ಜೈಲು ಹಕ್ಕಿಯಾಗಿದ್ದ ರಾಗಿಣಿಗೆ ಇಂದೂ ಇಲ್ಲ ಬಿಡುಗಡೆ ಭಾಗ್ಯ : ಕಾದು ಕಾದು ಸುಸ್ತಾದ ತಾಯಿ!

ಸ್ಯಾಂಡಲ್ ವುಡ್ ಡ್ರಗ್ ಕೇಸ್ ನಲ್ಲಿ  ಕಳೆದ 140 ದಿನಗಳಿಂದ ಜೈಲುವಾಸ ಅನುಭವಿಸುತ್ತಿದ್ದ ನಟಿ ರಾಗಿಣಿ ದ್ವಿವೇದಿಗೆ ಜಾಮೀನು ಸಿಕ್ಕರು ಬಿಡುಗಡೆ ಭಾಗ್ಯ ಮಾತ್ರ ಸಿಕ್ಕಲ್ಲ.

ಹೌದು.. ನಿನ್ನೆಯಷ್ಟೇ ನಟಿ ರಾಗಿಣಿಗೆ ಸುಪ್ರೀ ಕೋರ್ಟ್ ಜಾಮೀನು ನೀಡಿತ್ತು.  ಮಗಳ ಆಗಮನಕ್ಕಾಗಿ ಕಾದು ಕುಳಿತ ಪೋಷಕರು ಬೇಸರಗೊಂಡಿದ್ದಾರೆ. ಜೊತೆಗೆ ಹೊರಬರುವ ಸಂತಸದಲ್ಲಿದ್ದ ರಾಗಿಣಿಗೆ ನಿರಾಸೆಯಾಗಿದೆ. ಜಾಮೀನು ಪ್ರತಿ ವಕೀಲರ ಕೈಗೆ ಸೇರದ ಹಿನ್ನೆಲೆ ಇವತ್ತೂ ಕೂಡ ಜೈಲಿಯಿಂದ ಹೊರಬರುವುದ ಅನುಮಾನವಿದೆ.

ಹೀಗಾಗ ಇಂದು ತುಪ್ಪದ ಹುಡುಗಿಗೆ ಬಿಡುಗಡೆ ಭಾಗ್ಯ ಕೈಗೆಟುವ ಸಾಧ್ಯತೆ ತೀರಾ ಕಡಿಮೆ ಇದೆ ಎನ್ನಲಾಗುತ್ತಿದೆ. ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ಪೊಲೀಸರು ರಾಗಿಣಿಯನ್ನು ಬಂಧಿಸಿದ್ದರು. ಯಾವ ಆರೋಗ್ಯ ಕಾರಣಗಳನ್ನು ಮುಂದಿಟ್ಟರು ರಾಗಿಣಿಗೆ ಮಾತ್ರ ಜಾಮೀನು ಸಿಕ್ಕಿರಲಿಲ್ಲ.

ರಾಗಿಣಿ ವಿರುದ್ಧ ಎನ್‌ಡಿಪಿಎಸ್ ಮತ್ತು ಐಪಿಸಿ ಕಾಯಿದೆಗಳ ಅಡಿಯಲ್ಲಿ ಪ್ರಕರಣಗಳು ದಾಖಲಾಗಿವೆ. ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದ ರಾಗಿಣಿ, ಕೆಳ ನ್ಯಾಯಾಲಯದಲ್ಲಿ ಜಾಮೀನು ಸಿಗದ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. ಇಂದು ಜೈಲು ಹಕ್ಕಿ ಹೊರ ಹಾರಿಬರಲಿದೆ ಅಂದುಕೊಳ್ಳುವ ಹೊತ್ತಿಗೆ ನಿರಾಸೆ ಉಂಟಾಗಿದೆ.

 

Spread the love

Leave a Reply

Your email address will not be published. Required fields are marked *