ಲಾ ಅವರು ಅಪ್ಲೋಡ್ ಮಾಡಿದ ವೀಡಿಯೊದಲ್ಲಿ ಮಾತನಾಡಿ ಸಾಮಾಜಿಕ ಮಾದ್ಯಮಗಳಲ್ಲಿ ವೈರಲ್ ಆಗಿರುವ ವಿಷಯವನ್ನು ಪ್ರಸ್ತಾಪಿಸಿ ವೈರಲ್ ವಿಡಿಯೊದಲ್ಲಿರುವ ಹೇಳಿಕೆಯನ್ನು ನಿರಾಕರಿಸಿದ್ದಾರೆ.
ವೈರಲ್ ವಿಡಿಯೊ ಬಗ್ಗೆ ಮಾತನಾಡಿರುವ ಶುಕ್ಲ “ವಿವಾದಾತ್ಮಕ ಘೋಷಣೆ – “ಪಾಕಿಸ್ತಾನ್ ಬನಾನಾ ಹೈ” – ಎಂದಿಲ್ಲ. ವಾಸ್ತವವಾಗಿ “ಮಾತಿ ಚೋರ್ ಭಗಾನಾ ಹೈ” (ಮರಳು ಕಳ್ಳನನ್ನು ಕಿತ್ತುಹಾಕಿ)” ಎಂಬ ಘೋಷಣೆಯನ್ನು ಕೂಗಲಾಗಿತ್ತು. ಬಿಜೆಪಿ ಶಾಸಕ ಅಭಿಜಿತ್ ಸಿಂಗ್ ಸಂಗ ಅವರು ಅಕ್ರಮ ಮರಳು ಗಣಿಗಾರಿಕೆಯಲ್ಲಿ ತೊಡಗಿರುವ ಕಾರಣಕ್ಕೆ ಮರಳು ಕಳ್ಳ ಎಂಬ ಪದವನ್ನು ಬಳಸಲಾಗಿದೆ ಎಂದು ಶುಕ್ಲಾ ವಿವರಿಸಿದ್ದಾರೆ. ಇದು ಪಾಕಿಸ್ತಾನದ ಪರ ಘೋಷಣೆಯಾಗಿದೆ ಎಂದು ಬಿಜೆಪಿ ಸದಸ್ಯರು ಹೇಳಿಕೊಳ್ಳುತ್ತಿದ್ದಾರೆ. ಅಂತಹ ಘೋಷಣೆಗಳನ್ನು ನಾವೇಕೆ ಕೂಗಬೇಕು? ಪೊಲೀಸರು ಕೂಡ ಈ ವಿಡಿಯೋವನ್ನು ತನಿಖೆ ಮಾಡಿದ್ದಾರೆ. ಇದು ಚುನಾವಣೆಗೆ ಮುನ್ನ ಹಿಂದೂ-ಮುಸ್ಲಿಂ ಸಂಘರ್ಷಕ್ಕೆ ಅವಕಾಶ ನೀಡಲು ಘಟನೆಯನ್ನು ತಿರುಚಿ ಕೋಮುವಾದಕ್ಕೆ ಅವಕಾಶ ಮಾಡಿಕೊಡುವುದು ಬಿಜೆಪಿಯ ತಂತ್ರವಾಗಿದೆ ಎಂದಿದ್ದಾರೆ.
ವೈರಲ್ ವೀಡಿಯೊದ ದೀರ್ಘ ವಿಡಿಯೊವನ್ನು ಶುಕ್ಲಾ ಹಂಚಿಕೊಂಡಿದ್ದಾರೆ. ಮೂಲ ವಿಡಿಯೊ 43 ಸೆಕೆಂಡ್ಗಳಿದ್ದು ಅದರಲ್ಲಿ ವೈರಲ್ ಮಾಡಲಾದ ವಿಡಿಯೊವನ್ನು 20-ಸೆಕೆಂಡ್ಗಳಿಂದ ಎಡಿಟ್ ಮಾಡಲಾಗಿದೆ. ವೀಡಿಯೊದಲ್ಲಿ, ನಾವು “ಮೊಹರ್ ಮಾರೋ ತಾನ್ ಕೆ ಸೈಕಲ್ ಕೆ ನಿಶಾನ್ ಪೆ” (ಸೈಕಲ್ ಬಟನ್ ಒತ್ತಿ) ಮತ್ತು “ಮಾತಿ ಚೋರ್ ಭಗಾನಾ ಹೈ, ಸೈಕಲ್ ಕಾ ಬಟನ್ ದಬಾನಾ ಹೈ” (ಮರಳು ಕಳ್ಳನನ್ನು ತೊಡೆದುಹಾಕಿ, ಸೈಕಲ್ ಬಟನ್ ಒತ್ತಿ) ಎಂದು ಹೇಳಿರುವುದನ್ನು ಕೇಳಬಹುದು ಎಂದಿದ್ದಾರೆ.
ವೈರಲ್ ವಿಡಿಯೊ ಬಗ್ಗೆ ಮಾತನಾಡಿರುವ ಬಿತ್ತೂರ್ನ ಸಹಾಯಕ ಚುನಾವಣಾಧಿಕಾರಿ (ಎಆರ್ಒ) ವೀಡಿಯೊವನ್ನು ಪರಿಶೀಲಿಸಲಾಗಿದೆ ಮತ್ತು ‘ಪಾಕಿಸ್ತಾನ್’ ಎಂಬ ಪದ ಎಲ್ಲಿಯೂ ಕಂಡುಬಂದಿಲ್ಲ ಎಂದು ಹೇಳಿದ್ದಾರೆ. ಈ ಕ್ಲಿಪ್ ಅನ್ನು ನ್ಯೂಸ್ 24 ಕೂಡ ಪ್ರಸಾರ ಮಾಡಿದೆ.
कानपुर प्रशासन ने अपनी जांच में पाया –
'बिठूर विधानसभा के सपा प्रत्याशी मुनींद्र शुक्ला की रैली के दौरान 'पाकिस्तान जिंदाबाद' के नारे नहीं लगाए गए #UPElections2022 #Kanpur pic.twitter.com/uujv6GwkaW
— News24 (@news24tvchannel) February 4, 2022
ಕಳೆದ ವರ್ಷ ಮಾರ್ಚ್ನಲ್ಲಿ ಯುಪಿ ಮೂಲದ ಪತ್ರಕರ್ತ ದಿವಾಸ್ ಪಾಂಡೆ ಅವರು ಬಿಜೆಪಿ ಶಾಸಕ ಅಭಿಜಿತ್ ಸಿಂಗ್ ಸಂಗ ಮತ್ತು ಯುಪಿ ಸರ್ಕಾರಿ ಅಧಿಕಾರಿಗಳನ್ನು ಟ್ಯಾಗ್ ಮಾಡಿ ಮತ್ತು ಸಂಗ ಅವರ ಸಂಬಂಧಿಕರು ಅಕ್ರಮ ಮರಳು ಗಣಿಗಾರಿಕೆಯಲ್ಲಿ ತೊಡಗಿದ್ದಾರೆ ಎಂದು ವರದಿ ಮಾಡಿದ್ದರು. ಪೊಲೀಸರ ಸಮ್ಮುಖದಲ್ಲಿಯೇ ಈ ಚಟುವಟಿಕೆ ನಡೆಯುತ್ತಿದೆ ಎಂದು ದಿವಾಸ್ ಪಾಂಡೆ ಆರೋಪಿಸಿದರು.
#वायरल वीडियो के अनुसार जरकला #प्रधान के ट्रैक्टर से हो रहा #मिट्टी का अवैध खनन @DMKanpur @dgpup
भाजपा के विधायक @BJP4Abhijeet
के रिश्तेदार बने मिट्टी के ठेकेदार @myogiadityanath
रेलवे की आड़ में निकली मिट्टी गौरिया स्थित प्लांट में डाली जा रही
संरक्षण में खड़ी @Uppolice की जीप https://t.co/07M87eULle— Divas pandey (@divaspandeynews) March 13, 2021
ಒಟ್ಟಾರೆಯಾಗಿ ಹೇಳುವುದಾದರೆ ಸಮಾಜವಾದಿ ಪಕ್ಷದ ನಾಯಕರು ನಡೆಸಿದ ರ್ಯಾಲಿಯಲ್ಲಿ “ಪಾಕಿಸ್ತಾನ್ ಬನಾನಾ ಹೈ” ಎಂಬ ಘೋಷಣೆಯನ್ನು ಕೂಗಲಾಗಿದೆ ಎಂದು ಸುಳ್ಳುಸುದ್ದಿ ಹಬ್ಬಿಸಿದ್ದಾರೆ. ಆದರೆ ಸಮಾಜವಾದಿ ಪಕ್ಷದ ರ್ಯಾಲಿಯಲ್ಲಿ “ಮಾತಿ ಚೋರ್ ಭಗಾನಾ ಹೈ” ಎಂಬ ಘೋಷಣೆಯನ್ನು ಕೂಗಲಾಗಿತ್ತು , ಬಿಜೆಪಿಯವರು ಆರೋಪಿಸುವಂತೆ ಸಮಾಜವಾದಿ ಪಕ್ಷದ ನಾಯಕರು ಯುಪಿಯನ್ನು ಪಾಕಿಸ್ತಾನ ಮಾಡುತ್ತೇವೆ ಎಂಬ ಘೋಷಣೆಯನ್ನು ಕೂಗಿಲ್ಲ ಹಾಗಾಗಿ ಬಿಜೆಪಿ ನಾಯಕರು ಸುಳ್ಳು ಸುದ್ದಿ ಹಂಚುತ್ತಿದ್ದಾರೆ ಎಂಬುದು ಫ್ಯಾಕ್ಟ್ಚೆಕ್ ಮೂಲಕ ತಿಳಿದುಬಂದಿದೆ.
ಇದನ್ನು ಓದಿ: Fact check: ಶೃಂಗೇರಿ ಪೀಠದ ಶ್ರೀಗಳು ರಾಹುಲ್ ಗಾಂಧಿಗೆ ಆಶೀರ್ವಾದ ನೀಡಲು ನಿರಾಕರಿಸಿದ್ದು ನಿಜವೆ?


Politics itself is fake..what’s the use of fact check..even media is fake almost.. times.
Why u involve in one sided fake politics always?
U better be a good opposition or join politics..daily u get good trp in marketing ur own fake politics brand..finding faults..instead guiding the ruling governments.
Always one-sided news..
Good governece sd be appreciated…irrespective of party..
Looters and anti communal, divide and rule parties, all parties hv above characters.
Be like blind judge