ಮುಗಿಯದ ಖಾತೆ ಕ್ಯಾತೆ – ಖಾತೆ ಅದಲು ಬದಲು : ಸಮಾಧಾನವಾಗಿಲ್ವಾ ಆರ್ ಶಂಕರ್?

ಸಿಎಂ ಬಿಎಸ್ ಯಡಿಯೂರಪ್ಪ ಸಂಪುಟ ಸೇರಿದ ಸಪ್ತ ಸಚಿವರಿಗೆ ಖಾತೆ ಹಂಚಿಕೆಯಾದರೂ ಕೊಟ್ಟಂತ ಖಾತೆಗಳು ಅದಲು ಬದಲು ಮಾಡಲಾಗಿದೆ.

ನಿನ್ನೆಯಷ್ಟೇ ನೂತನ ಸಚಿವರಿಗೆ ಖಾತೆ ಹಂಚಿಕೆ ಮಾಡಲಾಗಿತ್ತು. ಇದರಲ್ಲಿ ಈಗಾಗಲೇ ಸಚಿವರಿಗೆ ಕೊಟ್ಟಂತ ಹೆಚ್ಚುವರಿ ಖಾತೆಗಳನ್ನು ಹಿಂಪಡೆದು ನೂತನ ಸಚಿವರಿಗೆ ನೀಡಲಾಗಿತ್ತು. ಇದರಿಂದ ಉನ್ನತ ಖಾತೆ ಪಡೆಯುವ ಆಕಾಂಕ್ಷೆಯಲ್ಲಿದ  ಸಚಿವರು ಬೇಸರ ವ್ಯಕ್ತಪಡಿಸಿದ್ದರು. ಸಚಿವ ಸುಧಾಕರ ಮನೆಯಲ್ಲಿ ಸುಧೀರ್ಘ ಚರ್ಚೆ ಕೂಡ ಮಾಡಲಾಗಿತ್ತು. ಇದರ ಬೆನ್ನಲ್ಲೆ ಸಿಎಂ ಯಡಿಯೂರಪ್ಪ ಇಂದು ಖಾತೆ ಅದಲು ಬದಲು ಮಾಡಿದ್ದಾರೆ. ನಿನ್ನೆ ನೂತನ ಸಚಿವರಿಗೆ ಆಖತೆ ನೀಡುವ ಮೂಲಕ ಕೆಲ ಸಚಿವರ ಖಾತೆ ಬದಲಾವಣೆಯಾಗಿತ್ತು. ಖಾತೆ ಬದಲಾವಣೆ ವಿವರ ಇಲ್ಲಿದೆ.

1) ಲಿಂಬಾವಳಿ – ಅರಣ್ಯ
2) ಎಂಟಿಬಿ ನಾಗರಾಜ್ – ಅಬಕಾರಿ
3) ಉಮೇಶ್ ಕತ್ತಿ – ಆಹಾರ ಮತ್ತು ನಾಗರಿಕ ಪೂರೈಕೆ
4) ಮುರುಗೇಶ್ ನಿರಾಣಿ – ಗಣಿಗಾರಿಕೆ
5) ಸಿಪಿ ಯೋಗೇಶ್ವರ್ – ಸಣ್ಣ ನೀರಾವರಿ6) ಎಸ್ ಅಂಗಾರ – ಮೀನುಗಾರಿಕೆ ಮತ್ತು ಬಂದರು
7) ಆರ್ ಶಂಕರ್ – ಪೌರಾಡಳಿತ ಮತ್ತು ರೇಷ್ಮೆ

ಹಾಲಿ ಸಚಿವರ ಖಾತೆ ಅದಲುಬದಲು:
ಡಾ ಸುಧಾಕರ್ – ಆರೋಗ್ಯ (ವೈದ್ಯಕೀಯ ಶಿಕ್ಷಣ ಖಾತೆ ಹಿಂಪಡೆಯಲಾಗಿದೆ)
ಆನಂದ್ ಸಿಂಗ್ – ಪ್ರವಾಸೋದ್ಯಮ ಮತ್ತು ಪರಿಸರ (ಹಿಂದೆ ಅರಣ್ಯ ಇಲಾಖೆ ಹೊಂದಿದ್ದರು)
ಪ್ರಭು ಚವಾಣ್ – ಪಶು ಸಂಗೋಪಣೆ (ವಕ್ಫ್ ಮತ್ತು ಹಜ್ ಖಾತೆ ಕೈತಪ್ಪಿದೆ)
ಗೋಪಾಲಯ್ಯ – ತೋಟಗಾರಿಕೆ ಮತ್ತು ಸಕ್ಕರೆ (ಆಹಾರ-ನಾಗರಿಕ ಸರಬರಾಜು ಖಾತೆ ಇತ್ತು)
ನಾರಾಯಣಗೌಡ – ಯುವಜನ ಸೇವೆ ಮತ್ತು ಕ್ರೀಡೆ (ಪೌರಾಡಳಿತ, ತೋಟಗಾರಿಕೆ, ರೇಷ್ಮೆ ಖಾತೆ ಹೊಂದಿದ್ದರು)
ಬಸವರಾಜ ಬೊಮ್ಮಾಯಿ – ಗೃಹ, ಕಾನೂನು ಮತ್ತು ಸಂಸದೀಯ ವ್ಯವಹಾರ (ಹೆಚ್ಚುವರಿ)
ಮಾಧುಸ್ವಾಮಿ – ವೈದ್ಯಕೀಯ, ಕನ್ನಡ ಮತ್ತು ಸಂಸ್ಕೃತಿ (ಕಾನೂನು, ಸಂಸದೀಯ ವ್ಯವಹಾರ, ಸಣ್ಣ ನೀರಾವರಿ ಖಾತೆ ಹೊಂದಿದ್ದರು)
ಸಿಸಿ ಪಾಟೀಲ್ – ಸಣ್ಣ ಕೈಗಾರಿಕೆ ಮತ್ತು ವಾರ್ತಾ ಇಲಾಖೆ (ಗಣಿಗಾರಿಕೆ ಖಾತೆ ಕೈತಪ್ಪಿದೆ)
ಕೋಟ ಶ್ರೀನಿವಾಸ ಪೂಜಾರಿ – ಮುಜರಾಯಿ ಮತ್ತು ಹಿಂದುಳಿದ ವರ್ಗ (ಮೀನುಗಾರಿಕೆ ಮತ್ತು ಬಂದರು ಖಾತೆ ಹೊಂದಿದ್ದರು

ಈಗ ಆದ ಬದಲಾವಣೆ :

ಆದರೆ ಸಚಿವ ಸಂಪುಟ ವಿಸ್ತರಣೆ ಬಳಿಕ ಖಾತೆ ಹಂಚಿಕೆ ವೇಳೆ ಭುಗಿಲೆದ್ದಿದ್ದ ಅಸಮಾಧಾನ ಶಮನಗೊಳಿಸುವ ಸಂಬಂಧ ಸಿಎಂ ಬಿಎಸ್ ಯಡಿಯೂರಪ್ಪ ಅವರು ಸಚಿವರ ಖಾತೆ ಹಂಚಿಕೆಯಲ್ಲಿ ಸಣ್ಣ ಬದಲಾವಣೆ ಮಾಡಿ ಆದೇಶ ಹೊರಡಿಸಿದ್ದಾರೆ.

ಎಂಟಿಬಿ ನಾಗರಾಜ್ – ಪೌರಾಳಿಡತ ಮತ್ತು ಸಕ್ಕರೆ ಖಾತೆ                                                                                                                                                                                                            ಗೋಪಾಲಯ್ಯ – ಅಬಕಾರಿ ಖಾತೆ                                                                                                                                                                                                                                                              ಜೆಸಿ ಮಾಧುಸ್ವಾಮಿ -ವೈದ್ಯಕೀಯ ಶಿಕ್ಷಣ ಇಲಾಖೆಯ ಜೊತೆ ಹಜ್ ಮತ್ತು ವಕ್ಫ್

ಕೆಸಿ ನಾರಾಯಣ ಗೌಡ-ಯುವ ಸಬಲೀಕರಣ ಮತ್ತು ಕ್ರೀಡಾ
ಅರವಿಂದ ಲಿಂಬಾವಳಿ – ಅರಣ್ಯ ಇಲಾಖೆಯ ಜೊತೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ
ಆರ್ ಶಂಕರ್ – ತೋಟಗಾರಿಕೆ ಮತ್ತು ರೇಷ್ಮೆ ಇಲಾಖೆ
ಆದರೆ ಆರ್ ಶಂಕರ್ ಇನ್ನೂ ಸಮಾಧಾನಗೊಂಡಂತೆ ಕಾಣುತ್ತಿಲ್ಲ. ಅವರಿಗೆ ನೀಡಿದ ಖಾತೆ ತೃಪ್ತದಾಯಕವಲ್ಲ ಎಂಬಂತೆ ಅವರ ನಡೆ ಕಂಡುಬಂದಿದೆ. ಇನ್ನುಳಿದಂತೆ ಯಾರೂ ಕೂಡ ಖಾತೆ ಬಗ್ಗೆ ಚಕಾರ ಎತ್ತಿಲ್ಲ. ಇಲ್ಲಿಗೆ ಖಾತೆ ಕ್ಯಾತೆ ಮುಗಿಯುತ್ತಾ ಅಥವಾ ಮುಂದುವರೆಯುತ್ತಾ ಅನ್ನೋದುನ್ನ ಕಾದು ನೋಡಬೇಕಿದೆ.
ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights