ಫ್ಯಾಕ್ಟ್‌ಚೆಕ್ : ನಟಿ ಸನ್ನಿ ಲಿಯೋನ್ ನೋಡಲು ಸೇರಿದ ಜನ ಸಾರಗದ ಫೋಟೊವನ್ನು ಪ್ರಧಾನಿ ಮೋದಿಯನ್ನು ನೋಡಲು ಸೇರಿದ್ದಾರೆ ಎಂದು ತಪ್ಪಾಗಿ ಹಂಚಿಕೆ

ಕೇರಳದ ಮೊದಲ ‘ವಂದೇ ಭಾರತ್ ಎಕ್ಸ್‌ಪ್ರೆಸ್‘ ರೈಲಿಗೆ ತಿರುವಂತನಪುರದಲ್ಲಿ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದ್ದಾರೆ. ಈ ರೈಲು ತಿರುವನಂತಪುರ ಮತ್ತು ಕಾಸರಗೋಡು ನಡುವೆ ಚಲಿಸಲಿದೆ. ಕೇರಳಕ್ಕೆ ಎರಡು ದಿನಗಳ ಭೇಟಿ ನೀಡಿದ ಪ್ರಧಾನಿ, ಕೇಂದ್ರದ ವಿವಿಧ ಯೋಜನೆಗಳಿಗೆ ರಾಜ್ಯದಲ್ಲಿ ಚಾಲನೆ ನೀಡಿದ್ದಾರೆ.

https://twitter.com/kurukshetra77/status/1650715997794607105

ಪ್ರಧಾನಿ ಮೋದಿಯವರ ಭೇಟಿಯ ಸಮಯದಲ್ಲಿ ಕೊಚ್ಚಿಯ ರಸ್ತೆಗಳಲ್ಲಿ ಬೃಹತ್ ಜನಸಮೂಹದೊಂದಿಗೆ ಪ್ರಧಾನಿ ಮೋದಿಗೆ ಕೇರಳದಲ್ಲಿ ಅಭೂತಪೂರ್ವ ಸ್ವಾಗತ ಸಿಕ್ಕಿದೆ ಎಂದು ಪ್ರತಿಪಾದಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ಫೋಟೋ ಮತ್ತು ವಿಡಿಯೋಗಳನ್ನು  ಹಂಚಿಕೊಳ್ಳಲಾಗುತ್ತಿದೆ. ತಿರುವನಂತಪುರ ವಿಮಾನ ನಿಲ್ದಾಣದಲ್ಲಿ ಇಳಿದ ಮೋದಿ ಸೆಂಟ್ರಲ್‌ ರೈಲು ನಿಲ್ದಾಣದವರೆಗೆ ರೋಡ್‌ ಶೋ ಕೂಡ ನಡೆಸಿದ್ದಾರೆ. ಹಾಗಿದ್ದರೆ ಕೇರಳಕ್ಕೆ ಮೋದಿ ಭೇಟಿ ನೀಡಿದ ಸಂದರ್ಭದಲ್ಲಿ ಭಾರೀ ಜನಸ್ತೋಮ ಸೇರಿದ್ದು ನಿಜವೇ ಎಂದು ಸೋಶಿಯಲ್ ಮೀಡಿಯಾದಲ್ಲಿ ಮಾಡಲಾದ ಪ್ರತಿಪಾದನೆಯನ್ನು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಏಪ್ರಿಲ್ 24 ಮತ್ತು 25 ಪ್ರಧಾನಿ ಮೋದಿ ಎರಡು ದಿನಗಳ ಕೇರಳ ಭೇಟಿಗೆಂದು ಆಗಮಿಸಿ ಕೊಚ್ಚಿಯಲ್ಲಿ ರೋಡ್‌ ಶೋ ನಡೆಸಿದ್ದಾರೆ. ರೋಡ್‌ ಶೋ ಸಂದರ್ಭದಲ್ಲಿ ಮೋದಿಯವರನ್ನು ಹೂ ಮಳೆಗರೆದು ಸ್ವಾಗತಿಸಿರುವುದು ನಿಜ.

ಆದರೆ, ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗಿರುವ ಫೋಟೋವನ್ನು ಪರಿಶೀಲಿಸಿದಾಗ, ವೈರಲ್ ಆಗಿರುವ ವಿಡಿಯೋ ಮತ್ತು ಫೋಟೊಗಳು ಮೋದಿಯವರನ್ನು ಸ್ವಾಗತಿಸಿರುವ ಫೋಟೊ ಅಲ್ಲ ಎಂದು ಸ್ಪಷ್ಟವಾಗಿದೆ. ಈ ಫೋಟೋ 2017 ರಲ್ಲಿ ಬಾಲಿವುಡ್ ನಟಿ ಸನ್ನಿ ಲಿಯೋನ್ ಮೊಬೈಲ್ ಶೋರೂಂ ಒಂದನ್ನು ಉದ್ಘಾಟಿಸಲು ಕೇರಳದ ಕೊಚ್ಚಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಸೆರೆಹಿಡಿಯಲಾದ ಚಿತ್ರ ಎಂದು ಫ್ಯಾಕ್ಟ್‌ಲಿ ವರದಿ ಮಾಡಿದೆ.

Image

ವರದಿಯ ಪ್ರಕಾರ, ಬಾಲಿವುಡ್ ನಟಿ ಸನ್ನಿ ಲಿಯೋನ್ 2017 ರ ಆಗಸ್ಟ್‌ನಲ್ಲಿ ಮೊಬೈಲ್ ಮಳಿಗೆಯನ್ನು ಉದ್ಘಾಟಿಸಲು ಕೊಚ್ಚಿಗೆ ಭೇಟಿ ನೀಡಿದ್ದರು,  ಅವರನ್ನು ನೋಡಲು ಸನ್ನಿಯ ಅಪಾರ ಅಭಿಮಾನಿಗಳು ಅಲ್ಲಿ ನೆರೆದಿದ್ದರು. ಅದೇ ಚಿತ್ರವನ್ನು ನಟಿ ಸನ್ನಿ ಲಿಯೋನ್ ತನ್ನ ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿ ಎಲ್ಲರಿಗೂ ಧನ್ಯವಾದ ಹೇಳಿದ್ದಾರೆ.

Kochi Goes Crazy For Sunny Leone - YouTube
ಪ್ರಧಾನಿ ನರೇಂದ್ರ ಮೋದಿಯವರು 24 ಏಪ್ರಿಲ್ 2023 ರಂದು ಕೊಚ್ಚಿಯಲ್ಲಿ ರೋಡ್‌ಶೋ ನಡೆಸಿದ ರಸ್ತೆಯ ಬದಿಗಳಲ್ಲಿ ಜನ ಜಮಾಯಿಸಿ  ಅವರನ್ನು ಸ್ವಾಗತಿಸಿರುವುದು ನಿಜ. ಆದರೆ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿರುವ ಫೋಟೊ 2017ರ ಲ್ಲಿ ನಟಿ ಸನ್ನಿ ಲಿಯೋನ್ ಕೊಚ್ಚಿಗೆ ಭೇಟಿ ನೀಡಿದ ಸಂದರ್ಭದ್ದು.

ಒಟ್ಟಾರೆಯಾಗಿ ಹೇಳುವುದಾದರೆ, ಸನ್ನಿ ಲಿಯೋನ್ ಅವರ ಕೊಚ್ಚಿ ಭೇಟಿಯ ಹಳೆಯ ಫೋಟೋವನ್ನು, ಪ್ರಧಾನಿ ನರೇಂದ್ರ ಮೋದಿಯವರ ಕೊಚ್ಚಿ ರೋಡ್‌ಶೋ ಸಮಯದಲ್ಲಿ ಸೆರೆಹಿಡಿಯಲಾದ ಭಾರೀ ಜನಸ್ತೋಮದ ಚಿತ್ರ ಎಂದು ತಪ್ಪಾಗಿ ಹಂಚಿಕೊಂಡಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆ ತಪ್ಪಾಗಿದೆ.

ಕೃಪೆ : ಫ್ಯಾಕ್ಟ್‌ಲಿ

ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : ಫ್ಯಾಕ್ಟ್‌ಚೆಕ್ : BJP ಗೆ ಮತ ಹಾಕಬೇಡಿ ಎಂದು NRIಗಳು ಪ್ರಚಾರ ಮಾಡುತ್ತಿರುವ ವಿಡಿಯೋದ ಅಸಲೀಯತ್ತೇನು?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights