ಫ್ಯಾಕ್ಟ್‌ಚೆಕ್: ಭೀಮಾ ಕೋರೆಗಾಂವ್ ಯುದ್ದದಲ್ಲಿ ಭಾಗಿಯಾಗಿದ್ದ ಮಹರ್ ಸೈನಿಕನ ಚಿತ್ರ ಎಂದು ಸಂಬಂಧವಿಲ್ಲದ ಫೋಟೊ ಹಂಚಿಕೆ

ಮೂವತ್ತು ಸಾವಿರ ಸೈನಿಕರನ್ನು ಕೇವಲ ಐನೂರು ಜನ ಸೈನಿಕರು ಸೇರಿಕೊಂಡು ಸೋಲಿಸಿದ ಕದನ. ಪೇಶ್ವೆಗಳ ಆಡಳಿತದಲ್ಲಿದ್ದ ಜಾತಿ, ಅಸ್ಪೃಶ್ಯತೆ, ಮೇಲು ಕೀಳುಗಳ ವಿರುದ್ಧ ಸೆಟೆದು ನಿಂತು ಮಾನವೀಯ ಮೌಲ್ಯಗಳನ್ನು ಪಡೆದುಕೊಳ್ಳಲು ಹಂಬಲಿಸುವ ಮಹರ್ ಸೈನಿಕರ ಧೈರ್ಯ ಸಾಹಸ, ಕೆಚ್ಚೆದೆಯ ಹೋರಾಟ. ಶೋಷಿತರು ಮೇಲ್ಜಾತಿ ಶೋಷಕರ ವಿರುದ್ಧ, ಅವರ ಶೋಷಣೆಯ ನಡವಳಿಕೆಯ ವಿರುದ್ಧ ಯುದ್ಧ ಘೋಷಿಸಿ, ಗೆಲುವು ಗೆಲುವನ್ನು ಪಡೆದು ಅದು ಇತಿಹಾಸದಲ್ಲಿ ‘ಭೀಮಾ ಕೋರೆಗಾಂವ್ ಯುದ್ಧ’ವೆಂದೇ ಪ್ರಸಿದ್ಧವಾಗಿದೆ.

ಭೀಮಾ ಕೋರೇಗಾಂವ್ ಯುದ್ದದಲ್ಲಿ ಪೇಶ್ವೆಗಳನ್ನು ಸೋಲಿಸಿದ ಮಹರ್ ಸೈನಿಕರಲ್ಲಿ ಇವರೂ ಇದ್ದರು ಎಂದು ಪ್ರತಿಪಾದಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ಫೋಟೋವನ್ನು ಹಂಚಿಕೊಳ್ಳಲಾಗುತ್ತಿದೆ. ಜನವರಿ 1, 1818 ರಂದು, ಕೋರೆಗಾಂವ್ ಕದನವು ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿ ಮತ್ತು ಮರಾಠಾ ಒಕ್ಕೂಟದ ಪೇಶ್ವೆ ಬಣಗಳ ನಡುವೆ ಕೋರೆಗಾಂವ್ ಭೀಮಾದಲ್ಲಿ ನಡೆಯಿತು. ಕೋರೆಗಾಂವ್ ಕದನದಲ್ಲಿ ಹೋರಾಡಿದ ಮಹಾರ್ ಜಾತಿಯ ಸೈನಿಕ ಎಂದು ಹೇಳುವ ಬುಡಕಟ್ಟು ವ್ಯಕ್ತಿಯ ಚಿತ್ರವನ್ನು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ.

“ಭೀಮಾ ಕೋರೆಗಾಂವ್ ಯುದ್ಧದಲ್ಲಿ ಮಹಾರ್ ಸೈನಿಕನೊಬ್ಬನ ಶೌರ್ಯವನ್ನು ತೋರಿಸುವ ಅಪರೂಪದ ಫೋಟೋ, ಆಗಿನ ಈಸ್ಟ್ ಇಂಡಿಯಾ ಕಂಪನಿಯ ಸಲಹೆಗಾರ ಡೇವಿ ಜೋನ್ಸ್ ಅವರ ಡೈರಿಯಿಂದ ಪಡೆಯಲಾಗಿದೆ ”, ಎಂಬ ಶೀರ್ಷಿಕೆಯೊಂದಿಗೆ ಹಂಚಿಕೊಳ್ಳಲಾಗಿದೆ. ಹಾಗಿದ್ದರೆ ಈ ಸುದ್ದಿ ನಿಜವೇ ಎಂದು ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆಯನ್ನು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್:

ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿರುವ ಮಹಾರ್ ಸೈನಿಕನ ಫೋಟೊ ಎಂದು ಪ್ರತಿಪಾದಿಸಿ ಹಂಚಿಕೊಳ್ಳಲಾದ ಪೋಸ್ಟ್‌ಅನ್ನು ಪರಿಶೀಲಿಸಲು ಗೂಗಲ್ ರಿವರ್ಸ್ ಇಮೇಜ್‌ನಲ್ಲಿ ಸರ್ಚ್ ಮಾಡಿದಾಗ, ಅಲಾಮಿಯ ವೆಬ್‌ಸೈಟ್‌ ಅದೇ ಚಿತ್ರವನ್ನು ಪ್ರಕಟಿಸಿದ್ದು, ಇದು ಪ್ರಿನ್ಸ್ ನಡಬುಕೊ ಕಾಂಪಾಂಡೆ ಅವರ ಚಿತ್ರ ಎಂಬ ಮಾಹಿತಿಯೊಂದಿಗೆ ಫೋಟೋವನ್ನು ಪ್ರಕಟಿಸಿದೆ. 1873 ರಿಂದ 1879 ರವರೆಗೆ ಜುಲು ಸಾಮ್ರಾಜ್ಯದ ರಾಜನಾಗಿದ್ದ ರಾಜ ಸೆತ್ಶ್ವಾಯೊ ಕಾಂಪಾಂಡೆ ಅವರ ಕಿರಿಯ ಸಹೋದರ ಮತ್ತು 1879 ರ ಆಂಗ್ಲೋ-ಜುಲು ಯುದ್ಧದ ಸಮಯದಲ್ಲಿ ಅದರ ನಾಯಕತ್ವ ವಹಿಸಿದ್ದನು ಎಂದು ಹೇಳಲಾಗಿದೆ.

ವಿಕಿಮೀಡಿಯಾದಲ್ಲಿನ ಅದೇ ಚಿತ್ರವನ್ನು “ರಾಜ ಸೆತ್ಶ್ವಾಯೊ ಕಾಂಪಾಂಡೆಯನ್ನು ತೋರಿಸುತ್ತಿರುವ ಛಾಯಾಚಿತ್ರವು ವಾಸ್ತವವಾಗಿ 1880 ರ ದಶಕದ ಮಧ್ಯಭಾಗದಲ್ಲಿದ್ದ ಅವನ ಕಿರಿಯ ಸಹೋದರ ಪ್ರಿನ್ಸ್ ಎನ್ಡಬುಕೊ ಕಾಮ್ಪಾಂಡೆ ” ಎಂದು ಉಲ್ಲೇಖಿಸಲಾಗಿದೆ.

ರಾಯಲ್ ಕಲೆಕ್ಷನ್ ಟ್ರಸ್ಟ್‌ನ ವೆಬ್‌ಸೈಟ್‌ನ ಪ್ರಕಾರ, “ಸೆಟ್ಶ್ವಾಯೊ ಕಾ ಎಂಪಾಂಡೆ 1872 ರಿಂದ 1879 ರವರೆಗೆ ಜುಲುಸ್ ರಾಜನಾಗಿದ್ದನು. ಜುಲೈ 1879 ರಲ್ಲಿ ಆಂಗ್ಲೋ-ಜುಲು ಯುದ್ಧದಲ್ಲಿ ಅವನ ಸೋಲಿನ ನಂತರ, ಅವನನ್ನು ಮೊದಲು ಕೇಪ್ ಟೌನ್‌ಗೆ ಮತ್ತು ನಂತರ ಆಗಸ್ಟ್ 1882 ರಲ್ಲಿ ಲಂಡನ್‌ಗೆ ಗಡಿಪಾರು ಮಾಡಲಾಯಿತು ” . ಎಂದು ಹೇಳಲಾಗಿದೆ.

ಒಟ್ಟಾರೆಯಾಗಿ ಹೇಳುವುದಾದರೆ, ಅವನ ಕಿರಿಯ ಸಹೋದರ ಪ್ರಿನ್ಸ್ ಎನ್ಡಬುಕೊ ಕಾಮ್ಪಾಂಡೆ ಅವರ 1880 ರ ಸಂದರ್ಭದ ಚಿತ್ರವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡು ಭೀಮಾ ಕೋರೇಗಾಂವ್ ಯುದ್ದದಲ್ಲಿ ಪೇಶ್ವೆಗಳನ್ನು ಸೋಲಿಸಿದ ಮಹರ್ ಸೈನಿಕನೊಬ್ಬನ ಚಿತ್ರ ಎಂದು ಸುಳ್ಳು ಪ್ರತಿಪಾದನೆಯೊಂದಿಗೆ ಹಂಚಿಕೊಳ್ಳಲಾಗಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆ ತಪ್ಪಾಗಿದೆ.

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ: ಫ್ಯಾಕ್ಟ್‌ಚೆಕ್: ದೆವ್ವ ನೋಡಿ ಮೂರ್ಛೆ ಎಂದು ಅನಿಮೇಟೆಡ್ ವಿಡಿಯೋ ಹಂಚಿಕೆ


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights