‘ರಾಬರ್ಟ್‘​ ಚಿತ್ರದ ಹೊಸ ಪೋಸ್ಟರ್ ಬಿಡುಗಡೆ : ರಂಜಾನ್ ಶುಭಕೋರಿದ ಚಾಲೆಂಜಿಂಗ್ ಸ್ಟಾರ್…

ಕೊರೊನಾ ಲಾಕ್ ಡೌನ್ ನಿಂದಾಗಿ ಕನ್ನಡ ಸ್ಟಾರ್ ನಟರ ಸಿನಿಮಾಗಳು ತೆರೆ ಕಾಣದೆ ಅಭಿಮಾಣಿಗಳು ನಿರಾಸೆಗೊಂಡಿದ್ದಾರೆ. ಆದರೆ ಸ್ಯಾಂಡಲ್ ವುಡ್ ಸ್ಟಾರ್ ನಟ ಚಾಲೆಂಜಿಂಗ್ ದರ್ಶನ್ ಅವರು ತಮ್ಮ ಹೊಸ ಸಿನಿಮಾ ಹೊಸ ಪೋಸ್ಟ್ ರನ್ನು  ಬಿಡುಗಡೆ ಮಾಡಿದ್ದಾರೆ.

ಹೌದು… ಇಂದು ರಂಜಾನ್ ಹಬ್ಬದ ಪ್ರಯುಕ್ತ ದಚ್ಚು ‘ರಾಬರ್ಟ್’ ಸಿನಿಮಾದ ಹೊಸ ಪೋಸ್ಟರ್ ನ್ನು ಟ್ವಿಟ್ಟರ್​ ಖಾತೆಯಲ್ಲಿ ಬಿಡುಗಡೆ ಮಾಡಿದ್ದಾರೆ. ಜೊತೆಗೆ ರಂಜಾನ್ ಹಬ್ಬದ ಶುಭಾಶಯಗಳನ್ನು ತಿಳಿಸಿದ್ದಾರೆ. ನಮ್ಮ ‘ರಾಬರ್ಟ್’ ಚಿತ್ರದ ಪೋಸ್ಟರ್ ನಿಮಗಾಗಿ. ಎಲ್ಲರ ಜೀವನಶೈಲಿ ಸಹಜ ಸ್ಥಿತಿಗೆ ಬರುತ್ತಿದ್ದಂತೆ ಚಿತ್ರವೂ ನಿಮ್ಮ ಮಡಿಲಿಗೆ ಸೇರಲಿದೆ. ಮನೆಯಲ್ಲಿ ಇರಿ , ಮನೆಯವರಿಗಾಗಿ ಜಾಗೃತರಾಗಿರಿ ಎಂದು ಬರೆದುಕೊಂಡಿದ್ದಾರೆ.

ಇನ್ನೂ ಸ್ಯಾಂಡಲ್ ವುಡ್ ನಲ್ಲಿ ದರ್ಶನ್ ಸಿನಿಮಾ ಅಂದ್ರೆ ತನ್ನದೇ ಆದ ಹವಾ ಕ್ರಿಯೇಟ್ ಮಾಡಿರುತ್ತೆ. ಹೇಳಿ ಕೇಳಿ ದಚ್ಚು ಅಭಿಮಾನಿಗಳು ಹೊಸ ಸಿನಿಮಾವನ್ನೇ ಕಾದು ನಿರೀಕ್ಷಿಸುತ್ತಿರುತ್ತಾರೆ. ಅವರಿಗೆಲ್ಲಾ ಒಂದು ಥ್ರಿಲ್ ನೀಡುವಂತಹ ಪೋಸ್ಟರ್ ಗಳು ದಚ್ಚು ಸಿನಿಮಾದಲ್ಲಿ ಯಾವಾಗಲೂ ಕಾಣಿಸಿಕೊಳ್ಳುತ್ತವೆ. ಅದೇ ರೀತಿ ಬಿಡುಗಡೆಗೆ ಸಿದ್ಧವಾದ ‘ರಾಬರ್ಟ್’ ಸಿನಿಮಾದ ಪೋಸ್ಟರ್ ಕೂಡ ಬಿಡುಗಡೆಯಾಗಿದೆ. ಅಭಿಮಾನಿಗಳು ಕೂಡ ಪೋಸ್ಟರ್ ನೋಡಿ ಸಕತ್ ಖುಷಿಪಟ್ಟಿದ್ದಾರೆ.

ಉದ್ದನೆ ಕೂದಲು, ಗಡ್ಡ  ಬಿಟ್ಟಿದ್ದು,  ಕಣ್ಣಿಗೆ ಕೂಲಿಂಗ್​ ಗ್ಲಾಸ್​ ಹಾಕಿಕೊಂಡಿರುವ ಪೋಸ್ಟರ್​ ಇದಾಗಿದೆ. ಈ ಹಿಂದೆ ರಾಮನವಮಿ ಪ್ರಯುಕ್ತ ‘ರಾಬರ್ಟ್‘​ ಚಿತ್ರತಂಡ ‘ಜೈ ಶ್ರೀರಾಮ್​​ ‘ಹಾಡಿನ ಹೊಸ ವರ್ಷನ್​ ಬಿಡುಗಡೆ ಮಾಡಿದ್ದರು.  ಇದೀಗ ರಂಜಾನ್​ ಹಬ್ಬದ ಪ್ರಯುಕ್ತ  ಹೊಸ ಪೋಸ್ಟರ್​ ಬಿಡುಗಡೆ ಮಾಡಿದ್ದಾರೆ. ಕಳದ ತಿಂಗಳೇ ಬಿಡುಗಡೆಯಾಗಬೇಕಿದ್ದ ‘ರಾಬರ್ಟ್’ ಸಿನಿಮಾ ಕೊರೊನಾ ದಿಂದಾಗಿ ಮುಂದೂಡಲ್ಪಟ್ಟಿದೆ. ಆದರೆ ದರ್ಶನ್ ಅವರು ಹೇಳಿದಂತೆ ಜನಜೀವನ ಸಹಜಸ್ಥಿತಿಗೆ ಬಂದ ಬಳಿಕ ಸಿನಿಮಾ ಬಿಡುಗಡೆ ಮಾಡಲಾಗುವುದು ಸದ್ಯ ಪೋಸ್ಟರ್ ನೋಡಿ ಅಭಿಮಾನಿಗಳಿಗೆ ಸಿನಿಮಾ ಬಗ್ಗೆ ಭಾರೀ ಕುತೂಹಲ ಉಂಟಾಗಿದೆ.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights